ಸಮಗ್ರ ಕೃಷಿ ಅಭಿಯಾನದ ರಥ ಯಾತ್ರೆಗೆ ಶ್ರೀಮಂತ ಚಾಲನೆ
ಶೇಡಬಾಳ 08: ದೇಶದ ಬೆನ್ನೆಲುಬಾಗಿರುವ ರೈತರ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಇದರ ಲಾಭವನ್ನು ರೈತರು ಪಡೆದುಕೊಳ್ಳುವಂತೆ ಕಾಗವಾಡ ಶಾಸಕ ಮಾಜಿ ಸಚಿವ ಶ್ರೀಮಂತ ಪಾಟೀಲ ಕರೆ ನೀಡಿದರು.
ಅವರು ಶುಕ್ರವಾರ ದಿ. 8ರಂದು ಕಾಗವಾಡ ಕೃಷಿಇಲಾಖೆಯಲ್ಲಿ ಹಮ್ಮಿಕೊಂಡಿದ್ದ ಸಮಗ್ರ ಕೃಷಿ ಅಭಿಯಾನದ "ಇಲಾಖೆಯ ನಡಿಗೆ ರೈತರ ಮನೆ ಬಾಗಿಲಿಗೆ" ವಾಹನದ ರಥ ಯಾತ್ರೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದರು.
ಕೃಷಿ ಇಲಾಖೆಯಲ್ಲಿ ಬರುವ ಯೋಜನೆಗಳ ಸಮಗ್ರ ಮಾಹಿತಿ ರೈತರಿಗೆ ಸಿಗಲಿ ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ವಾಹನದ ವ್ಯವಸ್ಥೆ ಕಲ್ಪಿಸಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಬಿತ್ತಿದ ಬೆಳೆಗಳಿಗೆ ಬರುವ ರೋಗಗಳು, ಕೀಟದ ಭಾದೆ, ರಾಸಾಯನಿಕ ಗೊಬ್ಬರ ಬಳಕೆ ಕುರಿತು ಮಾಹಿತಿ ಪಡೆದುಕೊಳ್ಳುವಂತೆ ಹೇಳಿದರು. ರೈತರು ತಮ್ಮ ತಮ್ಮ ಜಮೀನಿನ ಮಣ್ಣಿನ ಫಲವತ್ತತೆ ಅನುಗುಣವಾಗಿ ರಾಸಾಯನಿಕ ಗೊಬ್ಬರ ಬಳಸಿದಾಗ ಮಾತ್ರ ಅಧಿಕ ಇಳುವರಿ ಪಡೆಯಲು ಸಾಧ್ಯ, ಅಧುನಿಕ ಪದ್ಧತಿಯಿಂದ ಕೃಷಿ ಮಾಡಿ ಆರ್ಥಿಕವಾಗಿ ಸಬಲರಾಗುವಂತೆ ಹೇಳಿದರು.
ಅಥಣಿ ಸಹಾಯಕ ಕೃಷಿ ನಿರ್ದೇಶಕ ನಿಂಗಣ್ಣಗೌಡಾ ಬಿರಾದಾರ ಕೃಷಿ ಅಭಿಯಾನದ ಕುರಿತು ಸಮಗ್ರ ಮಾಹಿತಿಯನ್ನು ರೈತರಿಗೆ ನೀಡಿದರು.
ಕಾಗವಾಡ ಕೃಷಿ ಅಧಿಕಾರಿ ಶಾಂತಿನಾಥ ಬಿರಾದಾರ, ಎಮ್ ಪಿ ನರಗಟ್ಟಿ, ಶಿವಪುತ್ರ ಗುಂಜಗಾಂವ, ಉಮೇಶ ಹಾವರೆಡ್ಡಿ, ಅರುಣ ಪಾಟೀಲ, ಪ್ರವೀಣ ದೇಸಾಯಿ, ರೈತ ಮುಂಡರಾದ ಶಶಿಕಾಂತ ಜೋಷಿ, ಅಮಿತ ಪಾಟೀಲ, ಸಂತೋಷ ದಿಗ್ಗೆವಾಡಿ, ಪ್ರಕಾಶ ಪಾಟೀಲ, ಪ್ರಕಾಶ ಚೌಗುಲಾ, ಕಿರಣ ಎಂದಗೌಡರ, ಸಚಿನ ಜಗತಾಪ, ರವಿ ಪಾಟೀಲ, ವಿನಾಯಕ ಚೌಗುಲೆ, ಅರುಣ ಗಣೇಶವಾಡಿ ಸೇರಿದಂತೆ ಅನೇಕರು ಇದ್ದರು.