ಸಿಂಧಗಿ

ಸಿಂದಗಿ ಪುರಸಭೆ ಬಜೆಟ್ ಮಂಡನೆ

ಸಿಂದಗಿ ಪುರಸಭೆ ಬಜೆಟ್ ಮಂಡನೆ


ಸಿಂದಗಿ: ಊರು ಸ್ಮಶಾನವಾಗಿದೆ ಇನ್ನೂವರೆಗೆ ಯಾವುದೇ ಅಭಿವೃದ್ಧಿ ಕಂಡಿಲ್ಲ ಕಳೆದ ಬಾರಿಯ ಬಜೆಟ್ ಯಾವುದಕ್ಕೆ ಬಳಕೆ ಮಾಡಿದ್ದಿರಿ ಅನ್ನುವುದನ್ನು ಸರಿಯಾದ ಮಾಹಿತಿ ಒದಗಿಸಿ ಇಲ್ಲದಿದ್ದರೆ ಮುಂದೂಡಿ ಎಂದು ಸದಸ್ಯ ಹಣಮಂತ ಸುಣಗಾರ ಪಟ್ಟು ಹಿಡಿದ ಪ್ರಸಂಗ ನಡೆಯಿತು. 

ಪಟ್ಟಣದ ಪುರಸಭೆ ಸಭಾಂಗಣದಲ್ಲಿ 2022-23ನೇ ಸಾಲಿನ ಅಂದಾಜು ಆಯ-ವ್ಯಯದ ಬಜೆಟ್ ಮಂಡನೆ ಸಭೆಯಲ್ಲಿ ಮಾತನಾಡಿ, 2022-23ನೇ ಸಾಲಿನಲ್ಲಿ ಮಂಡಿಸುತ್ತಿರುವ ಬಜೆಟ್ ಸರಿಯಾಗಿಲ್ಲ. ಪೌರ ಕಾರ್ಮಿಕರಿಗೆ ಬೆಳಿಗ್ಗೆ ಉಪಹಾರದ ವ್ಯವಸ್ಥೆಯಿತ್ತು ಆದರೆ ಈಗಾಗಲೇ ನಿಲ್ಲಿಸಿದ್ದಾರೆ ಹಾಗಿದ್ದರೆ ಅವರೇನು ಮನುಷ್ಯರಲ್ಲವೇ ನಾಳೆಯಿಂದ ಉಪಹಾರದ ವ್ಯವಸ್ಥೆ ಮಾಡಿ ಎಂದು ಹೇಳುತ್ತ ಎಂದು ಪಟ್ಟು ಹಿಡಿದರು. ಅದಕ್ಕೆ ಕಳೆದ ಬಾರಿಯ ಎಲ್ಲ ದಾಖಲೆಗಳನ್ನು ಪೂರೈಯಿಸಿ ಈ ಆಯುವ್ಯ ಬಜೆಟ್ ಇದೆ ಅದಕ್ಕೆ ಅಡ್ಡಿ ಪಡಿಸುವುದು ಬೇಡ ಎಂದು ಶಾಂತವೀರ ಬಿರಾದಾರ ಸಮಜಾಯಿಸಿದರು.  

       ಮಧ್ಯಪ್ರವೇಶಿಸಿದ ಮುಖ್ಯಾಧಿಕಾರಿ ಪ್ರಕಾಶ ಮುದುಗೋಳಕರ  ಜನಾಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು ದಾಖಲೆಗಳನ್ನು ಪೂರೈಸಲು 8 ದಿನಗಳ ಗಡುವು ಪಡೆದು ಸಭೆ ನಡೆಸಿದರು. 

        ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ 2022-23ನೇ ಸಾಲಿನ ಅಂದಾಜು ಆಯ-ವ್ಯಯದ ಬಜಟ್ ಮಂಡನೆಯಲ್ಲಿ ಪುರಸಭೆಯ ಎಲ್ಲ ಶುಲ್ಕಗಳ ಪಾವತಿಸಲಾದ ಒಟ್ಟು ರೂ 1.453 ಲಕ್ಷಗಳ ಮೊತ್ತದಲ್ಲಿ  ರೂ. 1.235 ಲಕ್ಷಗಳ ವೆಚ್ಚಗಳನ್ನು ಭರಿಸಿ ಅಂದಾಜು  ರೂ 22 ಲಕ್ಷಗಳ ಉಳಿತಾಯ ಬಜ್‌ಟ್ ನೀಡಿದ್ದು ಹರ್ಷ ತಂದಿದೆ ಎಂದು  ಹೇಳಿದರು. 

      ಆಡಳಿತ-ಸಾಮಾನ್ಯ-ಅನಿರ್ಬಂಧಿತ ಅನುದಾನ ರೂ 446-00 ಲಕ್ಷ ಸೇರಿದಂತೆ ವಿವಿಧ ಶುಲ್ಕುಗಳೊಳಗಂಡಂತೆ ಒಟ್ಟು ರೂ 874.53 ಲಕ್ಷ ಇದರಲ್ಲಿ 693.46 ವೆಚ್ಚಗಳನ್ನು ಭರಿಸಿ ಒಟ್ಟು ರೂ.1.453.37 ಲಕ್ಷ ಬಂಡವಾಳ ಆದಾಯದಲ್ಲಿ 1,453.37 ಅಂದಾಜು ವೆಚ್ಚ ಮಾಡಿ ಅಭಿವೃದ್ಧಿಗೆ ಮುಂದಾಗಿ ರೂ.1.36.77.180 ಲಕ್ಷಗಳ ವೆಚ್ಚದಲ್ಲಿ ಮೀಸಲಾತಿಯನ್ನಾಧರಿಸಿ ಆಯಾ ವಾರ್ಡುಗಳ ಅಭಿವೃದ್ಧಿಗೆ ಮುಂದಾಗಲಾಗುತ್ತಿದೆ ಎನ್ನುತ್ತಿದಂತೆ ಉಪಾಧ್ಯಕ್ಷ ಹಾಸೀಂ ಆಳಂದ ಸಹಮತ ತೊರಿಸಿದರು. 

       ಸದಸ್ಯ ಶರಣಗೌಡ ಪಾಟೀಲ ಮಾತನಾಡಿ, ಅಮೃತ ಜೋಜನೆಯಡಿ ಬಂದ ರೂ. ಕೋಟಿಯ ಅಂದಾಜು ಪತ್ರಿಕೆ ರೂಪಿಸುವಾಗ ಮಿಸಲಾತಿ ಪರಿಗಣಿಸದೇ ಮನಬಂದಂತೆ ಹಂಚಿಕೆ ಮಾಡಿದ್ದಿರಿ ಆ ಕಾರಣಕ್ಕೆ ಹಿಂದಿನ ಅವಧಿಯಲ್ಲಿ ಇಟ್ಟಂತ ರೂ. 4,28,940 ಅನುದಾನ ಪೋಲಾಗಿದೆ ಅದಕ್ಕೆ ಎಲ್ಲ ಬಜೆಟ್ ಗಳನ್ನು ಮೀಸಲಾತಿಯನ್ನು ಆಧಾರಿಸಿ ಸಂಪೂರ್ಣ ಮಾಹಿತಿ ಒದಗಿಸಿ ಸಭೆ ನಡೆಸಿ ಇಲ್ಲದಿದ್ದರೆ ಮಿಸಲು ವಾರ್ಡುನಿಂದ ಆಯ್ಕೆಯಾದ 5 ಜನ ಸದಸ್ಯರು ಅರೆ ಬೆತ್ತಲೆ ಆಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

     ಸದಸ್ಯ ಭಾಷಾಸಾಬ ತಾಂಬೋಳಿ ಮಾತನಾಡಿ, ವಾರ್ಡ 7 ರಲ್ಲಿ ಮಹಿಳಾ ಶೌಚಾಲಯಗಳಿದ್ದು ಅವುಗಳ ನಿರ್ವಹಣೆ ಮಾಡುವಂತೆ ಸಾಕಷ್ಟು ಬಾರಿ ಹೇಳಿದ್ದಾಗಿದೆ ಯಾವುದೇೆ ಪ್ರಯೋಜನೆ ಕಂಡಿಲ್ಲ ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು. 

        ಆಶ್ರಯ ಮನೆ ಯೋಜನೆಯು ಬರೀ ಏಜಂಟರ ಹಾವಳಿಯಾಗಿದೆ ಅದಕ್ಕೆ ಮನೆಯಿಲ್ಲದವರಿಗೆ ನಿರಾಶ್ರಿತರಿಗೆ ಸೂರು ಸಿಗುತ್ತಿಲ್ಲ. ಪುಸ್ತಕ ಪ್ರಕಾರ ಬಜೆಟ್ ಮಂಡನೆಯಾಗಿದೆ ಆದರೆ ಕ್ರೀಯಾತ್ಮಕ ಬಜೆಟ್ ಆಗಿಲ್ಲ. ದಾಖಲೆಗಳು ನೀಡದಿದ್ದರೆ ಹೋರಾಟದ ದಾರಿ ಕಂಡುಕೊಳ್ಳಬೇಕಾಗುತ್ತದೆ ಸದಸ್ಯ ಸಂದೀಪ ಚೌರ ಆಕ್ರೋಶ ವ್ಯಕ್ತಪಡಿಸಿದರು. 

        ಬಸವರಾಜ ಯರನಾಳ ಮಾತನಾಡಿ, ಭೂಗಳ್ಳರಿಂದ ಜಾಗೆಯ ಮಾಲೀಕರಿಗೆ ಭಯವಿದೆ ಅದು ಸ್ಮಶಾನ ರಸ್ತೆ ಅತೀಕ್ರಮವಾಗಿದೆ ಅದು ಯಾಕೆ ಪರೀಶೀಲನೆಯಾಗುತ್ತಿಲ್ಲ ನಿಮಗೆ ಏಂಜಲು ಬಂದು ತಲುಪಿದೆಯಾ ಎಂದು ಪ್ರಶ್ನಿಸಿದ ಅವರು ತಳವಾರ ಸಮಾಜದ 3ಸಾವಿರಕ್ಕೂ ಅಧಿಕ ಜನರಿಗೆ ಸುರು ಇಲ್ಲದೆ ಪರದಾಡುತ್ತಿದ್ದಾರೆ ಇವರೆಗೂ ಒಂದು ಮನೆ ಅವರಿಗೆ ಮುಟ್ಟಿಲ್ಲ ಹಾಗಿದ್ದರೆ ಅದಕ್ಕೆ ಸುಪ್ರೀಮ್ ಯಾರು ಎನ್ನುವುದೇ ಗೊತ್ತಾಗುತ್ತಿಲ್ಲ ಎಂದು ಅಧಿಕಾರಿಯ ಮೇಲೆ ಸಿಡಿಮಿಡಿಗೊಂಡರು. 

     ಸದಸ್ಯ ರಾಜಣ್ಣ ನಾರಾಯಣಕರ ಮಾತನಾಡಿ, ಪ್ರತಿ ತಿಂಗಳು ಸಾಮಾನ್ಯ ಸಭೆೆ ನಡೆಸಿ ವಾರ್ಡುಗಳ ಸಮಸ್ಯೆಗಳಿಗೆ ಅಣಿಯಾಗಿ ಎಂದರು.  

        ಸಭೆೆಗೆ ಮುಂಚೆ ಪುರಸಭೆ ಸಿಬ್ಬಂದಿ ಸಿದ್ದು ಅಂಗಡಿ ಅವರು 2022-23ನೇ ಸಾಲಿನ ಬಜೆಟ್ ಆಯುವ್ಯದ ಸಂಪೂರ್ಣ ವರದಿಯನ್ನು ಮಂಡಿಸಿದರು.  


ಸುದ್ದಿ ಓದಿ