ರಾಣೆಬೆನ್ನೂರ

ಜನಪದಗೀತೆ ತತ್ವಪದಗಳಿಗೆ ಸಂತ ಶಿಶುನಾಳ ಶರೀಫರ ಕಾವ್ಯ ಅತ್ಯಂತ ಮಹತ್ವವಾಗಿದೆ : ನಾರಾಯಣ ಸ್ವಾಮಿ

ಜನಪದಗೀತೆ ತತ್ವಪದಗಳಿಗೆ ಸಂತ ಶಿಶುನಾಳ ಶರೀಫರ  ಕಾವ್ಯ ಅತ್ಯಂತ ಮಹತ್ವವಾಗಿದೆ : ನಾರಾಯಣ ಸ್ವಾಮಿ

ರಾಣೇಬೆನ್ನೂರು  22 : ನಾಡಿನ ಜಾನಪದ ಕಲೆಗಳಿಗೆ, ಸಂತ  ಶಿಶುನಾಳ ಶರೀಫರ ತತ್ವಪದ ಕಾವ್ಯಗಳು ಅತ್ಯಂತ ಮಹತ್ವ ಮತ್ತು ಮಾರ್ಮಿಕ  ಸಂದೇಶವನ್ನು ನೀಡುವಂತಾಗಿವೆ ಎಂದು ಹಳೇ ಹೊನ್ನತ್ತಿ ಗ್ರಾಮದ ನಾರಾಯಣ ಸ್ವಾಮಿ ಸೇವಾ ಸಮಿತಿಯ ಕೋಶಾಧ್ಯಕ್ಷ ನಾಗರಾಜ ಗುಡುಗೂರು ಹೇಳಿದರು.     

ಅವರು ರವಿವಾರ ಸಂಜೆ, ಹಳೇ ಹೊನ್ನತ್ತಿ ಗ್ರಾಮದ, ಶ್ರೀ ಸೂರ್ಯನಾರಾಯಣ ಸ್ವಾಮಿ ದೇವಸ್ಥಾನ ಆವರಣದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು, ಶ್ರೀ ಸಂತ ಶಿಶುನಾಳ ಶರೀಫರ ಜಯಂತೋತ್ಸವ, ಮತ್ತು  ಪುಣ್ಯ ಸ್ಮರಣೋತ್ಸವದ ನಿಮಿತ್ತವಾಗಿ, ಏರಿ​‍್ಡಸಲಾಗಿದ್ದ, ಹೂನ್ನಮ್ಮ ದೇವಿ ಕಲಾ ತಂಡದ ಕಲಾವಿದ, ಬಸವರಾಜ ಭಜಂತ್ರಿ ತಂಡದವರ ಜನಪದ ಸಂಗೀತ ಕಾರ್ಯಕ್ರಮ ಉದ್ಘಾಟಿ ಮಾತನಾಡಿದರು. ಕಲೆ ಮತ್ತು ಕಲಾವಿದರು ಈ ದೇಶದ ಮತ್ತು ನಾಡಿನ ಸಾಂಸ್ಕೃತಿಕ ಪರಂಪರೆಯ ಹರಿಕಾರರು, ಕಲಾವಿದರು ಉಳಿದು ಬೆಳೆಯಬೇಕಾದರೆ, ಇಲಾಖೆಯ ಜೊತೆಗೆ, ಸಾರ್ವಜನಿಕರು ಸಹಕಾರ ನೀಡಬೇಕಾದ ಅಗತ್ಯವಿದೆ ಎಂದರು.           

ಪ್ರಸ್ತುತ ದೇಶದಲ್ಲಿ ಪಾಚ್ಚಿ ಮಾತ್ಯ ಸಂಸ್ಕೃತಿ  ಭರಾಟೆಯಲ್ಲಿ ನಮ್ಮ ನೈಜ ಜನಪದ ಕಲೆ, ಸಾಹಿತ್ಯ ಮತ್ತು ಸಂಗೀತ ಅಳಿವಿನಂಚಿಗೆ ಸಾಗಿ, ನೇಪತ್ಯಕ್ಕೆ ಸರಿಯುವಂತಾಗಿದೆ ಎಂದು ವಿಷಾದಿಸಿದ ಅವರು, ಯುವ ಜನಾಂಗ, ನೈಜ ಕಲೆಯನ್ನು ಉಳಿಸಿ ಬೆಳೆಸಲು ಮುಂದಾಗಬೇಕಾದ ಇಂದಿನ ಅಗತ್ಯವಿದೆ ಎಂದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೇವಾ ಸಮಿತಿಯ ಸದಸ್ಯ, ಗ್ರಾಮದ ಕರಬಸಪ್ಪ ಹರವಿ ಅವರು ಸಂಸ್ಕೃತಿ ಸಾಹಿತ್ಯ ನಮ್ಮ ಬದುಕಿನ ಅವಿಭಾಜ್ಯ ಅಂಗ. ಸ್ವಾತಂತ್ರ್ಯ ಗಳಿಸುವಲ್ಲಿ ಅಂದಿನ ನಮ್ಮ ಜನಪದ ಕಲಾವಿದರು ನೀಡಿದ ಕೊಡುಗೆ, ಅಮೂಲ್ಯವಾಗಿದೆ ಎಂದರು. ಪುಣ್ಯ ಸ್ಮರಣೆ ಮತ್ತು ಜಯಂತೋತ್ಸವದಲ್ಲಿ ಪಾಲ್ಗೊಂಡ ನಾಗರಿಕರು, ಕಲಾವಿದ ಬಸವರಾಜ ಭಜಂತ್ರಿ ತಂಡದವರು ಸಾಧರ ಪಡಿಸಿದ ಜನಪದ ಗೀತೆ, ಲಾವಣಿ, ತತ್ವಪದಗಳು  ಮತ್ತಿತರ ಕಲಾ ಪ್ರಕಾರಗಳು, ಗಮನ ಸೆಳೆದವು. ಗ್ರಾಮದ ಯುವ ಮುಖಂಡರಾದ ಪ್ರಶಾಂತ ಕಂಬಳಿ, ಪುಟ್ಟಪ್ಪ ಭಜಂತ್ರಿ, ಫಕ್ಕೀರ​‍್ಪ, ಮಾಲತೇಶ ಹವಳಪ್ಪನವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ