ಗುಳೇಗುಡ್ಡ

ಗುಳೇದಗುಡ್ಡಕ್ಕೆ ಮಂಗಳವಾರ ಸಿದ್ದರಾಮಯ್ಯ

ಗುಳೇದಗುಡ್ಡಕ್ಕೆ ಮಂಗಳವಾರ ಸಿದ್ದರಾಮಯ್ಯ

ಗುಳೇದಗುಡ್ಡ 12: ಶನಿವಾರ ರದ್ದಾದ ಕಾರ್ಯಕ್ರಮ ಮಂಗಳವಾರ ದಿ.13 ರಂದು ಆಯೋಜಿಸಲಾಗಿದ್ದೂ, ಮಾಜಿ ಸಿ.ಎಂ. ಬಾದಾಮಿಯ ಶಾಸಕ ಸಿದ್ದರಾಮಯ್ಯನವರು ಗುಳೇದಗುಡ್ಡಕ್ಕೆ ಆಗಮಿಸಲಿದ್ದು ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವರೆಂದು ಪ್ರಕಟಣೆ ತಿಳಿಸಿದೆ. 

ಮಧ್ಯಾಹ್ನ 2-30 ಗಂಟೆಗೆ ತಾಲೂಕಿನ ಪರ್ವತಿ ಗ್ರಾಮದ ಈರಣ್ಣನ ಕೆರೆ ಆವರಣದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಪರ್ವತಿ ಹಾಗೂ ಗಂಜಿಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶಂಕು ಸ್ಥಾಪನೆ ಮಾಡಲಿದ್ದಾರೆ. ಮದ್ಯಾಹ್ನ 3 ಗಂಟೆಗೆ  ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡುವ ಕಾರ್ಯಕ್ರಮ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿದೆ. 

ಕಾರ್ಯಕ್ರಮದ ನಂತರ ಗುಳೇದಗುಡ್ಡದಿಂದ ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣಿಸುವರೆಂದು ಪ್ರಕಟನೆ ತಿಳಿಸಿದೆ. 


ಸುದ್ದಿ ಓದಿ