ಮನರಂಜನೆ

'ಅಂಬುಜ' ಚಿತ್ರದಲ್ಲಿ ಶುಭಪೂಂಜಾ

'ಅಂಬುಜ' ಚಿತ್ರದಲ್ಲಿ ಶುಭಪೂಂಜಾ

ಬೆಂಗಳೂರು, ಆಗಸ್ಟ್ 5: ಸ್ಯಾಂಡಲ್ ವುಡ್ 'ಚಂಡ' ಚಿತ್ರ ಖ್ಯಾತಿಯ ನಟಿ ಶುಭಪೂಂಜಾ ಉತ್ತರ ಕರ್ನಾಟಕದ 'ಅಂಬುಜ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಶ್ವ ಪ್ರಖ್ಯಾತವಾಗುವ ಐತಿಹಾಸಿಕ "ಶ್ರೀ ರಾಮ ಮಂದಿರ" ದ ಶಿಲಾನ್ಯಾಸ ಸುಸಂದರ್ಭದ ಹಾಗೂ ನಟಿ ಶುಭಪೂಂಜ ಅವರ  ಹುಟ್ಟುಹಬ್ಬದ ಪ್ರಯುಕ್ತ ತಮ್ಮ ಎರಡನೇ ಚಿತ್ರದ ಶೀರ್ಷಿಕೆಯನ್ನು  ಬಿಡುಗಡೆ ಮಾಡುತ್ತಿರುವುದಾಗಿ 'ಅಂಬುಜ' ಚಿತ್ರ ನಿರ್ದೇಶಕ ಶ್ರೀನಿ ಹನುಮಂತರಾಜು ತಿಳಿಸಿದ್ದಾರೆ.

'ಅಂಬುಜ' ಇದೊಂದು ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆ ಆಧಾರಿತ ಚಿತ್ರವಾಗಿದೆ. 

ಈ  ಚಿತ್ರದ ಕಥೆ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ಕಾಶೀನಾಥ್ ಡಿ.ಮಡಿವಾಳರ್  ನಿರ್ವಹಿಕೊಂಡಿದ್ದಾರೆ‌. ಒಂದಷ್ಟು ಹೊಸ ಪ್ರತಿಭೆಗಳೊಂದಿಗೆ ಚಿತ್ರದ ಚಿತ್ರೀಕರಣವು  ಸೆಪ್ಟೆಂಬರ್ ಕೊನೆಯಲ್ಲಿ ಆರಂಭಮಾಡುವ ಯೋಜನೆ ಇದೆ ಎಂದು ನಿರ್ದೇಶಕ ಶ್ರೀನಿ ಹನುಮಂತರಾಜು  ತಿಳಿಸಿದ್ದಾರೆ.

ಶ್ರೀನಿ  ಅವರು 'ಕೆಲವು ದಿನಗಳ ನಂತರ' ಹಾರರ್ ಚಿತ್ರ ತೆರೆಗೆ ತರುವ ಮೂಲಕ ಮೊಟ್ಟ ಮೊದಲಿ ಬಾರಿಗೆ  ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದರು.


ಸುದ್ದಿ ಓದಿ