ಶಿರಗುಪ್ಪಿ ಸಕ್ಕರೆ ಕಾರ್ಖಾನೆ ಯಶಸ್ಸಿನ ಶ್ರೇಯ ಮಗೆಣ್ಣವರಗೆ ಸಲ್ಲುತ್ತದೆ: ದೊಡ್ಡನ್ನವರ
ಕಾಗವಾಡ 16: ಕಳೆದ 10 ವರ್ಷಗಳಿಂದ ಒಳ್ಳೆ ಆಡಳಿತ ನೀಡಿ ರೈತರನ್ನು ಹಾಗೂ ಕಾರ್ಮಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಕಬ್ಬಿಗೆ ಒಳ್ಳೆ ದರ ಕಾಗವಾಡದ ಶಿರಗುಪ್ಪಿ ಸಕ್ಕರೆ ಕಾರ್ಖಾನೆ ಯಶಸ್ವಿಯತ್ತ ತೆಗೆದುಕೊಂಡು ಹೋಗುತ್ತಿರುವ ಕಾರ್ಖಾನೆ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಕಲ್ಲಪ್ಪಣ್ಣ ಮಗೆಣ್ಣವರ ಇವರಿಗೆ ವಿಶೇಷ ಶ್ರೇಯಸ್ಸು ಸಲ್ಲುತ್ತದೆ ಎಂದು ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಡಾ. ರಮೇಶ ದೊಡ್ಡನ್ನವರ ಹೇಳಿದರು.
ರವಿವಾರ ದಿ. 16ರಂದು ಶಿರಗುಪ್ಪಿ ಶುಗರ್ ವರ್ಕ್ಸ್ ಸಕ್ಕರೆ ಕಾರ್ಖಾನೆಯಲ್ಲಿ 6 ಲಕ್ಷ ಕ್ವಿಂಟಲ್ ಸಕ್ಕರೆ ಚೀಲಗಳಿಗೆ ಪೂಜಾ ಕಾರ್ಯಕ್ರಮ ನೆರವೇರಿಸಿ ಡಾ. ರಮೇಶ ದೊಡ್ಡನ್ನವರ ಮಾತನಾಡಿದರು.
ಕಾರ್ಖಾನೆ ಪ್ರಾರಂಭಿಸಿ 10 ವರ್ಷಗಳು ಪೂರ್ಣಗೊಂಡಿವೆ. ಪ್ರಾರಂಭದಲ್ಲಿ ಅನೇಕ ಅಡೆತಡೆಗಳು ಬಂದವು. ಆದರೂ, ಕಾರ್ಖಾನೆ ಅಧ್ಯಕ್ಷ ಕಲ್ಲಪ್ಪಣ್ಣ ಮಗ್ಗೆಣ್ಣವರ ಮತ್ತು ಎಲ್ಲ ಸಂಚಾಲಕರು ಗಟ್ಟಿಯಾಗಿ ಉಳಿದಿದ್ದರಿಂದ ಕಾರ್ಖಾನೆಗೆ ಒಂದು ಹೊಸ ಬೆಳಕು ಬಂದಂತಾಗಿದೆ. ಜನರಲ್ ಮ್ಯಾನೇಜರ್ ಅರುಣ ಫರಾಂಡೆ ಇವರ ಆಡಳಿತದಲ್ಲಿ ಗುಣಮಟ್ಟದ ಸಕ್ಕರೆ ಉತ್ಪಾದಿಸುವದೊಂದಿಗೆ ಎಲ್ಲರನ್ನು ಒಂದುಗೂಡಿಸಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಸಕ್ಕರೆ ಕಾರ್ಖಾನೆ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಕಲ್ಲಪ್ಪಣ್ಣ ಮಗ್ಗೆಣ್ಣವರ ಮಾತನಾಡುತ್ತ, ಪ್ರಸಕ್ತ ಕಬ್ಬು ನುರಿಸುವ 10ನೇ ವರ್ಷದ ಹಂಗಾಮಿನಲ್ಲಿ 98 ದಿನಗಳಲ್ಲಿ 5.20 ಲಕ್ಷ ಟನ್ ಕಬ್ಬು ನುರಿಸಿ 6 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದಿಸಿದ್ದು, ಇದೊಂದು ದಾಖಲೆ ನಿರ್ಮಿಸಿದೆ. ಇದರ ಶ್ರೇಯಸ್ಸ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದ ಎಲ್ಲ ಕಾರ್ಮಿಕರಿಗೆ ಮತ್ತು ಸಂಚಾಲಕ ಮಂಡಳಿಗೆ ಸಲ್ಲುತ್ತದೆ. ಈ ವರ್ಷ ಸುಮಾರು 8 ಲಕ್ಷ ಚೀಲ ಸಕ್ಕರೆ ಉತ್ಪಾದಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿ ಹರ್ಷ ವ್ಯಕ್ತಪಡಿಸಿದರು.
ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ:
ಸಕ್ಕರೆ ಕಾರ್ಖಾನೆಯಲ್ಲಿ ರಾಷ್ಟ್ರೀಯ ಯುವಾ ದಿನ ನಿಮಿತ್ಯ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ಯ ಪ್ರತಿಮೆ ಪೂಜೆ ನೆರವೇರಿಸಿದರು. ವಿವೇಕಾನಂದರ ಬಗ್ಗೆ ಜನರಲ್ ಮ್ಯಾನೇಜರ್ ಅರುಣ ಫರಾಂಡೆ, ರವೀಂದ್ರ ಜಾಡರ, ಅರುಣ ಜೋಶಿ, ಲಕ್ಷ್ಮಣ ಸೂರ್ಯವಂಶಿ ಮಾತನಾಡಿದರು.
ಸಕ್ಕರೆ ಕಾರ್ಖಾನೆಯ ಕಾರ್ಮಿಕರು ಪ್ರಾರಂಭಿಸುವ ಸಹಕಾರಿ ಕ್ರೆಡಿಟ್ ಸಂಘದ ಸದಸ್ಯ ನೋಂದಣಿಗೆ ಚಾಲನೆ ನೀಡಿದರು. ಕೊರೊನಾ ವಾರಿಯರ್ಸ್ರಾಗಿ ಸೇವೆ ಸಲ್ಲಿಸುತ್ತಿರುವ ಕಾಗವಾಡ ತಾಲ್ಲೂಕಿನ ಪತ್ರಕರ್ತರಿಗೆ, ನ್ಯಾಯವಾದಿ ಎಸ್.ಟಿ.ಮುನ್ನೋಳಿ, ಅರುಣ ಫರಾಂಡೆ, ಡಾ. ಸಾವಿತ್ರಿ ರಮೇಶ ದೊಡ್ಡನ್ನವರ ಇವರಿಗೆ ಸನ್ಮಾನಿಸಲಾಯಿತು.
ಸಕ್ಕರೆ ಕಾರ್ಖಾನೆ ಸಂಚಾಲಕ ರಾಜು ದೊಡ್ಡನ್ನವರ, ಮಹಾವೀರ ಸುಗಣ್ಣವರ, ವ್ಯವಸ್ಥಾಪಕ ರವೀಂದ್ರ ಜಾಡರ, ಅಧಿಕಾರಿಗಳಾದ ಕೌತುಕ ಮಗ್ಗೆಣ್ಣವರ, ವಿದ್ಯಾಧರ ಧೊಂಡಾರೆ, ಮಹಾವೀರ ಬಿರನಾಳೆ, ಬಿ.ಡಿ.ಯಳಗುಡ, ವಿನಯ ನಾಗಾವೆ, ಸೇರಿದಂತೆ ಅನೇಕರು ಇದ್ದರು.