ಮನರಂಜನೆ

ಸ್ಯಾಂಡಲ್ ವುಡ್ ಗಿನ್ನು ಶಿವರಾಜ್ ಕುಮಾರ್ ನಾಯಕತ್ವ

ಸ್ಯಾಂಡಲ್ ವುಡ್ ಗಿನ್ನು ಶಿವರಾಜ್ ಕುಮಾರ್ ನಾಯಕತ್ವ

ಬೆಂಗಳೂರು, ಜುಲೈ 24: ಇಡೀ ಜಗತ್ತು ಕೋವಿಡ್ 19 ಬಿಕ್ಕಟ್ಟಿನಿಂದ ಕೂಡಿರುವಾಗ ಕನ್ನಡ ಚಿತ್ರರಂಗ ಕೂಡ ಅದಕ್ಕೆ ಹೊರತಾಗಿಲ್ಲ.  ಇಂತಹ ಕಷ್ಟದ       ಪರಿಸ್ಥಿತಿಯಲ್ಲಿ ಚಿತ್ರರಂಗದ ಎಲ್ಲ ವಿಭಾಗದವರೂ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ ನಾಯಕತ್ವವನ್ನು  ನಾನು ಒಪ್ಪಿಕೊಂಡಿದ್ದೇನೆ ಎಂದು ಸ್ಯಾಂಡಲ್​ವುಡ್​​  ನಟ ಶಿವರಾಜ್​ಕುಮಾರ್ ಅವರು ಹೇಳಿದರು.

    ಕನ್ನಡ ಚಿತ್ರರಂಗದ ನಾಯಕತ್ವ ವಹಿಸಿಕೊಂಡ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಐದು ತಿಂಗಳಿಂದ ಎಲ್ಲಾರು ಸಮಸ್ಯೆ ಸಿಲುಕಿಕೊಂಡಿದ್ದಾರೆ. ಎಲ್ಲಾ ಕಲಾವಿದರು ಜೊತೆಯಲ್ಲಿ ಹೋಗುತ್ತೇವೆ. ಎಲ್ಲರೂ, ಇಂಡಸ್ಟ್ರಿಯ ಬೆಳವಣಿಗೆಗೆ ಫೈಟ್ ಮಾಡುತ್ತೇವೆ ಎಂದರು.

   ಇನ್ನು ನನ್ನ ಮಾತಿಗೆ ಎಲ್ಲರೂ ಗೌರವ ನೀಡುತ್ತಾರೆಂದು ಭಾವಿಸುವೆ.   ಮುಂದೆ ನಿಂತು ಸಮಸ್ಯೆಗಳನ್ನು ಎದುರಿಸಲು ಪ್ರಯತ್ನಿಸುವೆ.   ಸಿನಿಮಾ ಇಂಡಸ್ಟ್ರಿ ಯಲ್ಲಿ ಎಲ್ಲರೂ ಒಂದೇ. ಅದಷ್ಟು ಬೇಗ ಸಿನಿಮಾ ಶೂಟಿಂಗ್ ಆರಂಭವಾಗುತ್ತೆ ಎಂದು ಹೇಳಿದರು.

     ಸದ್ಯ ಕೊರೋನಾನಾ ದೊಡ್ಡ ವಿಚಾರ ಅಲ್ಲ, ಸರ್ಕಾರದ ಜೊತೆಗೆ ನಾವು ಹೋಗಬೇಕು. ಎಲ್ಲಾ ಡಿಪಾರ್ಟ್ಮೆಂಟ್​ನಿಂದ ಒಗ್ಗಟ್ಟಾಗಿ ಬಂದಿರೋದು ಖುಷಿ ತಂದಿದೆ. ಇಂಡಸ್ಟ್ರಿಯ ಸಾಕಷ್ಟು ಸಮಸ್ಯೆಗಳನ್ನು ನನ್ನ ಜೊತೆ ಹಂಚಿಕೊಂಡಿದ್ದಾರೆ. ಸಾವಿರ ಜನರನ್ನು ಹಿಂದೆ ಇಟ್ಟುಕೊಂಡರಷ್ಟೇ ನಾಯಕ ಆಗಲ್ಲ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು.

    ಆಗಲೇ ನಾಯಕ ಆಗೋದು. ನನ್ನನ್ನು ಕಂಡರೆ ಎಲ್ಲರೂ ಇಷ್ಟಪಡ್ತಾರೆ. ಇನ್ಮುಂದೆ ನಾವೆಲ್ಲರೂ ಒಗ್ಗಟ್ಟಾಗಿ ಹೋಗೋಣ. ಮಾದರಿ ಇಂಡಸ್ಟ್ರಿಯಾಗಿ ಬಾಳೋಣ ಎಂದು ನಟ ಶಿವರಾಜ್​ ಕುಮಾರ್ ಅವರು ಮಾತನಾಡಿದ್ದಾರೆ. ಕೋವಿಡ್ 19 ನಿಂದಾಗಿ ಸಂಕಷ್ಟದಲ್ಲಿರುವ ಕನ್ನಡ ಚಿತ್ರರಂಗದ ವಿಷಯವಾಗಿ, ಎಲ್ಲ ವಿಭಾಗಗಳ ಪುನಶ್ಚೇತನದ ಬಗ್ಗೆ ಚರ್ಚಿಸಲು ಶುಕ್ರವಾರ ಮಧ್ಯಾಹ್ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನಿವಾಸದಲ್ಲಿ ಸಭೆ                       ನಡೆಸಲಾಯಿತು. 

    ಕಲಾವಿದರ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಕನ್ನಡ ಚಿತ್ರರಂಗದ ಸಂಕಷ್ಟಗಳನ್ನು ಸರ್ಕಾರದ ಮುಂದಿಡಲು, ಸಮಸ್ಯೆಗಳನ್ನು ಬಗೆಹರಿಸಲು ನಾಯಕತ್ವದ ಅಗತ್ಯವಿತ್ತು ಎಂದು ಸಭೆ ಸಮ್ಮತಿಸಿದೆ.                      


ಸುದ್ದಿ ಓದಿ