ಜೆಎಸ್ಎಸ್ನಲ್ಲಿ ಆಚರಿಸಿದ ಕಾರ್ಗಿಲ್ ವಿಜಯೋತ್ಸವದ ರಜತ ಮಹೋತ್ಸವದ ಆಚರಣೆ
ಧಾರವಾಡ 27: ಕರ್ನಾಟಕ ರಾಜ್ಯ ನಿವೃತ್ತ ವಾಯು ಸೈನಿಕರ ಸಂಘದ ಅಂಗವಾದ ಹುಬ್ಬಳ್ಳಿ-ಧಾರವಾಡ ಘಟಕದ ವತಿಯಿಂದ ಮತ್ತು ಜೆ.ಎಸ್.ಎಸ್ ಶಿಕ್ಷಣ ಸಂಸ್ಥ್ತೆಯ ಸಹಯೊಗದಿಂದ ವಿದ್ಯಾಗಿರಿಯ ಜೆ.ಎಸ್.ಎಸ್ ಉತ್ಸವ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯೋತ್ಸವದ ರಜತ ಮಹೋತ್ಸವವನ್ನು ಹುತಾತ್ಮ ಯೋಧರಿಗೆ ಪುಷ್ಪ ನಮನ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಿಸುವ ಮೂಲಕ ಅತಿ ಶಿಸ್ತಿನಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಏರ್ ವೈಸ್ ಮಾರ್ಷಲ್ ಧನಂಜಯ ವಾಣಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ತಾವು ಮಿರೇಜ್ 2000 ವಿಮಾನ ಚಾಲಕರಾಗಿದ್ದು, ಭಾರತೀಯ ವಾಯುಸೇನೆ ಯಾವ ರೀತಿಯ ಕಾರ್ಯಾಚರಣೆಯನ್ನು ನಡೆಯಿಸಿ ವಿಜಯವನ್ನು ಶಿಘ್ರಗೊಳಿಸುವದಲ್ಲದೇ, ನಮ್ಮ ಭೂ ಸೈನಿಕರ ಸಾವು-ನೊವುಗಳನ್ನು ಕಡಿಮೆ ಮಾಡಿ ಅವರು ಪರ್ವತ ಶ್ರೇಣಿಗಳನ್ನು ಏರಿ ಪಾಕಿಸ್ತಾನಿಯರನ್ನು ಸೆದೆ ಬಡಿಯಲು ಸಹಕಾರವಾಯಿತೆಂದು ವಿವರಿಸಿದರು.
ನಿ. ಏರ್. ಕಮಾಂಡರ್ ಸಿ.ಎಸ್ ಹವಾಲ್ದಾರ್ ಮಾತನಾಡಿ ವಿದ್ಯಾರ್ಥಿಗಳು ದೇಶದ ಭವಿಷ್ಯ ಅವರು ಪ್ರತಿಯೊಂದು ಕ್ಷೇತ್ರದಲ್ಲೂ ಯೋಧರಂತೆ ಶ್ರಮವಹಿಸಿ, ದೇಶವನ್ನು ಪ್ರಗತಿಪಥದಲ್ಲಿ ನಡೆಸಬೇಕೆಂದು ಕಳಕಳಿಯನ್ನು ವ್ಯಕ್ತ ಪಡಿಸಿದರು.
ಪ್ರಾಚಾರ್ಯೆ ಭಾರತಿ ಶಾನಭಾಗರವರು ಮಾತನಾಡಿ ಯೋಧರ ಪರಿಶ್ರಮ, ತ್ಯಾಗ-ಬಲಿದಾನವನ್ನು ನೆನಪಿಸಿದರು. ನಿವೃತ್ತ ವಾಯುಸೈನಿಕರು ಹಾಗೂ ಅವರ ಪರಿವಾರದವರು, ಐ.ಟಿ.ಐ ಕಾಲೆಜಿನ ಪ್ರಾಚಾರ್ಯ ಮಹಾವೀರ ಉಪಾಧ್ಯೆಯವರು, ಕಾಲೇಜಿನ ಭೋಧಕ ಹಾಗು ಭೋಧಕೇತರ ಸಿಬ್ಬಂದಿಯವರು ಭಾಗವಹಿಸಿದ್ದರು. ಕಾಯಕ್ರಮವನ್ನು ಮೈಥಿಲಿ ಹಾಗೂ ಮೈತ್ರಿ ನಿರೂಪಿಸಿದರು. ಬಸವರಾಜ ಯೆಂಡಿಗೇರಿ ವಂದಿಸಿದರು.