ಕಾಗವಾಡ

ಪ್ರಸಕ್ತ ಸಾಲಿನಲ್ಲಿ ಸಹಕಾರಿಗೆ ರೂ. 37.70 ಲಕ್ಷ ನಿವ್ಹಳ ಲಾಭ: ರಾಜೇಂದ್ರ ಚೌಗುಲೆ

ಪ್ರಸಕ್ತ ಸಾಲಿನಲ್ಲಿ ಸಹಕಾರಿಗೆ ರೂ. 37.70 ಲಕ್ಷ ನಿವ್ಹಳ ಲಾಭ: ರಾಜೇಂದ್ರ ಚೌಗುಲೆ

ಶಿರಗುಪ್ಪಿ ಸ್ವಾಭಿಮಾನಿ ಸಹಕಾರಿಯ 5ನೇ ಸರ್ವ ಸಾಧಾರಣ ಸಭೆ 

ಕಾಗವಾಡ 16: ತಾಲೂಕಿನ ಶಿರಗುಪ್ಪಿ ಗ್ರಾಮದ ಸ್ವಾಭಿಮಾನ ಕೋ-ಆಪ್ ಕ್ರೆಡಿಟ್ ಸೊಸೈಟಿಯು ಸಹಕಾರಿಯ ಸದಸ್ಯರ, ಹಿತೈಷಿಗಳ ಮತ್ತು ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ 5 ನೇ ವರ್ಷದಲ್ಲಿ ಪ್ರಗತಿ ಪಥದಲ್ಲಿ ಸಾಗುತ್ತ, ಪ್ರಸಕ್ತ ಸಾಲಿನಲ್ಲಿ ರೂ. 37 ಲಕ್ಷ 70 ಸಾವಿರದ 977 ಗಳ ನಿವ್ಹಳ ಲಾಭ ಗಳಿಸಿದೆ ಎಂದು ಸಹಕಾರಿಯ ಅಧ್ಯಕ್ಷ ರಾಜೇಂದ್ರ ಚೌಗುಲೆ ತಿಳಿಸಿದ್ದಾರೆ. 

ರವಿವಾರ ದಿ. 15 ರಂದು ಗ್ರಾಮದ ಮಲ್ಲಿಕಾರ್ಜುನ ಸಭಾಭವನದಲ್ಲಿ ನಡೆದ ಸಹಕಾರಿಯ 5 ನೇ ವಾರ್ಷಿಕ ಸರ್ವ ಸಾಧಾರಣೆ ಸಭೆಯಲ್ಲಿ ಮಾತನಾಡುತ್ತಿದ್ದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಶೀತಲ ಮಾಲಗಾಂವೆ, ನೇಮಿನಾಥ ನರಸಗೌಡರ ನೇಮಿನಾಥ ಪಾಟೀಲ, ರಾಜು ಪಾಟೀಲ, ಮಹಾವೀರ ಸಾಬನ್ನವರ ಉಪಸ್ಥಿತರಿದ್ದರು. 

ಸಭೆಯಲ್ಲಿ ಅತಿಥಿಗಳನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ, ಮಾತನಾಡಿದ ಅತಿಥಿಗಳು, ತಮ್ಮ ಅನಿಸಿಕೆ ಹಂಚಿಕೊಂಡಿ, ತಮಗೆ ಗೌರವಿಸಿದ ಸಹಕಾರಿಗೆ ಧನ್ಯವಾದ ತಿಳಿಸಿದರು. ಪ್ರಕಾಶ ಹೆಮಗೀರೆ ಪ್ರಾಸ್ಥಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಭೀಮು ಅಕಿವಾಟೆ ಸಹಕಾರಿಯ ಪ್ರಗತಿಯ ಕುರಿತು ಮಾಹಿತಿ ನೀಡಿದರು. ಸಹಕಾರಿಯ ಮುಖ್ಯ ವ್ಯವಸ್ಥಾಪಕ ರಾಕೇಶ ಅಕಿವಾಟೆ ವರದಿ ವಾಚನ ಮಾಡುತ್ತ, ಸಹಕಾರಿಯಲ್ಲಿ ಒಟ್ಟು 643 ಸದಸ್ಯರಿದ್ದು, 7 ಲಕ್ಷ 27 ಸಾವಿರದ 500 ರೂ. ಶೇರ್ ಬಂಡವಾಳ ಹೊಂದಿದ್ದು, 72 ಲಕ್ಷ 35 ಸಾವಿರದ 878 ರೂ. ಕಾಯ್ದಿಟ್ಟ ನಿಧಿ ಹೊಂದಿದೆ. ಮತ್ತು 10 ಕೋಟಿ 57 ಲಕ್ಷ 37 ಸಾವಿರದ 590 ರೂ. ಠೇವಣಿ ಹೊಂದಿದ್ದು, 5 ಕೋಟಿ 85 ಲಕ್ಷ 44 ಸಾವಿರದ 40 ರೂ.ಗಳಷ್ಟು ಸಾಲ ವಿತರಿಸಲಾಗಿದೆ. ಸಹಕಾರಿಯ 37 ಲಕ್ಷ 70 ಸಾವಿರದ 977 ರೂಪಾಯಿ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 25 ರಷ್ಟು ಲಾಭಾಂಶ ವಿತರಿಸಲಾಗುವುದು ಎಂದರು. 

ವಕೀಲ ಜಿನೇಂದ್ರ ಕುರುಂದವಾಡೆ, ಸಂಸ್ಥೆಯ ಉಪಾಧ್ಯಕ್ಷ ಭೀಮು ಅಕಿವಾಟೆ, ನಿರ್ದೇಶಕರಾದ ಪ್ರಕಾಶ ಹೆಮಗೀರೆ, ವಿಜಯ ಅಕಿವಾಟೆ, ಸುನೀಲ ಚೌಗುಲಾ, ಅರುಣ ಶಿರಗುಪ್ಪೆ, ಬಾಳಾಸಾಬ ಕಾಟಕರ, ಅಪ್ರೋಜ್ ಕನವಾಡೆ, ಮಹಾದೇವ ಢಂಗ, ಸೌ. ವೈಶಾಲಿ ಚೌಗುಲೆ, ಸೌ. ಸುಹಾಶಿನಿ ಮೊನೆ, ಶಶಿಕಾಂತ ಶಿರಗಾಂವೆ ಸೇರಿದಂತೆ ಸಹಕಾರಿಯ ಎಲ್ಲ ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ರಾಕೇಶ ಅಕಿವಾಟೆ ಸ್ವಾಗತಿಸಿದರು. ಪ್ರಕಾಶ ಹೆಮಗೀರೆ ನಿರೂಪಿಸಿದರು. ಬಾಹುಬಲಿ ಗಿರವಾಂವೆ ವಂದಿಸಿದರು. 


ಸುದ್ದಿ ಓದಿ