ಸರ್ ಎಂ ವಿಶ್ವೇಶ್ವರಯ್ಯ ಜನ್ಮದಿನೋತ್ಸವ : ಅಭಿಯಂತರರ ಗೌರವ ಸನ್ಮಾನ
ರಾಣೇಬೆನ್ನೂರ:ಸೆ 25 ಇಲ್ಲಿನ ಲಯನ್ಸ್ ಶಾಲಾ ಸಭಾ ಭವನದಲ್ಲಿ ಲಯನ್ ಸೇವಾ ಸಂಸ್ಥೆಗೆ ವಲಯಾ ಧ್ಯಕ್ಷರ ಅಧಿಕೃತ ಭೇಟಿ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಅವರ ಜನ್ಮದಿನೋತ್ಸವದ ನಿಮಿತ್ತ ಗೌರವ ಅಭಿನಂದನಾ ಸನ್ಮಾನ ಸಮಾರಂಭವು ನಡೆಯಿತು. ವಿವಿಧ ತಾಂತ್ರಿಕ ಇಲಾಖೆಗಳ ಅಭಿಯಂತರರಾದ, ಈ ವಿನಯರಾಜ, ಮಹಾಬಲೇಶ್ವರ ಡಿ.ಸಿ, ಮರಿಸ್ವಾಮಿ ಎ. ಇ, ರಮೇಶ್ ನಾಯಕ್, ಮಹೇಶ್ ಕಲಾಲ್, ಮಧುಚಂದ್ರ ಕೋಳಿವಾಡ, ಅಮೋಘ ಬದಾಮಿ, ರಶ್ಮಿ ಜಿ. ಎಂ. ಪ್ರಕಾಶ್ ಗುಡಮಿ ಸೇರಿದಂತೆ ಮತ್ತಿತರರನ್ನು ಸನ್ಮಾನಿಸಲಾಯಿತು. ಲಯನ್ ಆದ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ, ಎಂ. ಜಿ. ಇ.ಅಧ್ಯಕ್ಷ ಮಲ್ಲೇಶಪ್ಪ ಅರಕೇರಿ, ಟಿ ವೀರಣ್ಣ, ರಟ್ಟಿಹಳ್ಳಿಯ ಕೆ.ಎಲ್. ಬಾಜಿರಾಯ್, ಗುತ್ತೇಪ್ಪ ಹಳೆಮನಿ, ಕಿರಣ್ ಕುಮಾರ್ ಅಂತರವಳ್ಳಿ, ಬಸವರಾಜ ಬಡಿಗೇರ್, ಬಸವರಾಜ ಪಾಟೀಲ್, ರಾಜಣ್ಣ ಅಡಿವೆಪ್ಪನವರ್, ಶಿವಪ್ಪ ಗುರಿಕಾರ್, ಕೊಟ್ರೇಶಪ್ಪ ಎಮ್ಮಿ, ಸೇರಿದಂತೆ ಲಯನ್ ಸಂಸ್ಥೆಯ ಪದಾಧಿಕಾರಿಗಳು, ಲಯನ್ ಶಾಲೆಯ ಪ್ರಧಾನ ಗುರುಗಳು ಶಿಕ್ಷಕರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.