ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆ ಖಂಡನೀಯ: ನ್ಯಾಮಗೌಡ
ಲೋಕದರ್ಶನ ವರದಿ,
ಜಮಖಂಡಿ 07: ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಇಲ್ಲ-ಸಲ್ಲಸ ಆರೋಪ ಮಾಡಲು ಮಾಜಿ ಸಿಎಂ ಸಿದ್ದರಾಮಯ್ಯಾನವರಿಗೆ ಯಾವುದೇ ಹಕ್ಕಿಲ್ಲ, ಅವರೋಬ್ಬ ವಿರೋಧಪಕ್ಷ ನಾಯಕರಾಗಿ ತಮ್ಮ ಬಾಯಿಯನ್ನು ಹಗುರವಾಗಿಸಿಕೊಂಡಿರುವುದು ಖಂಡನೀಯ. ಪ್ರಧಾನಿ ಹಾಗೂ ಸಿಎಂ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದನ್ನು ಹಿಂಪಡೆದು ಕ್ಷಮಾಪಣೆ ನೀಡಬೇಕು. ಇಲ್ಲದಿದ್ದರೆ ಬಿಜೆಪಿ ಉಗ್ರ ಹೋರಾಟ ನಡೆಸುವುದಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ ಎಚ್ಚರಿಸಿದರು.
ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖ್ಯಮಂತ್ರಿ ಸ್ಥಾನಕ್ಕೆ ಅಪಾರ ಗೌರವವಿದೆ. ಅದನ್ನು ಮರೆತ ಸಿದ್ದರಾಮಯ್ಯಾನವರು ನಾಯಿಮರಿಗೆ ಹೋಲಿಕೆ ಮಾಡಿ ಮಾತಾಡಿರುವುದು ಅವರ ಘನತೆ-ವ್ಯಕ್ತಿತ್ವಕ್ಕೆ ಶೋಭೆ ತರುವಂತದ್ದಲ್ಲ. ಯಾರೇ ಆದರೂ ತಮಗಿಂತ ಮೇಲಿನ ಹುದ್ದೆಯಲ್ಲಿನ ದೊಡ್ಡವರಿಗೆ ಗೌರವ ನೀಡುವುದು ಹಿಂದು-ಪರಂಪರೆ ಸಂಸ್ಕೃತಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಅವರನ್ನು ನಾಯಿಮರಿಗೆ ಹೋಲಿಕೆ ಮಾಡಿ ಮಾತನಾಡಿರುವುದು ಘೋರ ತಪ್ಪು, ಈ ಬಗ್ಗೆ ಮುಂದಿನ ಚುನಾವಣೆಯಲ್ಲಿ ಜನತೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಟಿಕೇಟ್ ಆಕಾಂಕ್ಷಿ;
ಮುಂಬರುವ ಚುನಾವಣೆಯಲ್ಲಿ ನಾನು ಕೂಡಾ ಜಮಖಂಡಿ ಮತಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾಗಿದ್ದು, ಹೈಕಮಾಂಡ ನನ್ನನು ಪರಿಗಣೆಗೆ ತೆಗೆದುಕೊಂಡು ಟಿಕೇಟ್ ನೀಡುವ ವಿಶ್ವಾಸವಿದೆ. ನಾನು ಕ್ಷೇತ್ರದ ಅಭಿವೃದ್ದಿಯನ್ನು ಮಾಡಲು ಸದಾ-ಸಿದ್ದವಾಗಿದೆನೆ. ಕ್ಷೇತ್ರದ ಜನತೆ ಯಾವುದಕ್ಕು ನನ್ನ ಕೈ ಬಿಡುವುದಿಲ್ಲ ಎಂಬ ನಂಬಿಕೆ ಇದೆ ಎಂದರು.
ಸೂಕ್ತ ನಿರ್ಧಾರ:
ಜಾರ್ಖಂಡದ ಶಿಖರಜೀ ಪವಿತ್ರ ಸ್ಥಳವನ್ನು ಪ್ರವಾಸೋದ್ಯಮ ಸ್ಥಾನ ಮಾಡುವುದನ್ನು ಕೈಬಿಟ್ಟು ಅದನ್ನು ಧಾರ್ಮಿಕ ಕ್ಷೇತ್ರವನ್ನಾಗಿ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕೇಂದ್ರ ಮತ್ತು ಜಾರ್ಖಂಡ ಸರ್ಕಾರ ತಮ್ಮ ನಿರ್ಧಾರವನ್ನು ಕೈ ಬಿಟ್ಟು ಜೈನ್ ಸಮೂದಾಯದ ಜನತೆಗೆ ಒಂದು ಪವಿತ್ರ ಕ್ಷೇತ್ರವನ್ನಾಗಿ ಉಳಿಸಿ ಕೊಡುವುದೆಂದು ಹೇಳಿದರು.
ಮೀಸಲಾತಿ ಹೆಚ್ಚಿಸಲಿ:
ಎಸ್ಸಿ-ಎಸ್ಟಿ ಜನಾಂಗಕ್ಕೆ ಮೀಸಲಾತಿ ಹೆಚ್ಚಿಸಿದಂತೆ ಪಂಚಮಸಾಲಿ ಹಾಗೂ ಇನ್ನಿತರ ಸಮೂದಾಯದ ಜನತೆಗೂ ಕೇಂದ್ರ-ರಾಜ್ಯ ಸರ್ಕಾರಗಳು ಮೀಸಲಾತಿಯನ್ನು ಹೆಚ್ಚಿಸಿ ಅವರುಗಳಿಗೆ ಶಿಕ್ಷಣ-ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಸಿಗುವಂತೆ ಮಾಡಬೇಕೆಂದು ಅವರು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಅರ್ಬನ್ ಬ್ಯಾಂಕ ನಿರ್ದೇಶಕ ನಂದೆಪ್ಪ ದಡ್ಡಿಮನಿ, ಮೂತರ್ಿ ಕಲಾಜಗೋಳ, ಪಾರೀಶ ಪಾಟೀಲ, ಶಿವಕುಮಾರ ಕುಲ್ಲೋಳ್ಳಿ ಇದ್ದರು.