ಸ್ವಾತಂತ್ರ್ಯ ಸಂಗ್ರಾಮದಲ್ಲೂ ಸಿದ್ದರೂಢರ ಪಾತ್ರ ಅನನ್ಯ
ರಾಣೇಬೆನ್ನೂರು 19 : ಈ ದೇಶದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ನೆಹರೂ ಅವರಂತಹ, ಮಹಾತ್ಮ ಗಾಂಧೀಜಿ ಎಂಥ, ಮೈಲಾರ ಮಹಾದೇವಪ್ಪನಂಥ ಹೋರಾಟಗಾರರು ಬಂದು ಸಿದ್ದಾರೂಢರ ಜೊತೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಪ್ರಮುಖ ವಿಚಾರವಾಗಿ ಚರ್ಚಿಸುತ್ತಿದ್ದರು. ಈ ಸಂದರ್ಭದಲ್ಲಿ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿ ಸ್ವಾತಂತ್ರ್ಯ ಸಂಗ್ರಾಮದಲ್ಲೂ ತಮ್ಮ ಅನನ್ಯ ಸೇವೆ ಗೈದಿದ್ದಾರೆಂದು ರೈತ ಮುಖಂಡ ತಾ.ಪಂ. ಮಾಜಿ ಅಧ್ಯಕ್ಷ ರವೀಂದ್ರಗೌಡ ಎಫ್. ಪಾಟೀಲ ಹೇಳಿದರು.
ನಾಗೇನಹಳ್ಳಿ ಗ್ರಾಮದಲ್ಲಿ ಶ್ರೀಮದ್ ಜಗದ್ಗುರು ಸಿದ್ದಾರೂಢ ಸ್ವಾಮೀಜಿ ಮತ್ತು ಶ್ರೀ ಬಸವರಾಜ ಮುಫಿನಾರ್ಯ ಸ್ವಾಮೀಜಿಯವರ 5 ದಿನದ ಪುರಾಣ ಮಂಗಲ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಐರಣಿ ಹೊಳಿಮಠದ ಬಸವರಾಜ ಮುಫಿನಾರ್ಯ ಸ್ವಾಮೀಜಿ ಸದ್ಗುರು ಸಿದ್ದಾರೂಢರ ಅನುಯಾಯಿಯಾಗಿದ್ದು ಅಂತಹ ಮಹಾನ್ ಪುರುಷರು ನಡೆದಾಡಿದ ಅವರ ಕರ್ಮಭೂಮಿಯಲ್ಲಿ ಜನಿಸಿದ ನಾವೆಲ್ಲರೂ ಧನ್ಯರು ಎಂದರು. ಪುರಾಣ ಮಂಗಳದಂತಹ ಇಂಥಹ ಕಾರ್ಯಕ್ರಮಗಳಿಗೆ ತಾಯಂದಿರು ತಪ್ಪದೆ ತಮ್ಮ ಮಕ್ಕಳನ್ನು ಕರೆತಂದು ಅವರ ಭವಿಷ್ಯ ಉಜ್ವಲವಾಗಲಿಕ್ಕೆ ಕಾರಣಿಭೂತರಾಗಬೇಕಲ್ಲದೆ ಟಿ.ವಿ, ಮೊಬೈಲ್ ಗೀಳಿನಿಂದ ತಮ್ಮ ಮಕ್ಕಳನ್ನು ರಕ್ಷಿಸಿ ಸಂಸ್ಕಾರವಂತರನ್ನಾಗಿ ಮಾಡಬೇಕೆಂದರು.
ಅಧ್ಯಕ್ಷತೆಯನ್ನು ಜಯನಗೌಡ ಹ ಮುದಕನಗೌಡ್ರ ವಹಿಸಿದ್ದರು. ದಿವ್ಯ ಸಾನ್ನಿಧ್ಯವನ್ನು ಪ್ರಿಯಾನಂದ ಸ್ವಾಮೀಜಿ ಸಿದ್ದಾರೂಢ ಮಠ ಕುಪ್ಪೇಲೂರ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಭುಗೌಡ ಹ ಗೋಂವಿದಗೌಡ್ರ, ಸಿದ್ದಾರೂಢ ದಾಸಣ್ಣನವರ ಆಗಮಿಸಿದ್ದರು. ಸಿದ್ದನಗೌಡ ಗೋವಿಂದಗೌಡ್ರ ಆಗಮಿಸಿದ್ದರು. ಸಾನ್ನಿಧ್ಯವನ್ನು ಮಾತೋಶ್ರೀ ಅನ್ನಪೂರ್ಣಮ್ಮನವರು ವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಷಣ್ಮುಖನಗೌಡ ಸಣ್ಣಹನುಮನಗೌಡ್ರ ನೆರವೇರಿಸಿದರು. ಹನುಮಂತಗೌಡ ಪೊಲೀಸಗೌಡ್ರ ವಂದಿಸಿದರು. ಪ್ರತಿ ವರ್ಷದಂತೆ ಈ ವರ್ಷವು ನಡೆದ ಈ ಕಾರ್ಯಕ್ರಮದಲ್ಲಿ ಅನೇಕ ಸಾಧಕರನ್ನು, ಜನಪ್ರತಿನಿಧಿಗಳನ್ನು, ಹೋರಾಟಗಾರರನ್ನು ಸತ್ಕರಿಸಲಾಯಿತು.