ಕುಷ್ಟಗಿ

ದುಶ್ಚಟಗಳಿಗೆ ದಾಸರಾಗುತ್ತಿರುವ ವ್ಯಕ್ತಿಗಳನ್ನು ಬದಲಾಹಿಸುವ ಶಕ್ತಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಇದೆ: ಶಾಸಕ ಅಮರೇಗೌಡ

ದುಶ್ಚಟಗಳಿಗೆ ದಾಸರಾಗುತ್ತಿರುವ ವ್ಯಕ್ತಿಗಳನ್ನು ಬದಲಾಹಿಸುವ ಶಕ್ತಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಇದೆ: ಶಾಸಕ ಅಮರೇಗೌಡ

ಕುಷ್ಟಗಿ 09: ಸಮಾಜದಲ್ಲಿ ದುಶ್ಚಟಗಳಿಗೆ ದಾಸರಾಗುತ್ತಿರುವ ವ್ಯಕ್ತಿಗಳನ್ನು ಬದಲಾಹಿಸುವ ಶಕ್ತಿ ಪರಮ ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಇದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು.  

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಪದ್ಮವಿಭೂಷಣ ರಾಜರ್ಷಿ ಪರಮ ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಡಾ. ಹೇಮಾವತಿ ವಿ. ಹೆಗ್ಗಡೆಯವರ ಕೃಪಾಶೀರ್ವಾದದಿಂದ ರವಿವಾರ ಬೆಳಿಗ್ಗೆ ಪಟ್ಟಣದ ಪಿ.ಸಿ.ಎಚ್‌. ಪ್ಯಾಲೇಸ್‌ನಲ್ಲಿ (ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ  ನಿರ್ಮಾಣಕ್ಕಾಗಿ) ಜಿಲ್ಲಾ ಮಟ್ಟದ ಗಾಂಧಿ ಸ್ಮೃತಿ ಹಾಗೂ ನವಜೀವನ ಸಮಿತಿಯ ಸದಸ್ಯರ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು   

ದುಶ್ಚಟಗಳಿಗೆ ದಾಸರಾದ ಮದ್ಯ ವ್ಯಸನಿಗಳು ಪೂಜ್ಯರು ಏರಿ​‍್ಡಸಿದ್ದ ಮಧ್ಯವರ್ಜನ ಶಿಬಿರಗಳಲ್ಲಿ ಭಾಗವಹಿಸಿ ಭಕ್ತಿ ಭಾವದಿಂದ ತಮ್ಮ ಚಟಗಳನ್ನು ತ್ಯಜಿಸಿ ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಧರ್ಮಸ್ಥಳ ಸಂಸ್ಥೆಯ ಪಾತ್ರ ಬಹು ಮುಖ್ಯವಾಗಿದೆ.  

ದೀನ, ದಲಿತ, ಬಡವರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬೆಳವಣಿಗೆ ಹೊಂದುವು ಸಲುವಾಗಿ  ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕು. ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಹೊಂದಲು ಸಂಸ್ಥೆಯಿಂದ ಕೋಟಿ ಕೋಟಿ ಹಣವನ್ನು ಕಡಿಮೆ ಬಡ್ಡಿಯಲ್ಲಿ ಮಹಿಳೆಯರಿಗೆ ಗುಂಪು ಸಾಲದ ರೂಪದಲ್ಲಿ ವಿತರಿಸಿ ಹಲವಾರು ಬಗೆಯ ಕಾಯಕದಲ್ಲಿ ತೊಡಗುವು ಕಾರ್ಯ ಪೂಜ್ಯರು ಮಾಡಿದ್ದಾರೆ ಶ್ಲಾಘನೀಯವಾಗಿದೆ ಎಂದು ಹೇಳಿದರು.  

ಮದ್ದಾನೇಶ್ವರಮಠದ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿದ್ದರು. ಜನಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಎಚ್ ಪಾಟೀಲ್ ಮಧ್ಯ ವ್ಯಸನಿಗಳು ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಂಬಾ ಸಹಕಾರಿಯಾಗಿದೆ. ಧರ್ಮಸ್ಥಳ ಮಂಜುನಾಥ ಮಹಾಸ್ವಾಮಿಯ ಆರ್ಶಿವಾದ ಸದಾ ನಮ್ಮ ನಿಮ್ಮೆಲ್ಲರ ಮೇಲಿ ಇರಲಿ ಎಲ್ಲರಿಗೂ ಶುಭವಾಗಲಿ ಎಂದು ಶುಭ ಹಾರೈಸಿದರು. ಜನಜಾಗೃತಿ ಪ್ರಾದೇಶಿಕ ವಿಭಾಗ ಪ್ರಾ ನಿರ್ದೇಶಕ ವಿವೇಕ್, ಬಿ. ಪಾಯಸ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ದೇವೇಂದ್ರ​‍್ಪ ಬಳೂಟಗಿ, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ವೀರೇಶ ಬಂಗಾರಶೆಟ್ಟರರು, ಜಿಲ್ಲಾ ಜನಜಾಗೃತಿ ವೇದಿಕೆ ಸಹಕಾರ್ಯದರ್ಶಿ ನೀಲಕಂಠಪ್ಪ ನಾಗಶೆಟ್ಟಿ, ಯೋಜನಾಧಿಕಾರಿ ಶೇಖರ್ ನಾಯ್ಕ್‌, ಜಿ.ಪಂ ಮಾಜಿ ಸದಸ್ಯ ಟಿ.ಜನಾರ್ಧನ ಹುಲಗಿ ಹಾಗೂ ಮಹಿಳಾ ಸಂಘದವರು ಹಾಗೂ ಕ್ಷೇತ್ರ ಧರ್ಮಸ್ಥಳ ಯೋಜನೆ ಬಿ.ಸಿ.ಟ್ರಸ್ಟ್‌ ನಿರ್ದೇಶಕರು, ಯೋಜನಾಧಿಕಾರಿಗಳುಅಧ್ಯಕ್ಷರು, ಪದಾಧಿಕಾರಿಗಳು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕ್ಷೇತ್ರ ಧರ್ಮಸ್ಥಳ ಯೋಜನೆ ಬಿ.ಸಿ.ಟ್ರಸ್ಟ್‌ ಪದಾಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ