ಒಪ್ಪತ್ತೇಶ್ವರ ಜಾತ್ರೋತ್ಸವ
ಗುಳೇದಗುಡ್ಡ 06: ಸಮೀಪದ ಇಂಜಿನವಾರಿ ಗ್ರಾಮದ ಶ್ರೀಒಪ್ಪತ್ತೇಶ್ವರ ಸಂಸ್ಥಾನಮಠದಲ್ಲಿ ಮಾ.7 ಮತ್ತು 8 ರಂದು ಒಪ್ಪತ್ತೇಶ್ವರ 10 ನೇ ರಥೋತ್ಸವ ಹಾಗೂ ಮಾರುತೇಶ್ವರ ಕಾರ್ತಿಕೋತ್ಸವ ನಡೆಯಲಿವೆ.
ಮಾ.7 ರಂದು ಮುಂಜಾನೆ ಗ್ರಾಮದ ಮಾರುತೇಶ್ವರ ಕಾರ್ತಿಕೋತ್ಸವ ಹಾಗೂ 9 ದಿನಗಳ ವರೆಗೆ ಹಮ್ಮಿಕೊಂಡ ಪುರಾಣ ಪ್ರವಚನ ಕಾರ್ಯಕ್ರಮದ ಮಹಾಂಗಲ ನಡೆಯಲಿದೆ.
ಮಾ. 8ರಂದು ಸಂಜೆ 5 ಗಂಟೆಗೆ ಒಪ್ಪತ್ತೇಶ್ವರ ಮಠದ 10 ನೇ ರಥೋತ್ಸವ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶ್ರೀಅಭಿನವ ಒಪ್ಪತ್ತೇಶ್ವರ ಶ್ರೀಗಳು ದಿವ್ಯ ಸಾನಿಧ್ಯ ವಹಿಸುವರು. ಕಮತಗಿ ಹಿರೇಮಠದ ಶ್ರೀಶಿವಕುಮಾರ ಶಿವಾಚಾರ್ಯ ಶ್ರೀಗಳು ನೇತೃತ್ವ ವಹಿಸುವರು. ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ, ಶಾಸಕ ಸಿದದ್ರಾಮಯ್ಯ ಅವರನ್ನು ಸನ್ಮಾನಿಸಲಾಗುವುದು.
ಹಾಲಿಗೇರಿಯ ಮುರುಗಯ್ಯ ಒಡೆಯರ ಅಧ್ಯಕ್ಷತೆ ವಹಿಸುವರು. ಸಂಸದ ಪಿ.ಸಿ.ಗದ್ದಿಗೌಡರ, ಜಿಪಂ ಮಾಜಿ ಉಪಾಧ್ಯಕ್ಷ ಹನಮಂತ ಮಾವಿನಮರದ, ಜಿಪಂ ಸದಸ್ಯೆ ಸರಸ್ವತಿ ಮೇಟಿ, ತಾಪಂ ಸದಸ್ಯೆ ದೇವಿಕಾ ಪಾದನಕಟ್ಟಿ, ಹಳದೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮಿಭಾಯಿ ನಕ್ಕರಗುಂದಿ, ಉಪಾಧ್ಯಕ್ಷೆ ಸುಜಾತಾ ಹುನಗುಂದ, ಬಸವನಗೌಡ ಗೌಡ್ರ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಇಂಜಿನವಾರಿ ಗ್ರಾಮದ ಗುರು ಹಿರಿಯರು ತಿಳಿಸಿದ್ದಾರೆ.