ಶೂಟಿಂಗ್ ವ್ಹಾಲಿಬಾಲ್ ಸ್ಸ್ಪರ್ಧೆ: ಮುಂಬೈ ತಂಡ ಪ್ರಥಮ
ಕಾಗವಾಡ 04: ಹೊಸ ವರ್ಷದ ನಿಮಿತ್ಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ರೋಮಾಂಚಕ ಹೊನಲು ಬೆಳಕಿನ ಅಖಿಲ ಭಾರತ ಪುರುಷ ಮತ್ತು ಮಹಿಳಾ ಶೂಟಿಂಗ್ ವ್ಹಾಲಿಬಾಲ್ ಸ್ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಮುಂಬೈ ಮತ್ತು ಮಾಲೆಗಾವ ತಂಡಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಮಾಂಜರಿ ಗ್ರಾಮದಲ್ಲಿ ಹೊಸ ವರ್ಷದ ನಿಮಿತ್ಯ ದಿನಾಂಕ 1 ಮತ್ತು 2ರಂದು ಅಖಿಲ ಭಾರತ ಮಟ್ಟದ ವ್ಹಾಲಿಬಾಲ್ ಪಂದ್ಯಾವಳಿ ಜರಗಿದವು.
ಸ್ಪರ್ಧೆಯಲ್ಲಿ ಹೊಸದಿಲ್ಲಿ, ಉತ್ತರ ಪ್ರದೇಶ, ಮಹಾರಾಷ್ಟ,್ರ ಪಂಜಾಬ್, ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ 16 ತಂಡಗಳು ಸ್ಪರ್ಧಿಸಿದವು.
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮಹಾರಾಷ್ಟ್ರದ ಮುಂಬಯಿ ತಂಡ ಮತ್ತು ಮಹಾರಾಷ್ಟ್ರದ ಮಾಲೆಗಾವ್ ತಂಡ ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡಿದೆ. ತೃತೀಯ ಸ್ಥಾನ ಪಂಜಾಬದ ತಂಡ ಜಯಭೇರಿ ಸಾಧಿಸಿದೆ.
ಕಳೆದ 15 ವರ್ಷಗಳಿಂದ ಹೊಸ ವರ್ಷದ ನಿಮಿತ್ಯ ನಿರಂತರವಾಗಿ ಮಂಜರಿಯ ದಿ. ಶ್ರೀಕಾಂತ ಬಾಲಕೃಷ್ಣ ರಸಾಳೆ ಕಪ್ ಇವರ ಹೆಸಿರಿನಲ್ಲಿ ಮಾಂಜರಿ ವಾಲಿಬಾಲ್ ಸಂಘ, ಮಾದರಿವಾಡಿ ವಾಲಿಬಾಲ್ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಸ್ಪರ್ಧೆ ಹಮ್ಮಿಕೊಳ್ಳುತ್ತಾರೆ.
ಸ್ಪರ್ಧೆಯಲ್ಲಿ ಪ್ರಥಮ ಕ್ರಮಾಂಕ ತಂಡಕ್ಕೆ 30,000, ದ್ವಿತೀಯ ತಂಡಕ್ಕೆ 20,000, ತೃತೀಯ ತಂಡಕ್ಕೆ 10,000 ಹೀಗೆ 16 ಬಹುಮಾನಗಳು ನೀಡಿದರು.
ಸ್ಪರ್ಧೆಯ ಉದ್ಘಾಟನೆ ಮಾಜಿ ಶಾಸಕ ಕಲಪ್ಪಣಾ ಮಗ್ಗೆನವರ್ ಇವರ ಅದ್ಯೆಕ್ಷತೆಯಲ್ಲಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಎಮ.ಎಲ್ ಮಾಹಂತೇಶ ಕವಟಗಿಮಠ ಉದ್ಘಾಟಿಸಿದರು,
ಬಹುಮಾನ ವಿತರನೆ ಸ್ಪರ್ಧೆ ಸಂಯೋಜಕರಾದ ಸತೀಶ್ ಮಗ್ಗೆನವರ್, ಶೀತಲ ಮಗ್ಗೆನವರ್, ಇವರ ಮುಖ್ಯ ಉಪಸ್ಥಿಯಲಿ ಲಕ್ಷ್ಮೀ ಬ್ಯಾಂಕ ಅದ್ಯಕ್ಷ ಜಿನ್ನಪ್ಪ ಶೇಡಬಾಳೆ, ಬ್ಯಾಂಕಿನ ಸಿ.ಇ.ಒ ಸಾಗರ ಮಂಗಸೂಳೆ, ಹಾಗು ಸಂಚಾಲಕರ ಪಿಕೆಪಿಎಸ್ ಅಧ್ಯಕ್ಷ ಅಣ್ಣಾಸಾಹೇಬ್ ಯಾದವ, ನ್ಯಾಯವಾದಿ ಎಸ.ಟಿ ಮುನ್ನೋಳಿ, ಧನಂಜಯ ಗುಂಡೆ, ಸನತ ಪಾಟೀಲ್, ಮೋಹನ ಲೋಕರೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಹೊನಲು ಬೆಳಕಿನ ಸ್ಪರ್ಧೆ ವೀಕ್ಷಿಸಲು ಸಾವಿರಾರು ಪ್ರೇಕ್ಷಕರು ಆಟಗಾರರು ಪಾಲ್ಗೊಂಡಿದ್ದರು.