ಕಾಯಕವೇ ಕೈಲಾಸ ಎಂದು ನಂಬಿದ ಭೋವಿ ಸಮಾಜ: ಬಸವರಾಜ
ಶಿಗ್ಗಾವಿ 16: ಕಾಯಕವೇ ಕೈಲಾಸ ಎಂದು ನಂಬಿ ಬದುಕುತ್ತಿರುವ ಸಮಾಜ ಭೋವಿ ಸಮಾಜ ಎಂದು ಉಪತಹಶೀಲ್ದಾರ ಬಸವರಾಜ ಹೊಂಕಣದವರ ಹೇಳಿದರು.
ಪಟ್ಟಣದ ತಹಶೀಲ್ದಾರರ ಕಾರ್ಯಾಲಯದಲ್ಲಿ ಕಾಯಕಯೋಗಿ ಗುರು ಸಿದ್ದರಾಮೇಶ್ವರರ 848 ನೇ ಜಯಂತೋತ್ಸವ ಕಾರ್ಯಕ್ರಮವನ್ನು ಮಾತನಾಡಿದರು.
ಕಲ್ಲು ಬಂಡೆಯಲ್ಲಿ ಶಿಲೆಯಲ್ಲಿ ಅರಳಿಸುವಂತ ಕಲೆಯನ್ನು ಹೊಂದಿದ ಭೋವಿ ಸಮಾಜವಾಗಿದ್ದು, ಈ ಸಮಾಜ ಎಲ್ಲ ರಂಗಗಳಲ್ಲಿ ಇನ್ನೂ ಮುಂದೆ ಬರಬೇಕಿದೆ ಎಂದು ಹೇಳಿದರು.
ನ್ಯಾಯವಾದಿ ಭೋವಿ ಸಮಾಜದ ಮುಖಂಡ ಹನಮಂತ ಬಂಡಿವಡ್ಡರ ಮಾತನಾಡಿ ಭೇದಭಾವವಿಲ್ಲದೆ ಒಗ್ಗಟ್ಟಿನಿಂದ ಗುರು ಸಿದ್ದರಾಮೇಶ್ವರರ ಜಯಂತಿ ಆಚರಣೆ ಮಾಡುತ್ತಿರುವದ ಸಂತಸ ತಂದಿದೆ ಎಂದರು.
ಭಾಜಪ ತಾಲೂಕಾ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ಕಷ್ಟ ಪಟ್ಟು ದುಡಿಯುವ ಸಮಾಜ ಭೋವಿ ಸಮಾಜ ಕಾಯಕತ್ವದಿಂದ ನಾಯಕತ್ವ ಪಡೆದುಕೊಳ್ಳುವ ಸಮಾಜ, ಇತರ ಸಮಜದೊಂದಿಗೆ ಬೆರೆತು ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿದೆ ಈ ಸಮಾಜ ಒಗ್ಗಟ್ಟಿನಿಂದ ಕೂಡಿದೆ ಎಂದರು.
ಭೋವಿ (ವಡ್ಡರ) ಸಮಾಜದ ತಾಲೂಕಾ ಅಧ್ಯಕ್ಷ ಅರ್ಜುನ ಹಂಚಿನಮನಿ, ಮುಖಂಡ ನಾಗರಾಜ ಹಾವೇರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಯ ಕರ್ನಾಟಕ ಸಂಘಟನೆಯ ತಾಲೂಕಾ ಅಧ್ಯಕ್ಷ ದುರಗಪ್ಪ ವಡ್ಡರ, ಗ್ರಾಪಂ ಸದಸ್ಯ ಹನಮಂತಪ್ಪ ತೆಮ್ಮಿನಕೊಪ್ಪ, ಮಾಜಿ ಪುರಸಭೆ ಅಧ್ಯಕ್ಷ ರಾಮು ಪೂಜಾರ, ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ವಿಶ್ವನಾಥ ಬಂಡಿವಡ್ಡರ, ಮುಖಂಡರಾರ ಆಂಜನೇಯಾ ಬಂಕಾಪೂರ, ಮಂಜುನಾಥ ಗುಡಗೇರಿ, ಮಹೇಶ ಕುರಂದವಾಡ, ಶೆಟ್ಟಪ್ಪ ವಡ್ಡರ, ಹನುಮಂತ ಬಾರಂಗಿ, ತಿಮ್ಮಣ್ಣ ವಡ್ಡರ, ನಾಗರಾಜ ವಡ್ಡರ, ವೆಂಕಟೇಶ ಬಂಡಿವಡ್ಡರ ಹನಮಂತಪ್ಪ ಬಡ್ನಿ, ಶಿವಾನಂದ ಬೊಮ್ಮನಹಳ್ಳಿ, ಹನಮಂತಪ್ಪ ಸಂಶಿ, ಯಲ್ಲಪ್ಪ ವಡ್ಡರ, ಬಸವರಾಜ ವಡ್ಡರ, ಸಂತೋಷ ಬಂಡಿವಡ್ಡರ, ಮಂಜುನಾಥ ಮಧುರಕರ, ವಾಸಪ್ಪ ವಡ್ಡರ, ಸಣ್ಣ ಹನಮಂತಪ್ಪ ಶಿವಳ್ಳಿ, ಮಂಜುನಾಥ ವಡ್ಡರ, ಹಾಲಪ್ಪ ವಡ್ಡರ, ಈರಪ್ಪ ವಡ್ಡರ, ರಾಜು ವಡ್ಡರ, ಹನಮಂತಪ್ಪ ವಡ್ಡರ, ಸೇರಿದಂತೆ ಸಮಾಜದ ಭಾಂದವರು, ಕಛೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.