ಪುರಸಭೆ ಅಧ್ಯಕ್ಷೆ ರಾಜೀನಾಮೆ
ಗುಳೇದಗುಡ್ಡ,ಡಿ.16: 12 ತಿಂಗಳ ಅಧಿಕಾರಾವಧಿ ಪೂರೈಸಿದ ಪಟ್ಟಣ ಪುರಸಭೆಯ ಅಧ್ಯಕ್ಷೆ ಶಿಲ್ಪಾ ನಾಗರಾಜ ಹಳ್ಳಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು ವರಿಷ್ಟರ ಮಾರ್ಗದರ್ಶನದ ಮೇರೆಗೆ ಮುಂದಿನ ಅವಧಿಗೆ ಮತ್ತೊಬ್ಬರಿಗೆ ಹುದ್ದೆ ಬಿಟ್ಟುಕೊಡುವ ಉದ್ದೇಶದಿಂದ ನ.30 ರಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಉಪವಿಭಾಗಾಧಿಕಾರಿಗಳಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿರುವುದಾಗಿಯೂ ಅವರಿಂದ ಸ್ವೀಕೃತವಾದ ಬಗ್ಗೆ ಇಂದಿನವರೆಗೆ ಯಾವುದೇ ಪತ್ರ ಬಂದಿಲ್ಲವೆಂದೂ ಅವರು ತಿಳಿಸಿದ್ದಾರೆ.
ಮುಂದಿನ ಅವಧಿಗೆ 20 ನೇ ಡಿವಿಜನ್ ಸದಸ್ಯೆ ಯಲ್ಲವ್ವ ನಾಗಪ್ಪ ಗೌಡರ್ ಅವರ ಹೆಸರು ಕೇಳಿ ಬರುತ್ತಿದ್ದೂ, ಹೈಕಮಾಂಡ್ ಯಲ್ಲವ್ವ ಅವರಿಗೆ ಅಧ್ಯಕ್ಷ ಪಟ್ಟ ನೀಡುವ ಎಲ್ಲ ನೀರಿಕ್ಷೆಗಳಿವೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದ್ದೂ, ಮುಂದಿನ ದಿನಗಳಲ್ಲಿ ಪುರಸಭೆ ಅಧ್ಯಕ್ಷ ಗದ್ದುಗೆ ಯಾರಿಗೆ ಒಲಿಯಲಿದೆ ಕಾದು ನೋಡಬೇಕು.