ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ಸಂಭ್ರಮದಿಂದ ಶೀಗಿಹುಣ್ಣಿಮೆ ಆಚರಣೆ
ಯರಗಟ್ಟಿ 09: ಸಮೀಪದ ಕಡಬಿ ಗ್ರಾಮದಲ್ಲಿ ಶೀಗಿಹುಣ್ಣಿಮೆ ನಿಮಿತ್ಯವಾಗಿ ಹೊಸಹೊಸ ಉಡುಪುಗಳನ್ನು ಧರಿಸಿಕೊಂಡು ಎತ್ತಿನ ಚಕ್ಕಡಿ, ಟ್ರ್ಯಾಕ್ಟರ್ ಮೂಲಕ ಹೊಲಗಳಿಗೆ ಹೋಗಿ ವಿಧಿವಿಧಾನಗಳಿಂದ ಭೂಮಿತಾಯಿಗೆ ಪೂಜೆ ಸಲ್ಲಿಸಿ ಹೋಳಿಗೆ, ಸಜ್ಜೆ ಕಡಬು, ಕರ್ಚಿಕಾಯಿ, ವಡೆ, ಹುರಕ್ಕೆ ಹೋಳಿಗೆ, ಹುರುಣದ ಕಡಬು ಹೀಗೆ ಅನೇಕ ಸಿಹಿ ತಿನುಸುಗಳನ್ನು ಭೂಮಿ ತಾಯಿಗೆ ಹಾಗೂ ದೇವರುಗಳಿಗೆ ನೈವೇದ್ಯ ಅರ್ಿಸಿ ನಂತರ ಭೂಮಿತಾಯಿಗೆ ಚರಗಾ ಚಲ್ಲಿದರು.
ಹೊಲದ ಸುತ್ತಮುತ್ತಲಿನ ದೇವರುಗಳಿಗಳಿಗೆ ನೈವೇದ್ಯ ಅರ್ಿಸಿ ಭಕ್ತಿಯ ಭಾವ ಮೆರೆದರು. ಕುಟುಂಬ ಸದಸ್ಯರೆಲ್ಲರು ಒಟ್ಟಾಗಿ ಮರದ ಕೆಳಗೆ ಕುಳಿತು ಸಿಹಿ ತಿನಿಸುಗಳ ಸವಿಯೂಟ ಸವಿದರು.