ವಿದ್ಯಾರ್ಥಿಗಳಿಗೆ ಜ್ಞಾನದೊಂದಿಗೆ ಕೌಶಲ್ಯಗಳನ್ನೂ ಕಲಿಸಬೇಕಿದೆ: ದೇವೆಂದ್ರ
ಲೋಕದರ್ಶನ ವರದಿ
ಶೇಡಬಾಳ 15: ಪ್ರಸ್ತುತ ಸ್ಫರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಆಧುನಿಕರಿಸಬೇಕಾಗಿದೆ. ವಿದ್ಯಾರ್ಥಿಗಳಿಗೆ ಜ್ಞಾನದ ಜೊತೆಗೆ ಕೌಶಲ್ಯಗಳನ್ನು ಕೂಡಾ ಕಲಿಸಬೇಕಾಗಿದೆ. ಸರಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗದ ಹಲವು ಅವಕಾಶಗಳಿದ್ದರು ಕೂಡಾ ಅವುಗಳನ್ನು ಪಡೆಯಲು ವಿದ್ಯಾರ್ಥಿಗಳು ಶ್ರಮವಹಿಸಬೇಕಾಗಿದೆ. ಈ ದಿಸೆಯಲ್ಲಿ ಹುಬ್ಬಳ್ಳಿಯ ಪ್ರಗತಿ ಪೊಷಕ ಸಂಸ್ಥೆಯುಅವಿರತ ಪರಿಶ್ರಮವನ್ನು ಹಾಕಿ ನೂರಾರು ವಿದ್ಯಾರ್ಥಿಗಳು ಉದ್ಯೋಗ ಪಡೆಯಲು ಮಹತ್ವದ ಪಾತ್ರವನ್ನು ನಿರ್ವಹಿಸಿದೆ ಎಂದು ದೇವೆಂದ್ರ ಎಸ್.ಎನ್. ಅವರು ಹೇಳಿದರು.
ಅವರು ಬುಧವಾರ ದಿ. 14 ರಂದು ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ಪ್ಲೇಸ್ಮೆಂಟ್ ಸೇಲ್, ಕರೀಯರ್ ಅಕಾಡೆಮಿ ಮತ್ತು ಹುಮನ್ ರೀಸೊರ್ಸ ಡೆವಲಪ್ಮೆಂಟ್ ಸೇಲ್ ಹಾಗೂ ಪ್ರಗತಿ ಪೊಷಕ ಸಂಘ ಹುಬ್ಬಳ್ಳಿ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರ ಮಟ್ಟದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಿದ್ದರು.
ಅಧ್ಯಕ್ಷತೆಯನ್ನು ವಹಿಸಿದ ಡಾ. ಎಸ್.ಪಿ. ತಳವಾರ ಇವರು ಕಾಯರ್ಾಗಾರವನ್ನು ಉದ್ದೇಶಿಸಿ ಮಾತನಾಡುತ್ತ ಇವತ್ತಿನ ಸ್ಫಧರ್ಾತ್ಮಕ ಯುಗದಲ್ಲಿ ಒಳ್ಳೆಯ ಉದ್ಯೋಗವನ್ನು ಗಿಟ್ಟಿಸಿಕೊಳ್ಳಲು ವಿದ್ಯಾಥರ್ಿಗಳು ಪ್ರಗತಿ ಪೊಷಕದಂತಹ ಸಂಸ್ಥೆಗಳಲ್ಲಿ ತರಬೆತಿಯನ್ನು ಪಡೆದು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮಾಧಿಕಾರಿಗಳಾದ ಪ್ರೊ. ಜೆ.ಕೆ. ಪಾಟೀಲ ಪ್ರಾಸ್ತಾವಿಕವಾಗಿ ಕಾಯರ್ಾಗಾರದ ಬಗ್ಗೆ ನುಡಿದರು.
ಪಿ.ಎಂ. ದೊಡಮನಿ, ವಾಮನ್ ನಾಡಗೌಡಾ, ಪ್ರೊ. ವ್ಹಿ.ವ್ಹಿ. ಪಾಟೀಲ ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು. ಪ್ರೊ. ವ್ಹಿ.ಬಿ. ಬುಲರ್ೆ ಸ್ವಾಗತಿಸಿದರು. ಆಯ್.ಕ್ಯೂ.ಎ.ಸಿ. ಸಂಯೋಜಕರಾದ ಪ್ರೊ. ಬಿ.ಡಿ. ಧಾಮನ್ನವರ ವಂದಿಸಿದರು