ಗುಳೇದಗುಡ್ಡಕ್ಕೆ ಶನಿವಾರ ಸಿದ್ದರಾಮಯ್ಯ
ಗುಳೇದಗುಡ್ಡ,ಜು.8: ಮಾಜಿ ಸಿ.ಎಂ. ಬಾದಾಮಿಯ ಶಾಸಕ ಸಿದ್ದರಾಮಯ್ಯನವರು ಜು.10ರಂದು ಗುಳೇದಗುಡ್ಡಕ್ಕೆ ಆಗಮಿಸಲಿದ್ದು ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುವರೆಂದು ಪ್ರಕಟಣೆ ತಿಳಿಸಿದೆ.
ಮಧ್ಯಾಹ್ನ 2-30 ಗಂಟೆಗೆ ತಾಲೂಕಿನ ಪರ್ವತಿ ಗ್ರಾಮದ ಈರಣ್ಣನ ಕೆರೆ ಆವರಣದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಪರ್ವತಿ ಹಾಗೂ ಗಂಜಿಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶಂಕು ಸ್ಥಾಪನೆ ಮಾಡಲಿದ್ದಾರೆ. ಮದ್ಯಾಹ್ನ 3 ಗಂಟೆಗೆ ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡುವ ಕಾರ್ಯಕ್ರಮ ಸರ್ಕಾರಿ ಬಲಕರ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ನಂತರ ಮದ್ಯಾಹ್ನ 3-30 ಗಂಟೆಗೆ ಗುಳೇದಗುಡ್ಡದಿಂದ ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣಿಸುವರೆಂದು ಪ್ರಕಟನೆ ತಿಳಿಸಿದೆ.