ಲಿಂ.ಮರುಳಾರಾಧ್ಯ ಶಿವಾಚಾರ್ಯರ ಕರ್ತೃ ಗದ್ದುಗೆಗೆ ಪೂಜೆ
ಸಿಂದಗಿ 23: ಶಾಸಕ ಎಮ್.ಸಿ. ಮನಗೂಳಿ ಅವರು ಆರೋಗ್ಯ ಬೇಗನೆ ಗುಣಮುಖರಾಗಲೆಂದು ಕನ್ನೊಳ್ಳಿ ಗ್ರಾಮದಲ್ಲಿ ಶನಿವಾರರಂದು ಸಿದ್ದಲಿಂಗೇಶ್ವರ ಹಿರೇಮಠದಲ್ಲಿ ಮರುಳಾರಾಧ್ಯ ಶಿವಾಚಾರ್ಯರ ಕತೃ ಗದ್ದುಗೆಗೆ ಪೂಜೆ ಸಲ್ಲಿಸಲಾಯಿತು.
ಕನ್ನೊಳ್ಳಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು ಮಾತನಾಡಿ, ಶಾಸಕ ಎಮ್.ಸಿ ಮನಗೂಳಿಯವರು 100 ವರ್ಷಗಳ ಕಾಲ ಬಾಳಲೆಂದು ಹಾಗೂ ಸಿಂದಗಿ ಮತಕ್ಷೇತ್ರದಲ್ಲಿ ಇನ್ನು ಹಲವು ಅಭಿವೃದ್ಧಿ ಕಾರ್ಯಗಳು ಇರುವದರಿಂದ ಹಾಗೂ ಸಿಂದಗಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಅತೀ ಹೆಚ್ಚಿನ ಅನುದಾನ ತಂದಿದ್ದಾರೆ. ಅವರು ಬೇಗನೇ ಗುಣಮುಖರಾಗಲಿ ಎಂದರು.
ಇದೇ ಸಂದರ್ಭದಲ್ಲಿ ಸಂಗು ಗಚ್ಚಿನಮಠ, ಸಿದ್ದಣ್ಣ ಚೌಧರಿ, ಎಸ್.ಎಸ್.ಹಾವಳಗಿ, ವೀರೇಶ ಪಾಟೀಲ. ಪ್ರಜ್ವಲ್ ಪಡಗಾನೂರ. ಮಲ್ಲು ಚೌಧರಿ, ಸಿದ್ದರಾಯ ಚೌಧರಿ, ಗಂಗೇಶ ರಜಪೂತ, ರಾಹುಲ ಪಾರ್ಸನಳ್ಳಿ, ನಾಗೇಶ ಅಗಸರ್, ಮಲ್ಲಯ್ಯಸ್ವಾಮಿ ಬಂದಾಳ ಸೇರಿದಂತೆ ಇನ್ನಿತರರು ಇದ್ದರು.