ಕಾಗವಾಡ

ಕುಡಿಯುವ ನೀರಿನ ಯೋಜನೆಗೆ ಶೀತಲಗೌಡ ಪಾಟೀಲ್ ಚಾಲನೆ

ಕುಡಿಯುವ ನೀರಿನ ಯೋಜನೆಗೆ ಶೀತಲಗೌಡ ಪಾಟೀಲ್ ಚಾಲನೆ

ಕಾಗವಾಡ 25: ತಾಲೂಕಿನ ಉಗಾರ ಬುದ್ರುಕ ಗ್ರಾಮದ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಪರಮೇಶ್ವವಾಡಿ ಗ್ರಾಮದಲ್ಲಿಯೇ ಸುಮಾರು 4 ಸಾವಿರ ಜನರಿಗಾಗಿ 15ನೇ ಹಣಕಾಸಿನ ಯೋಜನೆ ಅಡಿಯಲ್ಲಿ 10.50 ಲಕ್ಷರೂ ವೆಚ್ಚ ಮಾಡಿ ನಿರ್ಮಿಸಿದ ಯೋಜನೆಗೆ ಗ್ರಾಮದ ಮುಖಂಡರು ಅಥಣಿಯಲ್ಲಿ ಬ್ಯಾಂಕಿನ ಅಧ್ಯಕ್ಷ ಶೀತಲ್‌ಗೌಡ ಪಾಟೀಲ್ ಪೂಜೆ ಸಲ್ಲಿಸಿ ಚಾಲನೆ ನೀಡಿದರು. 

ಶುಕ್ರವಾರರಂದು ಉಗಾರ ಗ್ರಾಮದ 26 ಸದಸ್ಯರ ಉಪಸ್ಥಿತಿಯಲ್ಲಿ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 

ಕಳೆದ ಅನೇಕ ವರ್ಷಗಳಿಂದ ಕುಡಿಯುವ ನೀರಿಗೆ ಬೇಡಿಕೆ ಇತ್ತು. ಪಂಚಾಯಿತಿ ವತಿಯಿಂದ 15ನೇ ಹಣಕಾಸಿನ ಯೋಜನೆಯಲ್ಲಿ 10.50 ಲಕ್ಷರೂ. ವೆಚ್ಚ ಮಾಡಿ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ. 

ಪೂಜೆ ಸಲ್ಲಿಸಿ ಮಾತನಾಡಿದ ಶೀತಲ್‌ಗೌಡ ಪಾಟೀಲ್ ಗ್ರಾಮದ ಎಲ್ಲ ಸದಸ್ಯರು ಒಂದುಗೂಡಿ ಕೆಲಸದ ಶ್ರುತಿಗೆ ಒಗ್ಗೂಡಿಸಿ ಯೋಜನೆ ಪೂರ್ಣಗೊಳಿಸಿದ್ದಾರೆ. ಇಲ್ಲಿಯ ಜನರ ಕುಡಿಯುವ ನೀರಿನ ಬೇಡಿಕೆ ಪೂರ್ಣಗೊಳಿಸಿದ್ದರಿಂದ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲಿ ಎಂದು ಸದಸ್ಯರಿಗೆ ಸೂಚನೆ ನೀಡಿದರು. 

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆಶಾ ಪೂಜಾರಿ, ಸದಸ್ಯರಾದ ಅಪ್ಪಾಸಾಹೇಬ್ ಚೌಗುಲೆ, ಮನೋಜ್ ಕುಸನಾಳ, ವಿನಾಯಕ್ ಶಿಂದೆ, ಉದಯ ಕಾಂಬಳೆ, ಜೈಪಾಲ್ ಸಾಂಗವಡೆ, ಭಾವುಸಾಹೇಬ ಕದಂ, ಪಿಡಿಓ ಬಾಬು ಐತವಾಡೆ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ