ಕಾಗವಾಡ

ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಶ್ರೀಮಂತ ಪಾಟೀಲ ಚಾಲನೆ

ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಶ್ರೀಮಂತ ಪಾಟೀಲ ಚಾಲನೆ

ಕಾಗವಾಡ 16: ಕಾಗವಾಡ ತಾಲೂಕಿನ ಐನಾಪೂರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಇಂದಿರಾ ನಗರದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ ಎಸ್.ಸಿ.ಪಿ ಯೋಜನೆಯಡಿಯಲ್ಲಿ 56ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಿಸುವ ಕಾಮಗಾರಿಗೆ ಕಾಗವಾಡ ಕ್ಷೇತ್ರ ಶಾಸಕರು, ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಮಂಗಳವಾರರಂದು ಐನಾಪೂರ ಇಂದಿರಾ ನಗರ ಎಸ್.ಸಿ ಕಾಲನಿಯಲ್ಲಿ ರಸ್ತೆಗಳ ಸುಧಾರಣೆಗಾಗಿ 2020-21ನೇ ಸಾಲಿನ ಲೆಕ್ಕಶೀರ್ಷಿಕೆ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ(ಎಸ್.ಸಿ.ಪಿ) ಓಣಿಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಿಸಲು ಶಾಸಕರು ಅನುದಾನ ಮಂಜೂರುಗೊಳಿಸಿಕೊಂಡಿದ್ದು, ಈ ಅನುದಾನದ ಕಾಮಗಾರಿಗೆ ಸಚಿವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಸಚಿವ ಶ್ರೀಮಂತ ಪಾಟೀಲರು ಕಾಮಗಾರಿಗೆ ಚಾಲನೆ ನೀಡಿ ಕಾಮಗಾರಿ ಬಗ್ಗೆ ಮಾಹಿತಿ ಪಡೆದುಕೊಂಡು ಲೊಕೋಪಯೋಗಿ ಇಲಾಖೆ ಅಭಿಯಂತರಾದ ಆರ್.ಪಿ.ಅವತಾಡೆ ಇವರಿಗೆ ಐನಾಪುರ ಇಂದಿರಾ ನಗರ ವಸತಿಯಲ್ಲಿ ಈಗಾಗಲೇ ಫೇವರ್ ಬ್ಲಾಕ್ ಅಳವಡಿಸಿ ರಸ್ತೆ ನಿರ್ಮಿಸಲಾಗುವುದಿದ್ದು, ಈ ವಸತಿಯ ಎಲ್ಲ ಓಣಿಗಳಲ್ಲಿ ಇದೇ ರೀತಿ ರಸ್ತೆ ಮತ್ತು ಚರಂಡಿ ನಿರ್ಮಿಸಲು ನಾನು ನಿರ್ಣಯ ಕೈಗೊಂಡಿದ್ದೇನೆ. ಕೂಡಲೆ ಈ ಕಾಮಗಾರಿಗೆ ಅವಶ್ಯಕತೆಯಿರುವ ಅನುದಾನಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದರು.

ಪೂಜಾ ಕಾರ್ಯಕ್ರಮದಲ್ಲಿ ಗ್ರಾಮದ ಕೆ.ಆರ್.ಇ.ಎಸ್. ಶಿಕ್ಷಣ ಸಂಸ್ಥೆ ಅಧ್ಯಕ್ಷ ದಾದಾಗೌಡ ಪಾಟೀಲ, ನಿರ್ದೇಶಕರಾದ ಮೋಹನ ಕಾರ್ಚಿ, ಪಟ್ಟಣ ಪಂಚಾಯತಿ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ, ಉಪಾಧ್ಯಕ್ಷ ಗೀತಾ ಕೆಂಗಾರ, ಸದಸ್ಯರಾದ ನಾಗಪ್ಪಾ ನಾಯಿಕ, ರತನ ಪಾಟೀಲ, ಗುತ್ತಿಗೆದಾರರಾದ ಮಹಾದೇವ ತೇಲಿ, ಸಿದ್ದರಾಯ ಗಾಡಿವಡ್ಡರ, ಕುಮಾರ ಗಾಡಿವಡ್ಡರ, ಯಶ್ವಂತ ಹುಗ್ಗಿ, ಸುನೀಲ ಅವಟಿ, ಸತ್ಯಪ್ಪಾ ಗಾಡಿವಡ್ಡರ ಸೇರಿದಂತೆ ಅನೇಕರು ಇದ್ದರು.

ಸುದ್ದಿ ಓದಿ