ಶಿರಗುಪ್ಪಿಯ ಶಾಂತಿಸಾಗರ ಸೌಹಾರ್ದ ಸಹಕಾರಿ ಪ್ರಗತಿಪಥದತ್ತ
ಶೇಡಬಾಳ 25: ಶಿರಗುಪ್ಪಿಯ ಶಾಂತಿಸಾಗರ ಕ್ರೆಡಿಟ್ ಸೌಹಾರ್ದ ಸಹಕಾರಿಯು 2021-22 ನೇ ಸಾಲಿನಲ್ಲಿ 26 ಲಕ್ಷ, 35 ಸಾವಿರದ 519 ರೂಪಾಯಿ ನಿವ್ಹಳ ಲಾಭ ಗಳಿಸಿದೆ ಎಂದು ಸಹಕಾರಿಯ ಅಧ್ಯಕ್ಷ ಸಾಗರ ದುಗ್ಗೆ ಹೇಳಿದರು.
ಅವರು ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಶಾಂತಿಸಾಗರ ಕ್ರೆಡಿಟ್ ಸೌಹಾರ್ದ ಸಹಕಾರಿಯ ಸಭಾಂಗಣದಲ್ಲಿ ಸಹಕಾರಿಯ 25ನೇ ರಜತ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಸಹಕಾರಿಯು 15 ಕೋಟಿ 11 ಲಕ್ಷ 26 ಸಾವಿರದಾ 287 ರೂಪಾಯಿ ಸಾಲವನ್ನು ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 26 ಲಕ್ಷ 35 ಸಾವಿರದ 519 ರೂಪಾಯಿ ನಿವ್ಹಳ ಲಾಭ ಗಳಿಸಿದೆ. ಸಹಕಾರಿಯು 7 ಶಾಖೆಗಳನ್ನು ಹೊಂದಿದ್ದು, ಎಲ್ಲ ಶಾಖೆಗಳು ಪ್ರಗತಿಪಥದತ್ತ ಸಾಗುತ್ತಿವೆ ಎಂದು ಹೇಳಿದರು.
ರಜತ ಮಹೋತ್ಸವದ ಅಂಗವಾಗಿ ಗಣ್ಯರನ್ನು, ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಆದರ್ಶ ಶಿಕ್ಷಕರನ್ನು, ಬ್ಯಾಂಕಿನ ಆದರ್ಶ ಸಿಬ್ಬಂದಿಗಳನ್ನು ಇದೇ ವೇಳೆ ಸತ್ಕರಿಸಿ, ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ವೀರಸೇವಾದಳದ ಉಪಾಧ್ಯಕ್ಷ ಸುಭಾಷ ಮಗದುಮ್, ಕಾರ್ಯವಾಹಕ ಅಜೀತ ಬಂಡೆ, ಕರ್ಮವೀರ ಮಲ್ಟಿಸ್ಟೇಟ್ ಸಹಕಾರಿಯ ಅಧ್ಯಕ್ಷ ಭೂಪಾಲ ಗಿರಮಲ್ಲ, ಉಪಾಧ್ಯಕ್ಷವಿಜಯ ಅವಟಿ, ಸಂಚಾಲಕರಾದ ಡಿ.ಎ. ಪಾಟೀಲ, ಬಾಳಾಸಾಬ ಪಾಟೀಲ, ಸಾಗರ ಚೌಗುಲೆ, ಶಿರಗುಪ್ಪಿ ನ್ಯಾಯವಾದಿಗಳಾದ ಅಭಯಕುಮಾರ ಅಕಿವಾಟೆ ಉಪಸ್ಥಿತರಿದ್ದು, ಸಭೆಯನ್ನುದ್ದೇಶಿಸಿ ಮಾತನಾಡಿದರು.
ಆಚಾರ್ಯ ಶಾಂತಿಸಾಗರ ಮಹಾರಾಜರು, ದಿ. ಭಾಬಾಸಾಬ ಕುಚನೂರೆ ಮತ್ತು ಸಹಕಾರಿಯ ಸಂಸ್ಥಾಪಕ ದಿ. ಡಾ. ನೇಮಿನಾಥ ಭೋಮಾಜ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಅಧ್ಯಕ್ಷ ಸಾಗರ ದುಗ್ಗೆ, ಉಪಾಧ್ಯಕ್ಷ ಬಾಳಾಸಾಬ ಪಾಟೀಲ, ಸಂಚಾಲಕರಾದ ಡಾ. ಮಹಾಧವಲ ಭೋಮಾಜ, ಚಂದ್ರಕಾಂತ ಕುರುಂದವಾಡೆ, ಅಣ್ಣಾಸಾಬ ಬಸನ್ನವರ, ವಿದ್ಯಾಸಾಗರ ಮಾನಗಾಂವೆ, ಮಹಾವೀರ ಮಾದನ್ನವರ, ಪುರಂದರ ಕನವಾಡೆ, ಅಶ್ವತಕುಮಾರ ಪಾಟೀಲ, ಕಮಲಾತಾಯಿ ಅಳತೆ, ಜಯಶ್ರೀ ಶಹಾಪೂರೆ, ತುಕಾರಾಮ ಬಡಿಗೇರ, ಚಾಂದಸಾಬ ಮುಲ್ಲಾ, ಅಪ್ಪು ಕಾಂಬಳೆ ಸೇರಿದಂತೆ ಎಲ್ಲ ಶಾಖೆಗಳ ಸಲಹಾ ಸಮಿತಿ ಸದಸ್ಯರು, ಸರ್ವ ಸದಸ್ಯರು, ಸಿಬ್ಬಂದಿ ವರ್ಗದವರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯ ಶಾಖೆಯ ಪ್ರಧಾನ ವ್ಯವಸ್ಥಾಪಕ ಅನಂತ ಐನಾಪೂರೆ, ವರದಿ ವಾಚನ ಮಾಡಿದರು. ಪದ್ಮಶ್ರೀ ಚೌಗುಲೆ ಸ್ವಾಗತ ಗೀತೆ ಹಾಡಿದರು. ಡಾ. ಭೋಮಾಜ ಸ್ವಾಗತಿಸಿದರು. ಬಾಳಾಸಾಬ ಪಾಟೀಲ ವಂದಿಸಿದರು. ಕುಮಾರ ಮಾಲಗಾಂವೆ ನಿರೂಪಿಸಿದರು.