ಅಥಣಿ

ರೈತರು ಅನ್ನ ನೀಡುವ ಕಾಯಕ ಯೋಗಿಗಳು: ಮಲ್ಲಿಕಾರ್ಜುನಶ್ರೀ

ರೈತರು ಅನ್ನ ನೀಡುವ ಕಾಯಕ ಯೋಗಿಗಳು: ಮಲ್ಲಿಕಾರ್ಜುನಶ್ರೀ
ಶಿವಾನುಭವ ಕಾರ್ಯಕ್ರಮದಲ್ಲಿ ಗೌರವ ಸತ್ಕಾರ ಸ್ವೀಕರಿಸುತ್ತಿರುವ ಜನವಾಡ ಅಲ್ಲಮಪ್ರಭು ಆಶ್ರಮದ ಮಲ್ಲಿಕಾರ್ಜುನ ಸ್ವಾಮಿಜಿ

ಅಥಣಿ 23: ರೈತರು ತಮ್ಮ ಬೆವರು ಸುರಿಸಿ ಬೆಳೆ ಬೆಳೆದು ನಮಗೆಲ್ಲರಿಗೂ ಅನ್ನ ದೊರೆಯುವಂತೆ ಮಾಡುತ್ತಾರೆ. ಗಡಿ ಕಾಯುವ ಸೈನಿಕ, ಉಳಿಮೆ ಮಾಡುವ ರೈತರ ಸೇವೆ ಅತ್ಯ ಅಮೂಲ್ಯವಾದದ್ದು. ದೇಶಕ್ಕೆ ಅನ್ನ ನೀಡುವ ರೈತರು ನಿಜವಾದ ಕಾಯಕ ಯೋಗಿಗಳು. ಅವರ ಸೇವೆಗೆ ನಾವೆಲ್ಲರೂ ಜೀವನದುದ್ದಕ್ಕೂ ಚಿರಋಣಿಯಾಗಿರಬೇಕೆಂದು ಜನವಾಡ ಅಲ್ಲಮಪ್ರಭು ಆಶ್ರಮದ ಮಲ್ಲಿಕಾರ್ಜುನ ಸ್ವಾಮಿಜಿ ಹೇಳಿದರು.

ಅವರು ತಾಲೂಕಿನ ಘಟನಟ್ಟ ಗ್ರಾಮದಲ್ಲಿ ಹಂಚಿನಾಳ ಬಂಧುಗಳ ತೋಟದಲ್ಲಿ ಜರುಗಿದ ಶಿವಾನುಭವ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡುತ್ತಾ ಮಾನವರಾಗಿ ಜನಸಿದ ಮೇಲೆ ಮಾನವೀಯ ಗುಣಗಳು ನಮ್ಮಲ್ಲಿ ಇರಬೇಕೆಂದು ಅವರು ಹೇಳಿದರು.

ಅಥಣಿ ಪಟ್ಟಣದ ದಂತ ವೈದ್ಯ ಡಾ. ಪ್ರಕಾಶ ಕುಮಠಳ್ಳಿ ಮಾತನಾಡಿ ಕಾಯಕವೇ ಕೈಲಾಸವೆಂದು ಹೇಳಿರುವ ಬಸವಾದಿ ಶರಣರು ನಮಗೆಲ್ಲರಿಗೂ ದಾರಿ ದೀಪವಾಗಿದ್ದಾರೆ. ಹಗಲಿರುಳು ಬೆವರು ಸುರಿಸಿ ದುಡಿಯುವ ರೈತರು ದೇಶದ ಬೆನ್ನೆಲುಬಾಗಿದ್ದಾರೆ. ಯುವಕರು ಕೃಷಿಯಲ್ಲಿ ತೊಡಗಲು ಮುಂದೆ ಬರಬೇಕು. ಭಾರತ ದೇಶಕ್ಕೆ ಈ ನಾಡಿಗೆ ಅನುಭವಿ ಕೃಷಿಕರ ಅಗತ್ಯವಿದೆ ಎಂದು ಅವರು ಹೇಳಿದರು. 

ಹಿರಿಯ ಮುಖಂಡ ಬಿ.ಆರ್. ಪಾಟೀಲ, ಕೆ.ಎಂ.ಎಫ್ ಮಾಜಿ ಅಧ್ಯಕ್ಷ ಬಾಬು ಗಲಗಲಿ, ಡಾ. ಪ್ರಕಾಶ ಕುಮಠಳ್ಳಿ, ಸತ್ತಿ ಗ್ರಾ.ಪಂ. ಮಾಜಿ ಅಧ್ಯಕ್ಷ ಮಲ್ಲಪ್ಪ ಹಂಚಿನಾಳ, ಮಲ್ಲಪ್ಪ ಶೇಗುಣಸಿ, ಸಿದ್ದಪ್ಪ ಹಂಚಿನಾಳ, ಸತ್ತಿ ಗ್ರಾ.ಪಂ ಉಪಾಧ್ಯಕ್ಷ ಬಸವರಾಜ ಭಜರಂಗಿ, ಮಲ್ಲಪ್ಪ ಬ್ಯಾಳಗೌಡರ, ಅನಂತಕುಮಾರ ಪಾಟೀಲ, ಸಂಜೀವ ಗಡ್ಯಾಗೋಳ,  ಅಶೋಕ ಜಗದೇವ, ಶ್ರೀಶೈಲ ಜಕ್ಕಪ್ಪನವರ, ನೌಶಾದ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಚಿದಾನಂದ ಪಾಟೀಲ ನಿರೂಪಿಸಿ ವಂದಿಸಿದರು.

ಸುದ್ದಿ ಓದಿ