ಹೂವಿನ ಹಡಗಲಿ

ಹಡಗಲಿ: ಎನ್‌ಸಿಕ್ಯೂಎಫ್ ತರಬೇತಿ

ಹಡಗಲಿ: ಎನ್‌ಸಿಕ್ಯೂಎಫ್ ತರಬೇತಿ

ಹೂವಿನ ಹಡಗಲಿ 08: ರಾಷ್ಟ್ರೀಯ ವೃತ್ತಿ ಶಿಕ್ಷಣ ಚೌಕಟ್ಟು ಅಡಿಯಲ್ಲಿ 9 ನೆ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಆರ್ಥಿಕ ಸ್ವಾವಲಂಬಿ ಬದುಕು ಸಾಗಿಸಲು ಎನ್ ಸಿ ಕ್ಯೂ ಎಫ್ ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ ಹೇಳಿದರು.ತಾಲೂಕಿನ ನಾಗತಿಬಸಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಎನ್ ಸಿ ಕ್ಯೂ ಎಫ್ ಓರಿಯಂಟೇಷನ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ತಾಲೂಕಿನ ಆಯ್ದ 9 ಸರ್ಕಾರಿ ಪ್ರೌಢಶಾಲೆಯಲ್ಲಿ ಎನ್ ಸಿ ಕ್ಯೂ ಎಫ್ ಯೋಜನೆ ಜಾರಿಗೆ ಬಂದಿದೆ. ವಿದ್ಯಾರ್ಥಿಗಳು ನೂತನ ಯೋಜನೆ ಉಪಯೋಗ ಪಡೆಯಬಹುದು.ಹಿಂದಿ ವಿಷಯದ ಬದಲಾಗಿ 9 ನೇ ತರಗತಿಯಲ್ಲಿ ಓಖಕಿಈ ಆಯ್ಕೆ ಮಾಡಬಹುದು ಎಂದು ಹೇಳಿದರು.ಕ್ಷೇತ್ರ ಸಮನ್ವಯಾಧಿಕಾರಿ ಎ ಕೋಟೆಪ್ಪ, ನೋಡಲ್ ಅಧಿಕಾರಿ ಎಚ್ ಮಲ್ಲಿಕಾರ್ಜುನ, ಮುಖ್ಯ ಗುರುಗಳಾದ ಗುರುಬಸವರಾಜ್, ಮಂಜುನಾಥ, ನಿಂಗಪ್ಪ, ಮುಬೀನಾ, ಬಿ ಆರ್ ಪಿ ಮಲ್ಲಿಕಾರ್ಜುನ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ