ಅಗ್ರಾಣಿ ಹಳ್ಳಕ್ಕೆ ಶ್ರೀಮಂತ ಪಾಟೀಲ ಭೇಟಿ: ಪರಿಶೀಲನೆ
ಕಾಗವಾಡ 24: ಕಾಗವಾಡ ಮತಕ್ಷೇತ್ರದ ಮುರಗುಂಡಿ ಗ್ರಾಮದ ಹತ್ತಿರ ಅಗ್ರಾಣಿ ಹಳ್ಳಕ್ಕೆ ನೀರು ಸಂಗ್ರಹಿಸಲು ಅಥಣಿ ಫಾರ್ಮರ್ಸ್ ಸಕ್ಕರೆ ಕಾರ್ಖಾನೆ ವತ್ತಿಯಿಂದ 11 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸೇತುವೆ ಕಮ್ ಬ್ಯಾರೇಜದಲ್ಲಿ ನೀರು ತುಂಬಿದ್ದು, ಈ ಕಾಮಗಾರಿಯನ್ನು ಬರಗಾಲದ ಭಗೀರಥ ಕಾಗವಾಡ ಶಾಸಕ ಹಾಗೂ ಶ್ರೀಮಂತ (ತಾತ್ಯಾ) ಪಾಟೀಲ ಅವರು ವೀಕ್ಷಣೆ ಮಾಡಿದರು.
ಸೇತುವೆ ಕಾಮಗಾರಿಯ ಬಗ್ಗೆ ಸಂಪೂರ್ಣವಾಗಿ ಸ್ಥಳೀಯ ಮುಖಂಡರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದು, ಈ ಸೇತುವೆಯಿಂದ ಸುತ್ತಮುತ್ತಲಿನ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ. ಆದ್ದರಿಂದ ಹಳ್ಳದ ನೀರಿನ ಪ್ರಮಾಣ ಕಡಿಮೆಯಾಗದಂತೆ ನೋಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ರೈತ ಮುಖಂಡರಾದ ಸುನೀಲ ಪಾಟೀಲ, ದಾದಾ ಪಾಟೀಲ, ಗೂಪಾಳ ಅಸ್ಕಿ, ಗುಂಡಪ್ಪ ನಾಯ್ಕಿ, ಸೇರಿದಂತ್ತೆ ಅನೇಕರು ಇದ್ದರು.