ಶಿಲ್ಪಾ ಗೊಲ್ಲರ ಕಾಣೆ
ಧಾರವಾಡ 14: ಶಿಲ್ಪಾ ತಂದೆ ವಾಸುದೇವ ಗೊಲ್ಲರ (22 ವರ್ಷ) ಸಾ: ಧಾರವಾಡ ಗೊಲ್ಲರ ಕಾಲನಿ 4 ನೇ ಕ್ರಾಸ್ ಹಾಲಿ: ಧಾರವಾಡ ಕುರಬರ ಓಣಿಯಿಂದ ದಿ 17.07.2024 ರಂದು ಮದ್ಯಾಹ್ನ 1.00 ಗಂಟೆ ಸುಮಾರಿಗೆ ಯಾರಿಗೂ ಹೇಳದೆ ಕೇಳದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾರೆ.
ಚಹರೆ ಗುರುತು: ದುಂಡು ಮುಖ, ಗೋದಿಗೆಂಪು ಮೈಬಣ್ಣ, 5-0 ಪೂಟ್‌ಎತ್ತರವಿದ್ದು, ಉದ್ದ ಕೂದಲು, ಬಲಗೈಯಲ್ಲಿ ಮಾಮ್ ಡ್ಯಾಡ ಅಂತಾ ಟ್ಯಾಟೋ ಹಾಕಿಸಿಕೊಂಡಿದ್ದಾರೆ. ಕನ್ನಡ, ತೆಲಗು ಭಾಷೆಗಳನ್ನು ಮಾತನಾಡುತ್ತಾಳೆ.
ಈ ಕುರಿತು ಅವರ ತಂದೆ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.