18ರಿಂದ ಶಿವರಾತ್ರಿ ಜಾತ್ರಾ ಮಹೋತ್ಸವ
ಗೋಕಾಕ10: ತಾಲೂಕಿನ ಪಂಚ ಮಠಗಳಲ್ಲಿ ಒಂದಾದ ತವಗ ಮಠದ ಬಾಳಯ್ಯ ಮಹಾಸ್ವಾಮಿಜಿಯವರ ಶಿವರಾತ್ರಿ ಜಾತ್ರಾ ಮಹೋತ್ಸವ ಇದೆ ಮಾ.18 ಹಾಗೂ 19ರಂದು ಅತಿ ವಿಜೃಂಭಣೆಯಿಂದ ಜರುಗಲಿದೆ.ಗುರುವಾರ ದಿ.18 ರಂದು ಕರ್ತೃ ಗದ್ದುಗೆಗೆ ಪುಜಾಭಿಷೇಕ, ರಾತ್ರಿ 10ಗಂಟೆಗೆ ಸಕಲ ವಾದ್ಯ ಮೇಳಗಳೊಂದಿಗೆ ದೇವರುಗಳನ್ನು ಕರೆ ತರುವದು. ಮಾ.19 ರಂದು ಮುಂಜಾನೆ 10 ಗಂಟೆಗೆ ಪ್ರಸಾದ ಪೂಜೆಯೊಂದಿಗೆ “ಮಹಾದಾಸೋಹ” ಪ್ರಾರಂಭವಾಗುವದು. ಮಧ್ಯಾಹ್ನ 2ಗಂಟೆಗೆ ಪಂಚಮ ಪೀಠಾಧಿಕಾರಿ ಬ್ರಹ್ಮಶ್ರೀ ಸಿದ್ಧಲಿಂಗಯ್ಯ ಮಹಾಸ್ವಾಮಿಗಳವರ ತುಲಾಭಾರ ನೇರವೆರುವದು. ಸಾಯಂಕಾಲ 5ಗಂಟೆಗೆ ನುಡಿ ಆಗುತ್ತವೆ. ರಾತ್ರಿ 10ಗಂಟೆಗೆ ಬೈಲಾಟ ಜರುಗಲಿವೆ ಎಂದು ಜಾತ್ರಾ ಸಮಿತಿಯವರು ತಿಳಿಸಿದ್ದಾರೆ.