ಯರಗಟ್ಟಿ

ಕುರಿ ಕಳವು: ಆರೋಪಿ ಬಂಧನ

ಕುರಿ ಕಳವು: ಆರೋಪಿ ಬಂಧನ

ಯರಗಟ್ಟಿ 18: ಕುರಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಮುರುಗೋಡ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಅಶೋಕ ಬಸಪ್ಪ ಮಾಡಮಗೇರಿಬಂಧಿತ ಆರೋಪಿಯಾಗಿದ್ದಾನೆ.   

ಸಮೀಪದ ಮುರಗೋಡ ಠಾಣಾ ವ್ಯಾಪ್ತಿಯಲ್ಲಿ ಇತ್ತಿಚೆಗೆ ಕುರಿ ಕಳ್ಳತನ ಪ್ರಕರಣ ವರದಿಯಾಗಿದ್ದು ಹಲಕಿ ಕ್ರಾಸ ಹತ್ತಿರ 30 ಕುರಿಗಳು ಕಳ್ಳತನವಾದ ಕುರಿತು ಈ ಬಗ್ಗೆ ಮುರಗೋಡ ಠಾಣೆಯಲ್ಲಿ ದೂರು ದಾಖಲಾಗಿತ್ತು. 

ಮುರಗೋಡ ಪೋಲಿಸರು ತನಿಖೆ ಕೈಗೊಂಡು ಪ್ರಕರಣವನ್ನು ಭೇದಿಸಿ ಅಶೋಕ ಬಸಪ್ಪ ಮಾಡಮಗೇರಿ ಎಂಬ ಆರೋಪಿಯನ್ನು ಬಂದಿಸಿ ಅವನಿಂದ ಕುರಿ ಕಳ್ಳತನಕ್ಕೆ ಸಂಬಂಧ 1,00,000 (ಒಂದು ಲಕ್ಷ ) ರೂಪಾಯಿ ಕೃತ್ಯಕ್ಕೆ ಉಪಯೋಗಿಸಿದ ಅಶೋಕಾ ಲೇಲ್ಯಾಂಡ ಗೂಡ್ಸ್‌ ಗಾಡಿಯನ್ನು ಅಂದಾಜು ಕಿಮ್ಮತ್ತಿನ 2,15,000 ರೂ. ವಶಪಡಿಸಿಕೊಂಡು ಒಟ್ಟು 3,15,000 ರೂಪಾಯಿ ಕಿಮ್ಮತ್ತಿನ ಮಾಲನ್ನು ವಶಪಡಿಸಿಕೊಂಡಿದ್ದಾರೆ. 

ಕೃತ್ಯದಲ್ಲಿ ಭಾಗಿಯಾಗಿದ್ದ ಇತರರು ತಲೆ ಮರೆಸಿಕೊಂಡಿದ್ದು ಈ ಬಗ್ಗೆ ತನಿಖೆ  ಜಾರಿಯಲ್ಲಿದೆ.  

ಕಾರ್ಯಾಚರಣೆಯಲ್ಲಿ ಡಿಎಸ್‌ಪಿ ರಾಮನಗೌಡ ಹಟ್ಟಿ ಮಾರ್ಗದರ್ಶನದಲ್ಲಿ ಮುರಗೋಡ ಸಿಪಿಐ ಮೌನೆಶ್ವರ ಮಾಲಿಪಾಟೀಲ,  ಪ್ರೋಬೆಶನರಿ ಪಿ ಎಸ್ ಐ ಬಸನಗೌಡ ರ್ನಿಲಿ, ಕುಮಾರಿ ಲಕ್ಷ್ಮೀ ಬಿರಾದಾರ ಸಿಬ್ಬಂದಿಯರಾದ ವೈ ಎಚ್ ಕಡಕೋಳ, ಎಚ್ ಆರ್ ನ್ಯಾಮಗೌಡ್ರ, ಕೆ ಬಿ ಅಲಗರಾವುತ, ಎಮ್ ಬಿ ಸಣ್ಣನಾಯ್ಕರ, ಎಮ್‌. ಎಸ್‌. ಅವರಾದಿ, ಐ ಎಸ್ ವಕ್ಕುಂದ, ವಿ. ಡಿ. ಸಕ್ರಿ  ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 

ತಂಡದಲ್ಲಿ ಇರುವ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯ ವೈಖರಿ ಬಗ್ಗೆ  ಬೆಳಗಾವಿ ಎಸ್ ಪಿ  ಡಾ. ಸಂಜೀವ ಪಾಟೀಲ ಅವರು ಪ್ರಶಂಸಿಸಿದ್ದಾರೆ. 


ಸುದ್ದಿ ಓದಿ