ಗುಳೇಗುಡ್ಡ

ವೃಕ್ಷೋದ್ಯಾನಕ್ಕೆ ಸಿದ್ಧರಾಮಯ್ಯ ಸೂಚನೆ

ವೃಕ್ಷೋದ್ಯಾನಕ್ಕೆ ಸಿದ್ಧರಾಮಯ್ಯ ಸೂಚನೆ

ಗುಳೇದಗುಡ್ಡ19:  ಗುಳೇದಗುಡ್ಡ ಪಟ್ಟಣದ ಹರದೊಳ್ಳಿ ಅರಣ್ಯ ಪ್ರದೇಶದಲ್ಲಿ ವೃಕ್ಷೋದ್ಯಾನಕ್ಕೆ  ನಿರ್ಮಿಸಲು ಕ್ರಮಕೈಗೊಳ್ಳುವಂತೆ ಮಾಜಿ ಸಿ.ಎಂ., ಬಾದಾಮಿ ಶಾಸಕ ಸಿದ್ಧರಾಮಯ್ಯನವರು ಬೆಂಗಳೂರಿನ ಕೃ.ಭಾ.ಜ. ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಸೂಚಿಸಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣಕ್ಕೆ ಸಮೀಪವಿರುವ ಹರದೊಳ್ಳಿ ವಾರ್ಡಿನ ಅರಣ್ಯ ಪ್ರದೇಶವಾಗಿರುವ ಸರ್ವೆ ನಂ.97 ರಲ್ಲಿ ಸಾರ್ವಜನಿಕರ ಬೇಡಿಕೆಯಂತೆ ಸದರ ಪ್ರದೇಶದಲ್ಲಿ ಹಸಿರು ಹೊದಿಕೆ ಹೆಚ್ಚಿಸಲು, ಪರಿಸರ ಅಭಿವೃದ್ಧಿ ಪಡಿಸಲು ಮತ್ತು ಸಾರ್ವಜನಿಕರ ವಾಯುವಿಹಾರಕ್ಕೆ ಅನುಕೂಲವಾಗುವಂತೆ ಅಂದಾಜು 15 ಎಕರೆ ಪ್ರದೇಶದಲ್ಲಿ  ತಮ್ಮ ಅಧೀನದಲ್ಲಿರುವ ಅರಣ್ಯ ವಿಭಾಗದಿಂದ ವೃಕ್ಷೋದ್ಯಾನಕ್ಕೆ ನಿರ್ಮಾಣ  ಕಾಮಗಾರಿ ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ. 

 

ಸುದ್ದಿ ಓದಿ