ಇಂಡಿ

ಸಿದ್ದೇಶ್ವರ ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದೆ: ಕೊಪ್ಪ

ಸಿದ್ದೇಶ್ವರ ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದೆ: ಕೊಪ್ಪ

ಇಂಡಿ: ನುಡಿದಂತೆ ನಡೆದ ದೇವರು ವಿಜಯಪುರ ಜ್ಞಾನಯೋಗಾಶ್ರಮದ  ಸಿದ್ದೇಶ್ವರ ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದೆ. ಪೂಜ್ಯ ಗುರುಗಳು ಹೊರಗಡೆ ಸಂತರಾಗಿ ಕಂಡರೂ ಒಳಗಡೆ ನಮಗೆಲ್ಲ ಭಗವಂತನಾಗಿ ಗೋಚರಿಸಿದರು. ಅವರೊಂದಿಗಿನ ನಮ್ಮ ಒಡನಾಟ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತವಂತದ್ದಾಗಿದೆ ಎಂದು ಖ್ಯಾತ ಸಂಶೋಧಕ ಡಾ ಎಸ್‌.ಕೆ. ಕೊಪ್ಪ ಸ್ಮರಣೆ ಮಾಡಿ, ನುಡಿ ನಮನ ಸಲ್ಲಿಸಿದರು. 

ಬುಧವಾರ ಪಟ್ಟಣದ ಬಸವರಾಜೇಂದ್ರ ದೇವಸ್ಥಾನದಲ್ಲಿ ಶರಣ ಸಾಹಿತ್ಯ ಪರಿಷತ್ತು, ಮಹಿಳಾ ಕದಳಿ ವೇದಿಕೆ, ಬಸವರಾಜೆಂದ್ರ ಸತ್ಸಂಗ ಸಮಿತಿ, ಬಸವರಾಜೇಂದ್ರ ಗಜಾನನ ಯುವಕ ಮಂಡಳಿ ಹಾಗೂ ಅರವಿಂದೋ ಸೊಸೈಟಿ ಕೇಂದ್ರ ಇಂಡಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಶಿವೈಕ್ಯ ಸಿದ್ದೇಶ್ವರ ಮಹಾಸ್ವಾಮಿಜಿಯವರಿಗೆ ಸ್ಮರಣಾಂಜಲಿ ಕಾರ‌್ಯಕ್ರಮದಲ್ಲಿ ಅವರು ನುಡಿದರು. 

ಸತ್ಸಂಗ ಸಮಿತಿ ಅಧ್ಯಕ್ಷ ಐ.ಬಿ. ಸುರಪುರ, ಶಸಾಪ ಅಧ್ಯಕ್ಷ ಆರ್‌.ವಿ. ಪಾಟೀಲ, ಕದಳಿ ವೇದಿಕೆ ಅಧ್ಯಕ್ಷೆ ಗಂಗಾಬಾಯಿ ಗಲಗಲಿ, ಎನ್‌.ವಿ. ಹಂಜಗಿ, ಎಸ್‌.ಐ. ಸೂಗೂರ, ಹೆಚ್‌.ಎಸ್‌. ಎಳೆಗಾಂವ, ಎಸ್‌.ಎಸ್‌. ಈರನಕೇರಿ, ಕೆ.ಜಿ. ನಾಟಿಕಾರ, ಡಿ.ಎಸ್‌. ಹಿರೇಮಠ, ಎನ್‌.ಟಿ. ಸಂಗಾ, ರೇಣುಕಾ ಸಂಖ ಪೂಜ್ಯಶ್ರೀಗಳ ಆಧ್ಯಾತ್ಮಿಕ ಸೇವೆಯನ್ನು ಸ್ಮರಿಸಿ ನುಡಿ ನಮನ ಸಲ್ಲಿಸಿದರು. 

ನುಡಿ ನಮನ ಸಭೆಯಲ್ಲಿ ಪ್ರೊ ಎಂ.ಜೆ.  ಪಾಟೀಲ, ಅರವಿಂದ ಘಾಳಿಮಠ, ಶಿವಲಿಂಗಪ್ಪ ಪಟ್ಟದಕಲ್ಲ, ಸಿ.ಎಂ. ಉಪ್ಪಿನ, ಬಿ.ಎಸ್‌. ಪಾಟೀಲ, ಕಡಕೋಳ, ಜಾಮಗೊಂಡಿ, ಆರ್‌.ಎಸ್‌. ಪಾಟೀಲ ಉಪಸ್ಥಿತರಿದ್ದರು.  ಪಟ್ಟಣದ ಬಸವರಾಜೇಂದ್ರ ದೇವಸ್ಥಾನದಲ್ಲಿ ಶರಣ ಸಾಹಿತ್ಯ ಪರಿಷತ್ತು, ಮಹಿಳಾ ಕದಳಿ ವೇದಿಕೆ, ಬಸವರಾಜೆಂದ್ರ ಸತ್ಸಂಗ ಸಮಿತಿ, ಬಸವರಾಜೇಂದ್ರ ಗಜಾನನ ಯುವಕ ಮಂಡಳಿ ಹಾಗೂ ಅರವಿಂದೋ ಸೊಸೈಟಿ ಕೇಂದ್ರ ಇಂಡಿ ಅವರು ಸಿದ್ದೇಶ್ವರ ಶ್ರೀಗಳಿಗೆ ನುಡಿ ನಮನಸಲ್ಲಿಸಿದರು. 


ಸುದ್ದಿ ಓದಿ