ಶಿಗ್ಗಾವ್

ಕಾಯಕ ನಿಷ್ಟೆಯಿಂದ ಹೆಸರಾದವರು ಗುರು ಸಿದ್ದರಾಮೇಶ್ವರರು:ಶಿವಾನಂದ

ಕಾಯಕ ನಿಷ್ಟೆಯಿಂದ ಹೆಸರಾದವರು ಗುರು ಸಿದ್ದರಾಮೇಶ್ವರರು:ಶಿವಾನಂದ

ಶಿಗ್ಗಾವಿ 15: ಕಾಯಕ ನಿಷ್ಟೆಯಿಂದ ಹೆಸರಾದವರು ಗುರು ಸಿದ್ದರಾಮೇಶ್ವರರು, ಅವರು ವಿಶ್ವಕ್ಕೆ ಮಾದರಿಯಾಗಿದ್ದಾರೆ ಮತ್ತು ಅವರು ಒಂದೇ ಸಮೂದಾಯಕ್ಕೆ ಸೀಮಿತವಾದವರಲ್ಲಿ ವಿಶ್ವಕ್ಕೆ ಬೇಕಾದವರು ಎಂದು ಭಾಜಪ ತಾಲೂಕಾ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.

ಗುರುವಾರ ಪಟ್ಟಣದ ಅರ್ಜುನ ಹಂಚಿನಮನಿ ಅವರ ಕಾರ್ಯಾಲಯದಲ್ಲಿ ತಾಲೂಕಾ ಭೋವಿ (ವಡ್ಡರ) ಸಮಾಜದ ವತಿಯಿಂದ ಹಮ್ಮಿಕೊಂಡ ಕಾಯಕಯೋಗಿ ಗುರು ಸಿದ್ದರಾಮೇಶ್ವರರ 848 ನೇ ಜಯಂತೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಕಾಯಕದಿಂದ ಮಾತ್ರ ಮುಂದೆ ಬರಲು ಸಾಧ್ಯ ಎಂದು ಹೇಳಿಕೊಟ್ಟ ಗುರುವಿನ ವಾಣಿಯಂತೆ ಭೋವಿ (ವಡ್ಡರ) ಸಮಾಜದವರು ಕಾಯಕಯೋಗಿಗಳು ಕಲ್ಲನ್ನು ಹೊಡೆಯುದರಿಂದ ಹಿಡಿದು ಮನೆ ಕಟ್ಟುವದು, ಮೂರ್ತಿ ತಯಾರು ಮಾಡುವದು ಇವರ ಕೆಲಸವಾಗಿದೆ, ಜೊತೆಗೆ ಸ್ವಾವಲಂಬಿ ಜೀವನ ಇವರದು, ಇಂದು ಎಲ್ಲ ರಂಗಗಳಲ್ಲಿ ಮುಂದೆ ಬರುತ್ತಿದ್ದಾರೆ ಶಿಗ್ಗಾವಿಯಲ್ಲಿ ಭೋವಿ (ವಡ್ಡರ) ಸಮಾಜ ಒಗ್ಗಟ್ಟಾಗಿದ್ದು ಒಗ್ಗಟ್ಟಿನಿಂದ ಗುರುವಿನ ಜಯಂತಿ ಮಾಡುತ್ತಿರುದವು ಸಂತಸ ತಂದಿದೆ ಎಂದರು. 

ಭೋವಿ (ವಡ್ಡರ) ಸಮಾಜದ ತಾಲೂಕಾ ಅಧ್ಯಕ್ಷ ಅರ್ಜುನ ಹಂಚಿನಮನಿ ಮಾತನಾಡಿ ಸರ್ಕಾರದ ವತಿಯಿಂದ ತಾಲೂಕಾ ಆಡಳಿತದವರು ತಮ್ಮ ಕಛೇರಿಗಳಲ್ಲಿ ಗುರು ಸಿದ್ದರಾಮೇಶ್ವರರ ಜಯಂತಿಯನ್ನು ಆಚರಿಸುತ್ತಾರ ಆದರೆ ಕೋವಿಡ್ ಕಾರಣದಿಂದ ವಿಜೃಂಭಣೆಯಿಂದ ಆಚರಿಸದೇ ಸರಳವಾಗಿ ಆಚರಿಸುತ್ತಿದ್ದೆವೆ, ಗುರು ಸಿದ್ದರಾಮೇಶ್ವರರು ನಾಡಿಗೆ ಕಾಯಕದ ಮಹತ್ವವನ್ನು ಸಾರಿ ಹೇಳಿದ್ದಾರೆ ಅವರ ಕಾಯಕ ನಿಷ್ಠೆ ಇಂದು ಎಲ್ಲ ಸಮೂದಾಯದವರಿಗೂ ಮಾದರಿಯಾಗಿದೆ. ಆ ದೇಶೆಯಲ್ಲಿ ನಾವು ಇನ್ನಷ್ಟು ಸಂಘಟಿತರಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ ಕಾಯಕವೇ ದೇವರು ಎಂದು ಬಾಳೋಣ ಎಂದರು.

ಯುವ ಮುಖಂಡ ಆಂಜನೆಯ ಬಂಕಾಪೂರ ,ಹಡಪದ ಸಮಾಜದ ತಾಲೂಕಾ ಅಧ್ಯಕ್ಷ ಬಸವರಾಜ ಹಡಪದ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖಂಡ ಜಯ ಕರ್ನಾಟಕ ಸಂಘಟನೆಯ ತಾಲೂಕಾ ಅಧ್ಯಕ್ಷ ದುರಗಪ್ಪ ವಡ್ಡರ, ಗ್ರಾಪಂ ಸದಸ್ಯ ಹನಮಂತಪ್ಪ ತೆಮ್ಮಿನಕೊಪ್ಪ, ಮಾಜಿ ಪುರಸಭೆ ಅಧ್ಯಕ್ಷ ರಾಮು ಪೂಜಾರ, ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ವಿಶ್ವನಾಥ ಬಂಡಿವಡ್ಡರ, ಮಂಜುನಾಥ ಗುಡಗೇರಿ, ಮಹೇಶ ಕುರಂದವಾಡ, ಶೆಟ್ಟಪ್ಪ ವಡ್ಡರ, ಹನುಮಂತ ಬಾರಂಗಿ, ತಿಮ್ಮಣ್ಣ ವಡ್ಡರ, ನಾಗರಾಜ ವಡ್ಡರ, ವೆಂಕಟೇಶ ಬಂಡಿವಡ್ಡರ ಹನಮಂತಪ್ಪ ಬಡ್ನಿ, ಶಿವಾನಂದ ಬೊಮ್ಮನಹಳ್ಳಿ, ಹನಮಂತಪ್ಪ ಸಂಶಿ, ಯಲ್ಲಪ್ಪ ವಡ್ಡರ, ಬಸವರಾಜ ವಡ್ಡರ, ಸಂತೋಷ ಬಂಡಿವಡ್ಡರ, ಮಂಜುನಾಥ ಮಧುರಕರ, ವಾಸಪ್ಪ ವಡ್ಡರ, ಸಣ್ಣ ಹನಮಂತಪ್ಪ ಶಿವಳ್ಳಿ, ಮಂಜುನಾಥ ವಡ್ಡರ, ಹಾಲಪ್ಪ ವಡ್ಡರ, ಈರಪ್ಪ ವಡ್ಡರ, ರಾಜು ವಡ್ಡರ, ಹನಮಂತಪ್ಪ ವಡ್ಡರ, ಸೇರಿದಂತೆ ಸಮಾಜದ ಭಾಂದವರು ಉಪಸ್ಥಿತರಿದ್ದರು.

ಸುದ್ದಿ ಓದಿ