ಕಾಗವಾಡ

ದೇವಸೇನ ಮುನಿ ಮಾಹಾರಾಜರಿಗೆ ವಿನಯಾಂಜಲಿ

ದೇವಸೇನ ಮುನಿ ಮಾಹಾರಾಜರಿಗೆ ವಿನಯಾಂಜಲಿ

ಕಾಗವಾಡ 26: ತಾಲೂಕಿನ ಶೇಡಬಾಳದ ಶಾಂತಿಸಾಗರ ಜೈನ ಆಶ್ರಮದಲ್ಲಿ ಆಚಾರ್ಯ ದೇವಸೇನ ಮುನಿ ಮಾಹಾರಾಜರಿಗೆ ಅವರ ಮುನಿ ಸಂಘ ಹಾಗೂ ಶ್ರಾವಕ-ಶ್ರಾವಕಿಯರು ಇಂದು ಭಾವಪೂರ್ಣ ವಿನಯಾಂಜಲಿ ಅರ್ಪಿಸುವ ಕಾರ್ಯಕ್ರಮ ಜರುಗಿತು. 

ಕೊಲ್ಲಾಪುರ ಜಿಲೆಯ ನಾಂದಿನಿ ಜೈನಮಠದ ಜಿನಸೇನ ಭಟ್ಟಾರಕ ಸ್ವಾಮೀಜಿಯವರು ನನ್ನ ದೀಕ್ಷಾ ಗುರುಗಳಾದ ದೇವಸೇನಾ ಮಹಾರಾಜರು ಶಾಂತಮೂರ್ತಿಗಳಾಗಿದ್ದರು. ಧರ್ಮದ ಬಗ್ಗೆ ಅನೇಕ ವಿಷಯಗಳಲ್ಲಿ ನನಗೆ ಮಾರ್ಗದರ್ಶನ ನೀಡಿದ್ದಾರೆ.  ನನ್ನ ಅಲ್ಪ ವಯಸಿನಲ್ಲಿ ಭಟ್ಟಾರಕ ದೀಕ್ಷೆ ನೀಡುವಾಗ ಅನೇಕ ಮಾಹಿತಿಗಳನ್ನು ನೀಡಿದ್ದಾರೆ. ನಾನು ಅವರು ನೀಡಿರುವ ಜವಾಬ್ದಾರಿ ಪಾಲಿಸುತ್ತಿದ್ದೇನೆ. ನನ್ನ ಗುರುಗಳನ್ನು ಕಳೆದುಕೊಂಡಿದ್ದೇನೆ ಎಂದು ಹೇಳುತ್ತಾ ಕಣೀ್ಣರು ಹಾಕುತಾ ವಿನಯಾಂಜಲಿ ಸಲ್ಲಿಸಿದರು. 

ಆಚಾರ್ಯ ಶಾಂತಿಸೇನ ಮುನಿ ಮಹಾರಾಜರು, ಮತ್ತು ಸೂಪಾರ್ಶ್ವ ಮುನಿ ಮಹಾರಾಜರು ನಮ್ಮ ಮುನಿ ಗುರುಗಳಾದ ಸುಬಲ್‌ಸಾಗರ ಮುನಿ ಮಹಾರಾಜರ ಸಂಘದ ದಿಟ್ಟ ಮುನಿಗಳು ಎಂದು ದೇವಸೇನ ಮುನಿಗಳನ್ನು ಕಂಡಿದ್ದೇವೆ. ಅವರಿಗೆ ಹೃದಯಾಘಾತವಾಗಿದ್ದರೂ ಏನಾಗಿದ್ದರು ದೇಹಕ್ಕೆ ಮಾತ್ರ ನನ್ನ ಮನಸ್ಸಿಗೆ ಅಲ್ಲ. ದೇಹ ಬೇರೆ ಮನಸ್ಸು ಬೇರೆ ಎಂದು ಹೇಳಿದಂತ ಮಾತು ತ್ಯಾಗಿ ಮುನಿಗಳಿಗೆ ಒಂದು ದಾರೀದೀಪವಾಗಿದೆ ಎಂದು ವಿನಯಾಂಜಲಿ ಸಲ್ಲಿಸಿದರು.  

ಮುನಿ ಸಂಘದ ಮಾತಾಜಿಗಳಾದ ಆರ್ಯಿಕಾ ಅಜಿತ್‌ಮತಿ ಮಾತಾಜಿ, ಮತ್ತು ಸುಮತಿಮತಿ ಮಾತಾಜಿ ಇವರು ಗುರು ಮುನಿಗಳಾದ ದೇವಸೇನೆ ಮುನಿ ಮಹಾರಾಜರ ಬಗ್ಗೆ ಮಾತನಾಡಿದರು. 

ಶಾಂತಿಸಾಗರ ಆಶ್ರಮದ ವ್ಯವಸ್ಥಾಪಕ ರಾಜು ನಾಂದ್ರೆ, ವಿಜಯಪುರ ಜಿಲ್ಲೆಯ ಉದ್ಯಮಿಗಳಾದ ಅಜಿತ್ ಕುಚ್ಚುನೂರ, ಪ್ರತಿಷ್ಠಾಚಾರಿಗಳಾದ ಆನಂದ್ ಉಪಾಧ್ಯ ಮುನಿ ಮಹಾರಾಜರಿಗೆ ವಿನಯಾಂಜಲಿ ಸಲ್ಲಿಸಿದರು. 

ಕಾರ್ಯಕ್ರಮದಲ್ಲಿ ಮುಂಬೈಯ ಉದ್ಯಮಿಗಳಾದ ಸುದರ್ಶನ್ ದ್ದೊಟಿಯಾ, ಪಂಕಜ್ ಕೊಠಡಿಯ, ಇದ್ದರು. 


ಸುದ್ದಿ ಓದಿ