ಜಾನುವಾರುಗಳಿಗೆ ಚರ್ಮ ಗಂಟು ರೋಗ: ಸಂತೋಷ್ ಕುಮಾರ್ ವಿಷಾದ
ರಾಣೆಬೆನ್ನೂರು 07: ಎತ್ತುಗಳು ರೈತರ ಜೀವನಾಡಿ, ತಮ್ಮ ಜೀವನದುದ್ದಕ್ಕೂ, ಕೃಷಿಯನ್ನೇ ನಂಬಿ ಬದುಕಿದ ರೈತ ಸಮುದಾಯ ಇಂದು ದೀಡೀರನೆ ಬಂದೆರಗಿದ ಚರ್ಮ ಗಂಟು ರೋಗವು ರೈತರ ಜಂಘಾಬಲವನ್ನೇ ಉಳಿದಂತಾಗಿದೆ ಎಂದು ನವಯುಗ ಅಧ್ಯಕ್ಷ, ಯುವ ಮುಖಂಡ ಸಂತೋಷ್ ಕುಮಾರ್ ಪಾಟೀಲ್ ವಿಷಾದಿಸಿದರು. ಅವರು ಗುರುವಾರ ಮುಂಜಾನೆ, ಇಲ್ಲಿನ ಸಾರ್ವಜನಿಕ ಸರ್ಕಾರಿ ಪಶು ಆಸ್ಪತ್ರೆ ಆವರಣದಲ್ಲಿ, ನಡೆದ ಚರ್ಮ ಗಂಟು ರೋಗ, ಪಡೆಯುವ ಸೂಕ್ಷ್ಮ ಓಷಧಿಗಳ ಕೀಟಗಳನ್ನು ವಿತರಿಸಿ ಮಾತನಾಡಿದರು. ತಾಲೂಕಿನಲ್ಲಿ 3000ಕ್ಕೂ ಹೆಚ್ಚು ಜಾನುವಾರುಗಳು ಈ ರೋಗಕ್ಕೆ ತುತ್ತಾಗಿದ್ದು, ರೈತರು ಅಪಾರ ನಷ್ಟ ಅನುಭವಿಸುವ ಸ್ಥಿತಿಯಲ್ಲಿ ಇದ್ದಾರೆ. ರೋಗಹರಡದಂತೆ ಮುಂಜಾಗ್ರತ ಕ್ರಮವಹಿಸುವ, ಪೂರ್ವಭಾವಿ ನೀಡುವ ಓಷಧೀಯ ಕೀಟಗಳನ್ನು, ಪಶುವೈದ್ಯರ, ಸಲಹೆ ಮತ್ತು ಮಾರ್ಗದರ್ಶನದಂತೆ, ವಿತರಿಸಲು ಕ್ರಮ ಕೈಗೊಂಡಿದ್ದೇವೆ. ತಾಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಎತ್ತುಗಳಲ್ಲಿ ಈ ಗಂಟು ಚರ್ಮರೋಗ ಎದ್ದು ಕಾಣುತ್ತದೆ. 16 ಭಾಗಗಳಲ್ಲಿ ಓಷಧಿ ಕಿಟ್ಟುಗಳನ್ನು ವಿತರಿಸಲು ಕ್ರಮ ಕೈಗೊಂಡಿದ್ದೇವೆ.
ಸಂಪೂರ್ಣ ಉಚಿತವಾಗಿದ್ದು, ರೈತ ಸಮುದಾಯಕ್ಕೆ ಆತ್ಮಸ್ಥೈರ್ಯ ತುಂಬುವ, ಕೆಲಸ ನವಯುಗ ಕಾರ್ಯಕರ್ತರು ಗುರುವಾರ ಇಂದು ಒಂದೇ ದಿವಸ ಏಕಕಾಲಕ್ಕೆ ಮಾಡಲಿದ್ದಾರೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ, ಸಹಾಯಕ ನಿರ್ದೇಶಕ, ಡಾ. ಪರಮೇಶ್ ಹುಬ್ಬಳ್ಳಿ ಅವರು, ಆಂಟಿಬಯಾಟಿಕ್ ಓಷಧಿ ವಿತರಣೆ ಯಿಂದಾಗಿ, ಮುಂದಾಗಬಹುದಾದ ಸಾಂಕ್ರಾಮಿಕ ವನ್ನು ತಡೆಗಟ್ಟಬಹುದಾಗಿದೆ. ನೀಡುವ ಆಯುರ್ವೇದಿಕ್ ಗುಳಿಗೆ ಓಷಧಿಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಳ ವಾಗಲಿದೆ. ರೈತರು ಹೆದರುವ ಅವಶ್ಯಕತೆ ಇಲ್ಲ. ಸರಕಾರವು ಸಹ ಸೂಕ್ತ ಓಷಧಿ ಕಂಡುಹಿಡಿಯಲು ನಿರಂತರವಾಗಿ ಪ್ರಯತ್ನಿಸುತ್ತಲಿದೆ. ಸಂಘ ಸಂಸ್ಥೆಗಳು, ಸ್ವಯಂ ಪ್ರೇರಣೆಯಿಂದ ಮುಂದಾಗಿ ರೈತರ ಜಾನುವಾರುಗಳಿಗೆ ತಾತ್ಕಾಲಿಕ ಓಷಧಿಯ ಕೀಟಗಳನ್ನು ವಿತರಿಸುತ್ತಿರುವುದು, ಇಲಾಖೆಗೆ ಸಹಕಾರಿಯಾಗಿದೆ.ಅಲ್ಲದೆ ರೈತರಿಗೂ ಸಹ ಧೈರ್ಯವನ್ನು ತುಂಬಿದಂತಾಗಿದೆ ಎಂದರು.
ಅಗತ್ಯ ಕ್ರಮ ತಾಲೂಕಿನಲ್ಲಿ 2500, ಜಾನುವಾರುಗಳಲ್ಲಿ ಈ ಚರ್ಮ ಗಂಟು ರೋಗ ಕಂಡು ಬಂದಿದೆ. ರೈತರು, ಆ ಚಿಕಿತ್ಸೆ ಈ ಚಿಕಿತ್ಸೆ ಎನ್ನದೇ, ನೇರವಾಗಿ ಪಶುಚಿಕಿತ್ಸಾಲಯಗಳಿಗೆ, ಭೇಟಿ ನೀಡಬೇಕು, ಸೂಕ್ತ ಚಿಕಿತ್ಸೆ ಪಡೆಯಬೇಕು, ಇದರಿಂದ ಕೇವಲ ಮೂರು ದಿವಸಗಳಲ್ಲಿ ರೋಗ ಮುಕ್ತಗೊಳಿಸಿ ಕೊಳ್ಳಬಹುದಾಗಿದೆ. ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಇದು ಕಡ್ಡಾಯ. ಎಂದು ತಿಳಿಸಿರುವ ಡಾಕ್ಟರ್ ಪರಮೇಶ್ ಹುಬ್ಬಳ್ಳಿ ಅವರು, ಆಕಸ್ಮಿಕವಾಗಿ ಸಾವು ಕಂಡ ಜಾನುವಾರುಗಳಿಗೆ ಸರ್ಕಾರ ಈಗಾಗಲೇ ಸೂಕ್ತ ಪರಿಹಾರದ ವ್ಯವಸ್ಥೆ ಮಾಡಿರುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ನವಯುಗ ಅಭಿಮಾನಿ ಬಳಗದ ಅಧ್ಯಕ್ಷ ದೇವರಾಜ್ ಭಾರಾಟಿಕ್ಕಿ, ಶಿವಕುಮಾರ ಪಾಟೀಲ್, ತಿಮ್ಮನಗೌಡ ಪಾಟೀಲ್, ಬೀರು ಗುಡಗೂರು, ಶಿವಕುಮಾರ್ ಹಿರೇಬಿದರಿ, ರಾಜು ಹೊಂಬರಡಿ, ಅಭಿಷೇಕ್ ಪಟ್ಟಣಶೆಟ್ಟಿ, ಈರಣ್ಣ ಬುಡಪನಹಳ್ಳಿ, ಚಂದ್ರು ನಾಯಕ್, ದೇವರಾಜ್ ಗಂಗಾಪುರ, ಮಂಜು ಸಿರಿಗೇರಿ,ಸೋಮಶೇಖರ ಹೊನ್ನತ್ತಿ, ಸೇರಿದಂತೆ ಮತ್ತಿತರ ಗಣ್ಯರು ನವಯುಗ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು.