ಗುಳೇಗುಡ್ಡ

ಶೀಲವಂತರ ನೈತಿಕತೆ ಬಗ್ಗೆ ಮಾತನಾಡುವ ಹೊಳಬಸು ಶೆಟ್ಟರ ಯಾರು ?

ಶೀಲವಂತರ ನೈತಿಕತೆ ಬಗ್ಗೆ ಮಾತನಾಡುವ ಹೊಳಬಸು ಶೆಟ್ಟರ ಯಾರು ?
ಗುಳೇದಗುಡ್ಡದ ಭಾಜಪ ಕಾರ್ಯಾಲಯದಲ್ಲಿ ಸುದ್ದಿಗೋಷ್ಟಿ ನಡೆಸಿದರು.

ಮಾಜಿ ಶಾಸಕರ ವಿರುದ್ಧ ಏಕವಚನದಲ್ಲಿ ಮಾತನಾಡಿದ ಶೆಟ್ಟರ್ ಕ್ಷಮೆಯಾಚಿಸಬೇಕು 

ಗುಳೇದಗುಡ್ಡ 13: ಪಟ್ಟಣದ ಮಾಜಿ ಶಾಸಕರಾದ ರಾಜಶೇಖರ ಶೀಲವಂತ ಅವರ ನೈತಿಕತೆ ಬಗ್ಗೆ ಮಾತನಾಡುವ ಹೊಳಬಸು ಶೆಟ್ಟರ ಯಾರು, ಇವರೇನೋ ಕಾಂಗ್ರೆಸ ಪಕ್ಷದ ಅಧ್ಯಕ್ಷರೋ ಅಥವಾ ಪದಾಧಿಕಾರಿಯೋ ಎಂಬುದನ್ನು ಹೊಳಬಸು ಶೆಟ್ಟರ ಮೊದಲು ಅರ್ಥ ಮಾಡಿಕೊಳ್ಳಬೇಕು. ಕ್ಷುಲ್ಲಕವಾಗಿ ನಮ್ಮ ಮಾಜಿ ಶಾಸಕರ ವಿರುದ್ಧ ಏಕವಚನದಲ್ಲಿ ಮಾತನಾಡುವುದನ್ನು ಬಿಟ್ಟು, ಕೂಡಲೇ ಕ್ಷಮೆ ಯಾಚಿಸಬೇಕೆಂದು ನಗರ ಭಾಜಪ ಘಟಕದ ಅಧ್ಯಕ್ಷ ವಸಂತ ಧೋಂಗಡೆ, ಪುರಸಭೆ ಮಾಜಿ ಸದಸ್ಯ ಸಿದ್ದು ಅರಕಾಲಚಿಟ್ಟಿ ಸೇರಿದಂತೆ ಭಾಜಪ ಮುಖಂಡರು ಹೊಳಬಸು ಶೆಟ್ಟರ್ ಅವರಿಗೆ ಎಚ್ಚರಿಕೆ ನೀಡಿದರು.  

ಪಟ್ಟಣದ ಭಾಜಪ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿ, ಹೊಳಬಸು ಶೆಟ್ಟರ ಅವರು ನಮ್ಮ ನಾಯಕರಾದ ರಾಜಶೇಖರ ಶೀಲವಂತ ಅವರ ಬಗ್ಗೆ ಹಗುರವಾಗಿ ಏಕವಚನದಲ್ಲಿ ಮಾತನಾಡಿದರೆ ನಾವು ಸುಮ್ಮನಿರುವುದಿಲ್ಲ. ಒಬ್ಬ ಮಾಜಿ ಶಾಸಕರ ಲೋಪ ದೋಷಗಳ ಬಗ್ಗೆ ಮಾತನಾಡುವ ನೈತಿಕತೆ ಶೆಟ್ಟರ್‌ಗಿಲ್ಲ. ಇವರೇನು ಕಾಂಗ್ರೆಸ ಪಕ್ಷದ ಬ್ಲಾಕ್ ಅಧ್ಯಕ್ಷರೂ ಅಲ್ಲ, ಪದಾಧಿಕಾರಿಯೂ ಅಲ್ಲ, ಕಳೆದ ಎರಡು ದಿನಗಳ ಹಿಂದೆ ತಾವೇ ಕರೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ ಪಕ್ಷದ ಬ್ಲಾಕ್ ಅಧ್ಯಕ್ಷರೂ ಸುಮ್ಮನೇ ಪಕ್ಕದಲ್ಲಿ ಕುಳಿತಿದ್ದು ನೋಡಿದರೆ ಪಕ್ಷವನ್ನು ಶೆಟ್ಟರ ಅವರಿಗೆ ಒಪ್ಪಿಸಿದಂತೆ ಕಾಣುತ್ತದೆ ಎಂದು ವ್ಯಂಗವಾಗಿ ಮಾತನಾಡಿದರು. 

ಗುಳೇದಗುಡ್ಡ ಇತಿಹಾಸದಲ್ಲಿ ಪುರಸಭೆ ಬಜೆಟ್ ಸಭೆ ವಿಫಲವಾಗಿದ್ದು ​‍್ರ​‍್ರಥಮ ಎಂದೆನಿಸುತ್ತದೆ. ಕಾಂಗ್ರೆಸ ಪಕ್ಷ ಅಧಿಕಾರದಲ್ಲಿದ್ದುಕೊಂಡು 15 ಜನ ಸದಸ್ಯರನ್ನು ಹೊಂದಿದೆ. ಇದರಲ್ಲಿ ಅಧ್ಯಕ್ಷರನ್ನು ಒಳಗೊಂಡು 9 ಜನ ನಿರ್ಲಿಪ್ತ ಅಂದರೆ ತಟಸ್ತರಾದರೆಂದರೆ ಏನಿದರ ಅರ್ಥ, ಅಲ್ಲದೇ ಕಾಂಗ್ರೆಸಿನ 3 ಜನ ಸದಸ್ಯರು ವಿರೋಧ ವ್ಯಕ್ತ ಪಡಿಸಿದ್ದು ಏಕೆ, ಇದು ಪಕ್ಷದಲ್ಲಿನ ಒಡಕು ಏತ್ತಿ ತೋರಿಸುತ್ತದೆ. ಇದನ್ನು ವಿರೋಧಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಕಾಂಗ್ರೆಸ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು. 

ಮಾಜಿ ಶಾಸಕರಾದ ಶೀಲವಂತ ಅವರು, ಶಾಸಕ ಸಿದ್ಧರಾಮಯ್ಯನವರಿಗೆ ಅತಿಥಿ ಶಾಸಕರು ಎಂದದ್ದು ಏಕೆ ಎಂಬುದನ್ನೇ ಮರೆತಂತಿದೆ. ಈ ಕ್ಷೇತ್ರದ ಶಾಸಕ ಸಿದ್ದರಾಮಯ್ಯನವರು ಪುರಸಭೆ ವಿಶೇಷ ಸದಸ್ಯರಾಗಿದ್ದರಿಂದ ಅತೀ ಮಹತ್ವದ ಪುರಸಭೆ ಬಜೆಟ್ ಸಭೆಗೆ ಏಕೆ ಬಂದಿಲ್ಲ. ಹೀಗಾಗಿ ಅವರು ಅವರು ಈ ಕ್ಷೇತ್ರಕ್ಕೆ ಒಬ್ಬ ಅತಿಥಿ ಶಾಸಕರೇ ಎನ್ನುವುದರಲ್ಲಿ ತಪ್ಪಿಲ್ಲ ಎಂದರು. 

ಪುರಸಭೆಯ ಬಜೆಟ್ ಮಂಡನೆ ಬಿದ್ದು ಹೋಗಿದ್ದು, ಇದಕ್ಕೆ ನೇರ ಹೊಣೆ ಪುರಸಭೆ ಅಧ್ಯಕ್ಷರು. ಅಧಿಕಾರಿಗಳು ತಾವು ಹೇಳಿದಂತೆ ಕಾರ್ಯ ನಿರ್ವಹಿಸುತ್ತಾರೆ ವಿನಃ ಸಭೆಯಲ್ಲಿ ಪರ ವಿರೋಧ ಅವರಿಗೆ ಸಂಬಂಧವಿಲ್ಲ. ಸಿದ್ದರಾಮಯ್ಯನವರು ಸಭೆಯಲ್ಲಿ ಇದ್ದರೆ, ಈರೀತಿ ಯಾವ ಸಮಸ್ಯೆಗಳು ಬರುತ್ತಿರಲಿಲ್ಲ. ಇದನ್ನು ಅಧಿಕಾರಿಗಳ ಮೇಲೆ ಹೊರಿಸಿ, ತಮ್ಮ ವೈಪಲ್ಯವನ್ನು ಮುಚ್ಚಿಡುವ ತಂತ್ರವನ್ನು ಕಾಂಗ್ರೆಸ ಪಕ್ಷ ಮಾಡುತ್ತಿದೆ ಎಂದು ಹರಿಯಾಯ್ದರು. 

ಈ ಹಿಂದೆ ತಾವೇ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಈ ಕ್ಷೇತ್ರದಲ್ಲಿ ತಮ್ಮ ಪಕ್ಷದವರೇ ಶಾಸಕರಾಗಿದ್ದರು. ಆಗ ಆಗದ ಅಭಿವೃದ್ಧಿ ಕಾಮಗಾರಿಗಳು ಈಗ ಬಿಜೆಪಿ ಸರ್ಕಾರವಿದ್ದಾಗ ಹೇಗೆ ಅಭಿವೃದ್ಧಿ ಆಗುತ್ತಿವೆ. ಅಲ್ಲದೇ ಸಮ್ಮಿಶ್ರ ಸರ್ಕಾರ ಇವರದೇ ಪಕ್ಷದಿಂದ ಆಗಿದ್ದರೂ ಸಹ, ಆ ಸಂದರ್ಭದಲ್ಲಿ ಬಾದಾಮಿಗೆ ಶಾಸಕ ಸಿದ್ದರಾಮಯ್ಯನವರು ಎಷ್ಟು ಅನುದಾನ ತಂದಿದ್ದಾರೆ ಎಂಬುದು ಈ ಕ್ಷೇತ್ರದ ಜನತೆಗೆ ಗೊತ್ತಿದೆ. ನಮ್ಮ ಭಾಜಪ ಸರ್ಕಾರದ ಅವಧಿಯಲ್ಲಿ ಹೆಚ್ಚಿನ ಅನುದಾನ ಬರುತ್ತಿರುವುದು ಗುಳೇದಗುಡ್ಡ ಪಟ್ಟಣದ ಮಾಜಿ ಶಾಸಕರಾದಿಯಾಗಿ ಕ್ಷೇತ್ರದ ಹಾಗೂ ಭಾಜಪ ಶಾಸಕರು, ಮಂತ್ರಿಗಳ ಸಹಕಾರದಿಂದ ಎಂಬುದನ್ನು ಮರೆಯಬಾರದೆಂದು ವಿರೋಧ ಪಕ್ಷದವರಿಗೆ ತೀರುಗೇಟು ನೀಡಿದರು. 

ಮಾಜಿ ಶಾಸಕರಾದ ರಾಜಶೇಖರ ಶೀಲವಂತ ಅವರು, ಗುಳೇದಗುಡ್ಡ ಕ್ಷೇತ್ರದ ಶಾಸಕರಾಗಿದ್ದಾಗ ರಾಜ್ಯದ ಬಜೆಟ್ ಗಾತ್ರ 85 ಸಾವಿರ ಕೋಟಿಗೆ ಸೀಮಿತವಾಗಿತ್ತು. ಅದು ಈಗ 2.37.893 ಕೋಟಿಗೂ ಹೆಚ್ಚಿಸಿದೆ. ಇದು ನಮ್ಮ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರ​‍್ಪನವರ ಸಾಧನೆ. 1996-99ರ ಅವಧಿಯಲ್ಲಿ ಇಷ್ಟು ಕಡಿಮೆ ಬಜೆಟ್ ಇದ್ಯಾಗ್ಯೂ ಸಹ ಆಸಂಗಿ ಬ್ಯಾರೇಜ್ ನಿರ್ಮಾಣ, ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಿದ್ದು, ಐಟಿಐ ಕಾಲೇಜ, 110 ಕೆ.ವಿ. ಸ್ಟೇಶನ್, ಬಸ್‌ಡಿಪೋ ಮಂಜೂರು, ಅಲ್ಲದೇ ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಾಗಿವೆ. ನಂತರದಲ್ಲಿ ನಮ್ಮ ಇನ್ನೊಬ್ಬ ಮಾಜಿ ಶಾಸಕರಾದ ಎಂ.ಕೆ.ಪಟ್ಟಣಶೆಟ್ಟಿ ಅವರ ಶಾಸಕತ್ವದ ಅವಧಿಯಲ್ಲಿ ಆಲಮಟ್ಟಿಯಿಂದ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ, ನಗರದಲ್ಲಿ ಪುರಸಭೆಯಿಂದ ನಗರೋತ್ಥಾನ ಯೋಜನೆ ಅಡಿಯಲ್ಲಿ ಕಾಂಕ್ರೆಟ ರಸ್ತೆ, ನೂತನ ತಾಲ್ಲೂಕ ಘೋಷಣೆ, ನೋಂದಣಿ ಕಛೇರಿ, ಕೋರ್ಟ ಹೀಗೆ ಸಾಕಷ್ಟು ಕಾಮಗಾರಿಗಳು ಆಗಿವೆ. ಹೀಗೆಲ್ಲಾ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿದ ಶೀಲವಂತ ಅವರು ಪಟ್ಟಣದ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಾರೆ ಎಂಬುದು ಶುದ್ಧಸುಳ್ಳು. ಪಟ್ಟಣದಲ್ಲಿ ಈಗ ನಿಮಗೆ ಬೇಕಾದಂತೆ ರಸ್ತೆ ನಿರ್ಮಾಣ ಮಾಡಿಸುತ್ತಿರುವುದು ಅದು ನಿಮ್ಮ ಶ್ರೇಯಸ್ಸು ಎಂದರು. 

ಪಟ್ಟಣಲ್ಲಿ 24*7 ಮೀಟರ್ ಅಳವಡಿಕೆ ಹಿಂದೆ ಭಾಜಪ ಸರ್ಕಾರವಿದ್ದಾಗ ಆಗಿದ್ದು. ಕಳೆದ 7 ವರ್ಷಗಳಿಂದ ಕಾಂಗ್ರೆಸ ಆಡಳಿತ ನಂತರ ಸಿದ್ದರಾಮಯ್ಯನವರ ಆಡಳಿತದಲ್ಲಿ ಏನು ಆಗಿಲ್ಲ, ಇದನ್ನೇಕೆ ಅವರು ಮಾಡಬಾರದು, ಇಷ್ಟೆಲ್ಲ ವಿಷಯಗಳು ಇದ್ದರೂ ಸಹ, ನಮ್ಮ ನಾಯಕರ ಮೇಲೆ ಅನಾವಶ್ಯಕವಾಗಿ ಇಲ್ಲ-ಸಲ್ಲದ ಏಕವಚನದಲ್ಲಿ ಮುರ್ಯಾದೆ ಬಿಟ್ಟು ಮಾತನಾಡುತ್ತಿರುವ ಹೊಳಬಸು ಶೆಟ್ಟರ ಮಾಜಿ ಶಾಸಕ ರಾಜಶೇಖರ ಶೀಲವಂತ ಅವರಲ್ಲಿ ಕ್ಷಮೆ ಕೇಳಬೇಕೆಂದು ಎಚ್ಚರಿಕೆ ನೀಡಿದರು. 

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಶಿವಾನಂದ ಎಣ್ಣಿ, ಈರಣ್ಣ ಶೇಖಾ, ರಂಗಪ್ಪ ಶೇಬಿನಕಟ್ಟಿ, ಪುರಸಭೆ ಮಾಜಿ ಸದಸ್ಯ ಶ್ರೀಕಾಂತ ಭಾವಿ, ಪುರಸಭೆ ಹಾಲಿ ಸದಸ್ಯ ಕಾಶಿನಾಥ ಕಲಾಲ, ಮಲ್ಲೇಶ ಕಲಾದಗಿ, ಭಾಜಪ ಯುವ ಮೋರ್ಚಾ ಅಧ್ಯಕ್ಷ ರಾಜು ಗೌಡರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭುವನೇಶ ಪೂಜಾರ, ಸಂಘಟನಾ ಕಾರ್ಯದರ್ಶಿ ರಾಮಕೃಷ್ಣ ಮಿಣಜಗಿ, ಮುತ್ತು ಚಿಕ್ಕನರಗುಂದ ಸೇರಿದಂತೆ ಮತ್ತತರರಿದ್ದರು 


ಸುದ್ದಿ ಓದಿ