ಜೆಎಸ್ಎಸ್ ಮಹಾವಿದ್ಯಾಲಯದಲ್ಲಿ ಕೌಶಲ್ಯ ಆಧಾರಿತ ಕಾರ್ಯಾಗಾರ
ಗೋಕಾಕ 14: ಜೆಎಸ್ಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಸಾಯನಶಾಸ್ತ್ರ ವಿಭಾಗ ಹಾಗು ರಾಷ್ಟ್ರೀಯ ಮೌಲೀಕರಣ ಮತ್ತು ಮಾನ್ಯತಾ ಪರಿಷತ್ ಸಹಯೋಗದಲ್ಲಿ ದಿ. 07 ಮತ್ತು 08ರಂದು ಮೇಣದಬತ್ತಿ, ಸಾಬೂನು ಮತ್ತು ಮಾರ್ಜಕಗಳ (ಡಿಟರ್ಜಂಟ) ತಯಾರಿಕೆ ಬಗ್ಗೆ ಎರಡು ದಿನಗಳ ಕೌಶಲ್ಯ ಆಧಾರಿತ ಕಾರ್ಯಾಗಾರವನ್ನು ಮಹಾವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಗೋಕಾಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಆರ್. ಎಮ್. ವಾಲಿ, ರಾಷ್ಟ್ರೀಯ ಮೌಲೀಕರಣ ಮತ್ತು ಮಾನ್ಯತಾ ಪರಿಷತ್ ಸಂಯೋಜಕ ಆರ್. ಎಮ್. ಮಹಿಂದ್ರಕರ, ಉಪಪ್ರಾಚಾರ್ಯರು ಹಾಗೂ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರು ಡಾ. ಆರ್. ಎಸ್. ಬಳಿಗಾರ, ಕಾರ್ಯಗಾರದ ಸಂಚಾಲಕ ಡಾ. ಪಿ. ಪಿ. ಕಟ್ಟಿಮನಿ, ಕಾರ್ಯಾಗಾರದ ಸಂಯೋಜಕ ಡಾ. ಕೃಷ್ಣಮೂರ್ತಿ ಎಮ್. ಎಸ್. ಸಂಘಟನಾ ಕಾರ್ಯದರ್ಶಿ ಡಾ. ಉಮೇಶ. ಬಿ. ಹಾಗು ನಿವೃತ್ತ ಪ್ರಾಧ್ಯಾಪಕ ಸಿ. ಬಿ. ಕೌಜಲಗಿಯವರು ಭಾಗವಹಿಸಿದ್ದರು.
ಕಾರ್ಯಾಗಾರದ ಅಧ್ಯಕುತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಆಶಾಲತಾ ಎಸ್. ತೇರದಾಳರವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಡಾ. ರಾಜೇಶ್ವರಿ. ಎಚ್. ವಿ. ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಾ ಮೇಣದಬತ್ತಿ, ಸಾಬೂನು ಮತ್ತು ಮಾರ್ಜಕ(ಡಿಟರ್ಜಂಟ) ಎಂಬ ವಿಷಯದ ಬಗ್ಗೆ ಸರಳವಾಗಿ ಮಂಡಿಸಿ, ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆ ಮತ್ತು ಸ್ವಯಂ ಉದ್ಯೋಗದ ಬಗ್ಗೆ ಅರಿವು ಮೂಡಿಸಿದರು.
ನಿವೃತ್ತ ಪ್ರಾಧ್ಯಾಪಕ ಸಿ. ಬಿ. ಕೌಜಲಗಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಉದ್ಯೋಗದಲ್ಲಿ ಕೌಶಲ್ಯತೆಯನ್ನು ಅಳವಡಿಸಿಕೊಂಡರೆ, ಸ್ವಂತ ಉದ್ಯಮಿಯಾಗಲು, ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸಾಧ್ಯವಾಗಬಹುದು ಎಂದು ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಮೂಡಿಸಿದರು.