ಉಗಾರ ಲಯನ್ಸ್ ಕ್ಲಬ್ನ ರಜತ ಮಹೋತ್ಸವ
ಲೋಕದರ್ಶನ ವರದಿ
ಕಾಗವಾಡ 17: ತಾಲೂಕಿನ ಉಗಾರ ಲಯನ್ಸ್ ಕ್ಲಬ್ ಸ್ಥಾಪನೆಗೊಂಡು 25 ವರ್ಷ ಪೂರ್ಣಗೊಂಡಿವೆ. ಇದರ ನಿಮಿತ್ಯವಾಗಿ ರಜತ ಮಹೋತ್ಸವ ಕಾರ್ಯಕ್ರಮ ಶನಿವಾರ ದಿ. 19ರಂದು ಹಮ್ಮಿಕೊಳ್ಳಲಾಗಿದೆ ಎಂದು ಉಗಾರ ಲಾಯನ್ಸ್ ಕ್ಲಬಿನ ಅಧ್ಯಕ್ಷೆ ಡಾ. ಬಾಬಾಗೌಡ ಪಾಟೀಲ ತಿಳಿಸಿದರು.
ಬರುವ ಶನಿವಾರದಂದು ಹಮ್ಮಿಕೊಳುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಲಾಯನ್ಸ್ ಕ್ಲಬ್ನ ಅಂತರರಾಷ್ಟ್ರೀಯ ಸಂಚಾಲಕ ಬೆಂಗಳೂರಿನ ವಂಶಿಧರ ಬಾಬು ಮತ್ತು ಜಿಲ್ಲಾ ಗವರ್ನರ್ ಶ್ರೀಕಾಂತ್ ಮೋರೆ ಇವರ ಮುಖ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರಗಲಿದೆ.
ಉಗಾರ್ ಲಯನ್ಸ್ ಕ್ಲಬ್ನ ಶಾಖೆಯ ಸಂಸ್ಥಾಪಕರು ಹಾಗೂ ಹಿರಿಯ ಸಕ್ಕರೆ ಉದ್ದಿಮೆಗಳಾದ ರಾಜಭಾಹು ಶಿರಗಾವ್ಕರ್ ಇವರು ಜೀವನದಲ್ಲಿ ನೀಡಿರುವ ಸಮಾಜ ಸೇವೆ ಮತ್ತು ನೀಡಿದ ಅಪಾರ ಕೊಡುಗೆ ಬಗ್ಗೆ ರಚಿಸಿದ್ದು ಗೌರವ ಗ್ರಂಥದ ಬಿಡುಗಡೆ ಅತಿಥಿಗಳಿಂದ ನೆರವೇರಲಿದೆ.
ಇದೇ ರೀತಿ ಉಗಾರ ಮಹಿಳಾ ಮಂಡಳದ ಅಧ್ಯಕ್ಷರು ಹಾಗೂ ಹಿರಿಯ ಸಮಾಜ ಸೇವಕಿ ಸ್ಮಿತಾತಾಯಿ ಪ್ರಫುಲ್ ಶಿರಗಾಂವಕರ ಇವರಿಗೆ ಅಂತರರಾಷ್ಟ್ರೀಯ ಮಟ್ಟದ “ಸಮಾಜಸೇವೆ” ಪ್ರಶಸ್ತಿ ಲಭಿಸಿದೆ ಈ ನಿಮಿತ್ತವಾಗಿ ಇವರ ಸನ್ಮಾನ ಹಮ್ಮಿಕೊಳ್ಳಲಾಗಿದೆ.
ಕಳೆದ ವರ್ಷದಲ್ಲಿ ಕೊರೋನಾ ಮಹಾಮಾರಿ ಕಾಲದಲ್ಲಿ ತಮ್ಮ ಜೀವದ ಹಂಗು ತೊರೆದು ಶ್ರಮಿಸಿದ ವೈದ್ಯರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಿದ್ದೇವೆ.
ರಜತ ಮಹೋತ್ಸವ ಸಮಾರಂಭ ಯಶಸ್ವಿಗೊಳಿಸಲು ಚೇರ್ಮನ್ ಬಾಳಗೊಂಡ ಕಾಗೆ, ಕಾರ್ಯದರ್ಶಿ ಮನಿಷಿ ಶಾಹಾ, ಖಜಾಂಚಿ ಡಾ. ಬಿ.ಎ ಪಾಟೀಲ್ ಎಲ್ಲ ಸಂಚಾಲಕರು ಶ್ರಮಿಸುತ್ತಿದ್ದಾರೆ. ಪರಿಸರದ ಸಮಾಜ ಜೀವಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿರಿ ಎಂದು ಉಗಾರ ಲಯನ್ಸ್ ಕ್ಲಬ್ದ ಅಧ್ಯಕ್ಷ ಡಾಕ್ಟರ್ ಬಾಬಾಗೌಡ ಪಾಟೀಲ್ ಕರೆನೀಡಿದಾರೆ.