ಧಾರವಾಡ - ಹುಬ್ಬಳ್ಳಿ

ಶಾಸ್ತ್ರಿಜೀ ಗಾಂಧಿಜೀ ಜಯಂತಿ ವಿಜೃಂಭಣೆಯಿಂದ ಆಚರಣೆ

ಶಾಸ್ತ್ರಿಜೀ ಗಾಂಧಿಜೀ ಜಯಂತಿ ವಿಜೃಂಭಣೆಯಿಂದ ಆಚರಣೆ

ಹುಬ್ಬಳ್ಳಿ 03: ವಿದ್ಯಾಮಗರದ ಕೆಎಸ್‌ಎಸ್ ಮಹಾವಿದ್ಯಾಲಯ ಮತ್ತು ವಿಜಯನಗರ ಬಿ.ಇಡಿ ಮಹಾವಿದ್ಯಾಲಯಗಳ ಸಹಯೋಗದಲ್ಲಿ ಗಾಂಧಿಜಯಂತಿ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಕೆಎಸ್‌ಎಸ್ ಪದವಿ ಮತ್ತು ಬಿ.ಇಡಿ ವಿಭಾಗದ ಎನ್‌ಎಸ್‌ಎಸ್ ಘಟಕಗಳ ಸಹಯೋಗದೊಂದಿಗೆ 155ನೇ ಗಾಂಧೀಜಿ ಜಯಂತಿ ಹಾಗೂ 120ನೇ ಲಾಲ್ ಬಹದ್ದೂರ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮವನ್ನು ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ಮಾಡುವುದರ ಮೂಲಕ ಆಚರಿಸಲಾಯಿತು.  

ಕಾರ್ಯಕ್ರಮಕ್ಕೆ ಶಾಲೆಯ ಗೌರವಾನ್ವಿತ ಸಹಕಾರ್ಯದರ್ಶಿಗಳಾದ ಡಾ. ಪುನೀತಕುಮಾರ ಬೆನಕನವಾರಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶಾಸ್ತ್ರೀ ಜೀ ಮತ್ತು ಗಾಂಧಿಜೀಯವರ ಆದರ್ಶಗಳನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು. 

ಪ್ರಾಚಾರ್ಯರಾದ ಸಂದೀಪ ಬೂದಿಹಾಳ, ಬಿ.ಇಡಿ ಪ್ರಾಚಾರ್ಯರಾದ ಡಾ. ಎನ್ ಡಿ ಶೇಖ್, , ಕಾನೂನು ವಿವಿ ಸಿಂಡಿಕೇಟ್ ಸದಸ್ಯರಾದ ಡಾ. ಎಚ್ ವಿ ಬೆಳಗಲಿ, ಡಾ. ಪಿ.ಎಸ್ ಹೆಗಡೆ, ಡಾ. ರಾಜಕುಮಾರ ಪಾಟೀಲ, ಡಾ. ಭಟ್, ಡಾ. ಮಂಜುನಾಥ ಚಳಗೇರಿ. ಡಾ. ಬಸವರಾಜ ಬಸ್ನಾಳ, ಡಾ. ಜ್ಯೋತಿ ಹಿರೇಮಠ, ಡಾ. ಆಶಾ ಪಾಟೀಲ, ದೈಹಿಕ ನಿರ್ದೇಶಕರಾದ ಪ್ರೊ. ಎಚ್ ಆರ್ ಕುರಿ ಮತ್ತು ಬಸವರಾಜ ದೇವರಮನಿ, ಬಸವರಾಜ ದಳವಾಯಿ, ಡಾ. ಎ ಎಸ್ ಗಡಾ, ಸಿ. ವಾಯ್ ಹೊಸಮನಿ ಎನ್ ಎಸ್ ಎಸ್ ಅಧಿಕಾರಿ ಬಿ. ಎನ್ ತಿರಕಪ್ಪನವರ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ