ಕಾಗವಾಡ

ಭಕ್ತಿ ಭಾವದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ

ಭಕ್ತಿ ಭಾವದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ

ಲೋಕದರ್ಶನ ವರದಿ 

ಕಾಗವಾಡ 19: ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉಗಾರದಲ್ಲಿ ಭಕ್ತಿ ಭಾವದಿಂದ ನೆರವೇರಿತು. ಗುರುವಾರ ಉಗಾರದ ಶ್ರೀ ಕೃಷ್ಣ ದೇವಸ್ಥಾನದ ಸದ್ಭಕ್ತರು ಶ್ರೀಕೃಷ್ಣನ ಪ್ರತಿಮೆಯೊಂದಿಗೆ ಸುಮಂಗಲೆಯರಿಂದ ಜಲಕುಂಭ ತಗೆದುಕೊಂಡು ಭವ್ಯ ಮೆರವಣಿಗೆ ಹಮ್ಮಿಕೊಂಡಿದ್ದರು.  

ಉಗಾರದ ಶ್ರೀಕೃಷ್ಣ ದೇವಸ್ಥಾನದ ಅರ್ಚಕರಾಗಿ ಅಲ್ಪಸಂಖ್ಯಾತರ ಸಮಾಜದ ಬಾಂಧವ ಬಾಪು ತಾಶೇವಾಲೆ ಇವರು ಕಳೆದ ಅನೇಕ ವರ್ಷಗಳಿಂದ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕೃಷ್ಣ ಮಂದಿರಕ್ಕೆ ಹಿಂದೂ ಮತ್ತು ಮುಸ್ಲಿಂ ಬಾಂಧವರು ಒಂದಾಗಿ ತಮ್ಮ ಭಕ್ತಿ ಭಾವ ಸಲ್ಲಿಸುತ್ತಾರೆ. ಇದು ಒಂದು ಈ ಭಾಗದಲ್ಲಿ ಹಿಂದೂ ಮುಸ್ಲಿಂ ಬಾಂಧವರ ಭಾವೈಕ್ಯತೆ ಎದ್ದು ಕಾಣುತ್ತಿದೆ. 

ಗುರುವಾರ ರಾತ್ರಿ ಶ್ರೀಕೃಷ್ಣ ಪಾರಿಜಾತ ಹಾಗು ಮಧ್ಯ ರಾತ್ರಿ ಶ್ರೀಕೃಷ್ಣ ತೊಟ್ಟಿಲ ಪೂಜೆ ಕಾರ್ಯಕ್ರಮ ಜರುಗಿತು. 

ಶ್ರೀ ಕೃಷ್ಣ ಪಲ್ಲಕ್ಕಿ ಮೆರವಣಿಗೆ ಕಾರ್ಯಕ್ರಮದಲ್ಲಿ ಸದ್ಭಕ್ತರಾದ ಅಶೋಕ್ ಶೆಟ್ಟಿ, ಜೆ.ಎಂ.ಪಾಟೀಲ್, ಸಂಭಾಜಿ ಶಿರ್ಕೆ, ರಘುನಾಥ್ ಲಾಟವಡೆ, ಬೀರದೇವ್ ವಾವರೆ, ರಮೇಶ್ ಇಂಗವಲೆ, ಹರೀಶ್ ಗೋಖಲೆ, ಸುರೇಶ್ ಮೇಟಕರಿ ಸೇರಿದಂತೆ ಅನೇಕ ಮಹಿಳಾ ಸದ್ಭಕ್ತರು ಪಾಲ್ಗೊಂಡಿದ್ದರು. 


ಸುದ್ದಿ ಓದಿ