ಸ್ಮಿತಾ ಪಾಟೀಲ್ ಜನ್ಮದಿನ : ಪತ್ನಿಯ ನೆನೆದು ಪತಿ ರಾಜ್ ಬಬ್ಬರ್ ಟ್ವೀಟ್
ನವದೆಹಲಿ, ಅ 17 :ಸ್ಮಿತಾ ಪಾಟೀಲ್ ಅವರ 65ನೇ ಜನ್ಮದಿನದಂದು ನಟ-ರಾಜಕಾರಣಿ ರಾಜ್ ಬಬ್ಬರ್ ಅವರು ತಮ್ಮ ಪತ್ನಿಯನ್ನು ಸ್ಮರಿಸಿದ್ದಾರೆ. 'ಹೋಲಿಸಲಾಗದ ಪ್ರತಿಭೆಪೂರ್ಣ ಕಲಾವಿದೆ' ನನ್ನ ಜೀವನದಲ್ಲಿ ಅವರ ಪ್ರಭಾವವು ಸಾಕಷ್ಟು ಅರ್ಥಪೂರ್ಣವಾಗಿದೆ. ಕಡಿಮೆ ಜೀವಿತಾವಧಿಯಲ್ಲಿಯೇ ಬಹುತೇಕರಿಗೆ ಸ್ಫೂರ್ತಿಯಾದಿರಿ’ ಎಂದು ರಾಜ್ ಬಬ್ಬರ್ ಟ್ವೀಟ್ ಮಾಡಿದ್ದಾರೆ.
ಈ ಸಂದರ್ಭದಲ್ಲಿ ನಟಿಯನ್ನು ನೆನಪಿಸಿಕೊಂಡ ಅಖಿಲ ಭಾರತ ಮಹಿಳಾ ಕಾಂಗ್ರೆಸ್, '' ಸ್ಮಿತಾ ಪಾಟೀಲ್ ಅವರ ಸಿನಿಮೀಯ ಪ್ರತಿಭೆಯನ್ನು ಅವರ ಜನ್ಮ ದಿನಾಚರಣೆಯಂದು ನಾವು ಗೌರವಿಸುತ್ತೇವೆ. ಮಹಿಳಾ ಸಮಸ್ಯೆಗಳ ಪ್ರಗತಿಗೆ ಅವರು ತೀವ್ರವಾಗಿ ಬದ್ಧರಾಗಿದ್ದರು ಮತ್ತು ಸಮಾಜದಲ್ಲಿ ಮಹಿಳೆಯರ ಪಾತ್ರ, ಅವರ ಲೈಂಗಿಕತೆ ಮತ್ತು ಮಧ್ಯಮ ವರ್ಗದವರು ಎದುರಿಸುತ್ತಿರುವ ಬದಲಾವಣೆಗಳನ್ನು ಅನ್ವೇಷಿಸಲು ಪ್ರಯತ್ನಿಸಿದ ಚಲನಚಿತ್ರಗಳಲ್ಲಿ ಅಭಿನಯಿಸಲು ಇಚ್ಛಿಸುತ್ತಿದ್ದರು” ಎಂದು ತಿಳಿಸಿದೆ.