ರಂಗನಾಥ ಸ್ವಾಮಿ ಮಠದಲ್ಲಿ ಶ್ರಾವಣ ಮಾಸ: ಸೆ.15ರಂದು ವಿಭೂತಿ ವಿತರಣೆ
ರಾಣೇಬೆನ್ನೂರು ೦೪: ರಂಗನಾಥ ನಗರದ ಇತಿಹಾಸ ಪ್ರಸಿದ್ಧ ಶ್ರೀ ರಂಗನಾಥ ಸ್ವಾಮಿ ಮಠದಲ್ಲಿ ಪ್ರತಿ ವರ್ಷದ ಸಂಪ್ರದಾಯದಂತೆ ಶ್ರೀ ನಿರಂಜನ ಮೌನಿ ಶಿವಯೋಗೀಶ್ವರ ಸದ್ಗುರುಗಳ ಶ್ರಾವಣ ಮಾಸದ ಧಾರ್ಮಿಕ ಪೂಜಾ ಕಾರ್ಯಗಳು ಕಳೆದ ಆಗಸ್ಟ್ 17,2023 ರಿಂದ ಆರಂಭವಾಗಿದ್ದು, ಸೆಪ್ಟೆಂಬರ್ 15 ರವರೆಗೆ ಜರುಗಲಿದೆ. ಶ್ರೀ ಮಠದಲ್ಲಿ ನಿತ್ಯವೋ ಶ್ರೀ ಸ್ವಾಮಿಗೆ ಸಾಯಂಕಾಲ ಅಭಿಷೇಕ, ಜರಗುವುದು. 14ರಂದು ಗುರುವಾರ ಸೂರ್ಯೋದಯ ಕಾಲ ಶಿವ ನಾಮ ಸ್ಮರಣೆ, ನಿರಂತರ ಭಜನೆ ಪ್ರಾರಂಭವಾಗಿ ಶುಕ್ರವಾರ 15ರಂದು ಮುಂಜಾನೆ ಸೂರ್ಯೋದಯ ಕಾಲ ಸಾಂಗಮಂಗಲ ಕೊಳ್ಳುವುದು. ಅಂದೇ ರಾತ್ರಿ 8 ಗಂಟೆಗೆ ಮೌನಿ ಶಿವಯೋಗಿಸ್ವರರ ಪರಂಪರೆಯಂತೆ ಭಕ್ತಾದಿಗಳಿಗೆ ಭಸ್ಮ ( ವಿಭೂತಿ) ವಿತರಣೆಯಾಗಲಿದೆ ಎಂದು ಶ್ರೀ ಮಠದ ಸೇವಾ ಸಮಿತಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.