ವಿಜ್ಞಾನ ವಸ್ತು ಪ್ರದರ್ಶನದಿಂದ ಮಕ್ಕಳಲ್ಲಿ ಕೌಶಲ್ಯ ಅಭಿವೃದ್ಧಿ ಹೊರಹೊಮ್ಮುತ್ತದೆ: ಕಾಳೆ
ಇಂಡಿ: ವಿಜ್ಞಾನ ವಸ್ತು ಪ್ರದರ್ಶನದಿಂದ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ, ವೈಜ್ಞಾನಿಕ ಮನೋಭಾವ ಕೌಶಲ್ಯ ಅಭಿವೃದ್ಧಿ ಹೊರಹೊಮ್ಮುತ್ತದೆ ಮತ್ತು ಒಂದು ದೇಶ ಮುಂದುವರೆದ ದೇಶವಾಗಲು ವಿಜ್ಞಾನ ಅತೀ ಮುಖ್ಯವಾಗಿದೆ ಎಂದು ರಮಾಬಾಯಿ ಪ್ರೌಢಶಾಲೆಯ ಮುಖ್ಯ ಗುರು ನಿಜಣ್ಣ ಕಾಳೆ ಹೇಳಿದರು.
ಸೋಮವಾರ ಪಟ್ಟಣದ ಎಸ್.ಎಸ್.ಪ್ಯಾರಾ ಮೆಡಿಕಲ್ ಮಹಾವಿದ್ಯಾಲಯದಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಜ್ಞಾನಕ್ಕೆ ಸಂಬಂಧಿಸಿದ ನೂತನ ಮಾದರಿಗಳನ್ನು ಮಕ್ಕಳು ಮಾಡುವುದರಿಂದ ವೈಜ್ಞಾನಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಸಹಕಾರಿಯಾಗುತ್ತದೆ ಎಂದರು.
ಉಮೇಶ ಕೋಳೆಕರ ಮಾತನಾಡುತ್ತಾ ಗುಣಮಟ್ಟದ ಶಿಕ್ಷಣದಿಂದ ಮಕ್ಕಳ ಮನಸ್ಸು ವೈಜ್ಞಾನಿಕವಾಗಿ ಬೆಳೆಯಬೇಕು. ಪ್ರಯೋಗಶೀಲತೆಯಿಂದ ಕೂಡಿದ ಶಿಕ್ಷಣ ಮಕ್ಕಳ ಮನಸ್ಸನ್ನು ವಿಕಾಸಗೊಳಿಸಲು ಸಾಧ್ಯವಾಲಿದೆ. ಭವಿಷ್ಯಕ್ಕಾಗಿ ಸರಳ ಮಾರ್ಗ ಹುಡಕಿ ಕೆಲಸ ಪಡೆಯುವ ಆತುರದಲ್ಲಿ ವಿದ್ಯಾರ್ಥಿಗಳು ಕಠಿಣ ತಪಸ್ಸಿನಂತಿರುವ ವೈಜ್ಞಾನಿಕ ಮನೋಭಾವ, ವಿಜ್ಞಾನಿಯಾಗುವ ಮನಸ್ಸು ಕಳೆದುಕೊಂಡಿದ್ದಾರೆ. ಆ ಉದ್ದೇಶದಿಂದ ಬೆಳೆಯುವ ಮನಸ್ಸುಗಳಿಗೆ ಹೊಸ ಹೊಸ ಪ್ರಯೋಗದ ಅಭಿರುಚಿ ಬೆಳೆಸಿದರೆ ಮಕ್ಕಳು ಚಿಂತನ ಶೀಲರಾಗುತ್ತಾರೆ. ಸಜನ ಶೀಲಶಕ್ತಿ ಬೆಳೆಯುತ್ತದೆ. ಅವರಲ್ಲಿ ವಿಜ್ಞಾನಿಯಾಗುವ ಕನಸನ್ನು ಕಟ್ಟಿದ ತೃಪ್ತಿಸಿಗುತ್ತದೆ ಎಂಬುದು ಈ ವಿಜ್ಞಾನ ವಸ್ತು ಪ್ರದರ್ಶನ ಸಂಸ್ಥೆಯ ಉದ್ದೇಶವಾಗಿದೆ ಎಂದರು.
ಪ್ರಾದ್ಯಾಪಕ ಎಚ್.ಬಿ.ಸಾಹುಕಾರ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸದೃಡ ಮತ್ತು ಶಾಶ್ವತ ಪ್ರಗತಿ ಸಾಧಿಸಬೇಕಾದರೆ ವಿಜ್ಞಾನ ಮತ್ತು ತಂತ್ರಜ್ಞಾನ ಉಪಯೋಗ ಅವಶ್ಯ ಎಂದರು.
ಸಂಸ್ಥೆಯ ಅಧ್ಯಕ್ಷ ಎಸ್.ಬಿ.ಕೆಂಬಾಗಿ ಮಾತನಾಡಿ ಸಾಮಾನ್ಯ ಜನರ ಜೀವನ ಸುಖಮಯವಾಗಿ ಅವರ ಬದುಕು ಹಸನು ಮಾಡುವದೇ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲ ಉದ್ದೇಶವಾಗಿದೆ ಎಂದರು.
ಎಸ್.ಬಿ. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸತ್ತಾರ ಬಾಗವಾನ, ಪ್ರಾಧ್ಯಾಪಕ ಸುರೇಶ ಸರಸಂಬಿ, ವಕೀಲರ ಸಂಘದ ಕಾರ್ಯದರ್ಶಿ ಎಸ್.ಬಿ. ಬಿರಾದಾರ, ಮಹೇಶ ಕನ್ನೂರ ಮಾತನಾಡಿದರು.
ವಿಧ್ಯಾರ್ಥಿಗಳು ಶುದ್ಧ ನೀರಿನ ಘಟಕ, ತ್ಯಾಜ್ಯ ವಸ್ತುಗಳ ನಿರ್ವಹಣೆ, ಜಲ ಮಾಲಿನ್ಯ, ವಾಯು ಮಾಲನ್ಯ ಮುಂತಾದ ಪ್ರಯೋಗಗಳನ್ನು ಮಾಡಿ ಅವುಗಳ ಬಗ್ಗೆ ಪ್ರಶಾಂತ ಹೂಗಾರ, ಸಮರ್ಥ ಜೋರಾಪುರ, ವಿಠ್ಠಲ ಮಾಳಾಬಾಗಿ, ಆದರ್ಶ ಪತ್ತಾರ, ಪೂಜಾ ಪಾಸೋಡಿ, ಪವಿತ್ರ ಬಿಜ್ಜರಗಿ, ವಿಜಯಲಕ್ಷ್ಮೀ ಮಾದರ, ರೂಪಾಶ್ರೀ ಸಿಂಗೆ, ಪೂಜಾ ನಿವರಗಿ, ದಾನಮ್ಮ ಬಾಳಿಕಾಯಿ, ಪೃಥ್ವಿ ಅಗಸರ, ಸುಧಾರಾಣಿ ಲೋಕುರ, ರಕ್ಷಿತಾ ಬಡಿಗೇರ ಮಾಹಿತಿ ನೀಡಿದರು.
ವೇದಿಕೆಯ ಮೇಲೆ ವಕೀಲರ ಸಂಘದ ಅಧ್ಯಕ್ಷ ಪುಟ್ಟನಗೌಡ ಪಾಟೀಲ, ಯಲಗೊಂಡ ಬೇವನೂರ, ಡಾ. ಸಾಗರ, ಬಿ.ಎಸ್. ಹಿರೇಮಠ, ಜೆ.ಸಿ. ರಾಠೋಡ ಮತ್ತಿತರಿದ್ದರು.