ನ್ಯಾಯಾಲಯದ ತೀರ್ಪಿಗೆ ತಲೆಬಾಗಬೇಕು
ಲಕ್ಷ್ಮಣ್ ಸೌದಿ ಹೇಳಿಕೆ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿಕಟ್ಟಿಸಿದ 14 ಮಳಿಗೆಗಳ ಉದ್ಘಾಟನಾ ಕಾರ್ಯಕ್ರಮ
ಕಾಗವಾಡ 11: ಹಿಜಾಬ್ ವಿವಾದ ನ್ಯಾಯಾಲಯದಲ್ಲಿದೆ ನ್ಯಾಯಾಧೀಶರು ಯಾವ ತಿರ್ು ನೀಡುತ್ತಾರೆ ಅದಕ್ಕೆ ನಾವು ತಲೆಬಾಗ ಎಂದು ಮಾಜಿ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ್ ಸೌದಿ ಕಾಗವಾಡದಲ್ಲಿ ಹೇಳಿದರು.
ಶುಕ್ರವಾರ ರಂದು ಕಾಗವಾಡದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಇವರಿಂದ ಕಟ್ಟಿಸಿದ 14 ಮಳಿಗೆಗಳ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಉದ್ಘಾಟಿಸಿ ಮಾತನಾಡಿದರು.
ಸನ್ 2019-20 ನೇ ಸಾಲಿನಲ್ಲಿ 80 ಲಕ್ಷ ರೂ ವೆಚ್ಚದಲ್ಲಿ ಮಳಿಗೆಗಳು ಕಟ್ಟಿಸುವ ಕ್ರಿಯಾಯೋಜನೆವಾಗಿತ್ತು. ಇದರಿಂದ 14 ಮಳಿಗೆಗಳು ರಾಜ್ಯವಾಗಿದ್ದು ಇದರ ಉದ್ಘಾಟನೆ ಲಕ್ಷ್ಮಣರಾವ್ ಸವದಿಯವರು ಮಾಡಿ ಶುಭ ಹಾರೈಸಿದರು.
ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಇವರಿಗೆ ಮಾಧ್ಯಮದವರು ನಿಮ್ಮ ಮಂತ್ರಿಮಂಡಲದ ಹಿರಿಯರಾದ ಕೆಎಸ್ ಈಶ್ವರ್ಪ ಇವರು ಹೊಸ ದೆಹಲಿಯ ಕೆಂಪುಕೋಟೆಯ ಮೇಲೆ ಕೇಸರಿ ಬಾವುಟ ಹಾರಿಸುವುದು ಹೇಳಿಕೆ ನೀಡಿದ್ದಾರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದಾಗ ಆ ಹೇಳಿಕೆ ಅವರ ವೈಯಕ್ತಿಕ ವಾಗಿದೆ ನನಗೆ ತಿಳಿದಂತೆ ಕೇಸರಿ ಇದು ಶಾಂತಿಯ ಸಂಕೇತ ಇದು ಯಾರಿಗೆ ಸೀಮಿತವಲ್ಲ ಪ್ರತಿಯೊಬ್ಬರು ಕೇಸರಿ ಮೇಲೆ ನಂಬಿಕೆ ಅಭಿಮಾನ ಇಟ್ಟುಕೊಂಡಿದ್ದಾರೆ. ಎಂದು ಹೇಳಿ ಈ ಪ್ರಶ್ನೆಯಿಂದ ಜಾರಿಕೊಂಡರು.
ಕಾಗವಾಡ ತಾಲೂಕಿನಲ್ಲಿ ಪ್ರತ್ಯೇಕ ಕೃಷಿ ಉತ್ಪನ್ನ ಮಾರುಕಟ್ಟೆ ಸ್ಥಾಪನೆ ಮಾಡಿಕೊಳ್ಳಬೇಕೆಂದು ಕೇಳಿದಾಗ ಇದು ಜನರ ಬೇಡಿಕೆ ಆಗಿದ್ದು ಹೊಸ ತಾಲೂಕು ರಚನೆ ಆಗಿದ್ದು ಯಾವ ಕಾಲಕ್ಕೆ ನಾನು ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲರು ಕಾಗವಾಡ ಸ್ವತಂತ್ರ ಮಾರುಕಟ್ಟೆ ಮಾಡುವುದಾಗಿ ಲಕ್ಷ್ಮಣ ಸವದಿ ಭರವಸೆ ನೀಡಿದರು.
ಸಂಪೂರ್ಣ ರಾಜ್ಯದಲ್ಲಿ ಅಥಣಿ ತಾಲೂಕ ಅತಿ ಹೆಚ್ಚು ಕಬ್ಬು ಬೆಳೆಯುವ ತಾಲೂಕುವಾಗಿದೆ. ಇಲ್ಲಿಗೆ 72 ಲಕ್ಷ ಟನ್ ಕಬ್ಬು ಬೆಳೆ ಬೆಳೆದಿದೆ. ಐದು ಸಕ್ಕರೆ ಕಾರ್ಖಾನೆಗಳು ತೋರಿಸುತ್ತೇವೆ ಬರುವ ವರ್ಷ ಇನ್ನೊಂದು ಸಕ್ಕರೆ ಕಾರ್ಖಾನೆ ಪ್ರಾರಂಭಗೊಳ್ಳಲಿದೆ ಎಂದು ಹೇಳಿ ಮಂಡ್ಯ ಜಿಲ್ಲೆ ಕಿಂತ ಅಥಣಿ ತಾಲೂಕಿನಲ್ಲಿ ಹೆಚ್ಚಿನ ಕೊಬ್ಬು ಬೆಳೆಯುತ್ತಿದೆ ಆದರೆ ನಮಗೆ ಪ್ರಚಾರ ಸಿಗುವುದಿಲ್ಲ ಎಂದರು.
ಬಿಜೆಪಿ ಪಕ್ಷದ ಯುವ ಧುರಿಣ ಶ್ರೀನಿವಾಸ ಪಾಟೀಲ ಮಾತನಾಡಿ, ಕಾಗವಾಡ ತಾಲೂಕಿನ ಯುವಕರು ಹೆಚ್ಚಿನ ಶ್ರಮಪಡುವ ಯುವಕರು ಆಗಿದ್ದಾರೆ. ಇಲ್ಲಿಯ ಮಳಿಗೆಗಳು ಪ್ರತಿತಿಂಗಳ 24 ಸಾವಿರ ರೂಪಾಯಿ ಬಾಡಿಗೆ ತಮ್ಮ ಉದ್ಯೋಗ ಕೈಗೊಳ್ಳುತ್ತಿದ್ದಾರೆ. ಇವರ ಧೈರ್ಯ ಮೆಚ್ಚಿಗೆಯಾಗುತ್ತದೆ ಇವರಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಎಪಿಎಂಸಿ ಅಧ್ಯಕ್ಷ ಗಟಿಬಾಳಪ್ಪ ಗುಡ್ಡಾಪುರ್ ಇವರಿಂದ ಅತಿಥಿಗಳಿಗೆ ಸನ್ಮಾನ ನೀಡಲಾಯಿತು. ಉಪಾಧ್ಯಕ್ಷ ಶಿವಾನಂದ ಮಗದುಮ, ಸಂಚಾಲಕರಾದ ರವೀಂದ್ರ ಪೂಜಾರಿ, ಅನಿಲ್ ಕಡೊಲೆ, ನಂದಿನಿ ರಾಮು ಸೌದತ್ತಿ, ಎಪಿಎಂಸಿ ಕಾರ್ಯದರ್ಶಿ ಶಿವರಾಜ್ ಗೋಟೆ, ರಾಜು ಅಲ್ಬಾಳ, ಡಿ.ಬಿ.ಬಸಗೌಡ, ಚಂಪಾ ಶಿವಧರ, ಕಾಗವಾಡದ ಹಿರಿಯರಾದ ವಿನಾಯಕ ಬಾಗಡಿ, ತಾತ್ಯಾ ಪಾಟೀಲ, ಕಾಕಾ ಪಾಟೀಲ, ರಮೇಶ ಚೌಗುಲೆ, ಜ್ಯೋತಿಕುಮಾರ ಪಾಟೀಲ, ಅರುಣ ಜೋಶಿ, ಎಸ್.ಎಸ್.ಶೇಡಶ್ಯಾಳೆ ಮತ್ತು ಎಲ್.ಎಸ್ ಗ್ರೂಪಿನ ಎಲ್ಲ ಸದಸ್ಯರು, ಎಪಿಎಂಸಿ ಮಳಿಗೆಗಳ ಮಾಲಿಕರು ಮತ್ತು ಎಲ್ಲ ಸಂಚಾಲಕರು ಉಪಸ್ಥಿತರಿದ್ದರು.