ಅಥಣಿ

ಸಾತ್ವಿಕ ಚಿಂತನೆ ಕಡೆ ಒತ್ತು ಕೋಡಿ- ಪ್ರೋ. ಮಲ್ಲೆಪುರಂ ಜಿ ವೆಂಕಟೇಶ

ಸಾತ್ವಿಕ ಚಿಂತನೆ ಕಡೆ ಒತ್ತು ಕೋಡಿ- ಪ್ರೋ. ಮಲ್ಲೆಪುರಂ ಜಿ ವೆಂಕಟೇಶ
ಶರಣ ಸಂಸ್ಕೃತಿ ಉತ್ಸವ ಉದ್ಗಾಟನೆ ಮಾಡುತ್ತಿರುವ ಗಣ್ಯರು

ಅಥಣಿ 11: ಸಾತ್ವಿಕ ಶಕ್ತಿ ಮುಂದೆ ತಾಮಸ ಶಕ್ತಿ ಕುಸಿಯುತ್ತದೆ. ಇದರಿಂದ ಸಕಾರಾತ್ಮಕ ವಿಚಾರಗಳು ಬೆಳೆಯುತ್ತವೆ. ಅದಕ್ಕೆ ನಾವು ಸಾತ್ವಿಕ ಚಿಂತೆಗಳ ಕಡೆ ಒತ್ತು ನೀಡಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರಥಮ ಕರ್ನಾಟಕ ಸಂಸ್ಕ್ರತ ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಮಲ್ಲೆಪುರಂ ಜಿ ವೆಂಕಟೇಶ ಅವರು ಹೇಳಿದರು.

ಅಥಣಿಯ ಗಚ್ಚಿನಮಠದಲ್ಲಿ ಮಂಗಳವಾರ ಆರಂಭಗೊಂಡ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದ ಉದ್ಗಾಟನಾ ಕಾರ್ಯಕ್ರಮದಲ್ಲಿ ಬಾಗಿಯಾಗಿ ಮಾತನಾಡಿದ ಅವರು ಇದನ್ನು ಸಾಧಿಸ ಬೇಕಾದರೆ ನಮ್ಮಲ್ಲಿ ನಾವು ಸಾಧಕರಾಗಬೇಕು. ಸಾಧಕರಾಗುವವರು ಮೊದಲು ಮಂತ್ರ ಸಾಧನೆ ಭಕ್ತಿ ಶ್ರದ್ದೆ ಇವೆಲ್ಲವುಗಳು ವ್ಯಕ್ತಿಯಲ್ಲಿ ಅರಳಿ ಬೆಳೆಯಬೇಕು ಆಗ ಸಕಾರಾತ್ಮ ಗುಣ ಬೆಳೆದು ಆತ ಒಬ್ಬ ಸಾಧಕ ನಾಗಲು ಸಾಧ್ಯವೆಂದು ಹೇಳಿದರು.

ಮುಂದುವರೆದು ಮಾತನಾಡಿ ಅಥಣಿ ಶ್ರೀ ಮುರುಘೇಂದ್ರ ಶಿವಯೋಗಿಗಳು ಇಷ್ಟಲಿಂಗ ಪೂಜೆಯ ಮೂಲಕ ಸಹಜ ಶಿವಯೋಗದ ಸಾಧನೆಯನ್ನು ಮಾಡಿದರು. ಶರಣರ ಬಸವಣ್ಣವರ ತತ್ವಗಳಲ್ಲಿ ಬಾಳಿದರು. ಇದರ ಮೂಲಕ ಸಹಜವಾಗಿ ಶಿವಯೋಗವನ್ನು ಸಾಧನೆ ಮಾಡಿದರು. ಜಗತ್ತಿನಲ್ಲಿ ಬಸವಣ್ಣನವರನ್ನು ಅಪ್ಪ ಎಂದು ಕರೆದು ಅವರ ತತ್ವಗಳನ್ನು ಅಳವಡಿಸಿಕೋಳ್ಳುವದರ ಮೂಲಕ ಶ್ರೇಷ್ಠ ಶಿವಯೋಗ ಸಾಧಕರಾದರು. ಜಗತ್ತಿನಲ್ಲಿ ಇವರಷ್ಟು ಶ್ರೇಷ್ಠ ಶಿವಯೋಗದ ಸಾಧನೆ ಮಾಡಿದ ಮತ್ತೋಬ್ಬ ಸಾಧಕರಿಲ್ಲ. ಅದಕ್ಕಾಗಿ ಇವರ ನಡೆ ಒಂದು ಪವಾಡವಾಗಿತ್ತು. ಸಿಂಹ ಸಹ ಇವರಿಗೆ ತಲೆಬಾಗಿದೆ. ಅವರ ಜೀವನದ ಪವಾಡಗಳು ಸಾಕಷ್ಟು ಇವೆ.ಅಷ್ಟೆ ಸಾಮಾಜಿಕ ಪರಿವರ್ತನೆ ಸದ್ದು ಗದ್ದಲವಿಲ್ಲದೆ ಕೆಲಸ ಮಾಡಿ ಶರಣ ತತ್ವಗಳನ್ನು ಜನರಿಗೆ ತಲುಪಿಸಿದ್ದಾರೆ.

ಅವರ ಸಾಧನೆಯ ಹೆಜ್ಜೆಯಲ್ಲಿ ಇಂದು ಚಿತ್ರದುರ್ಗದ ಡಾ, ಶಿವಮೂರ್ತಿ ಮುರುಘಾ ಶರಣರು ಸಹಜ ಶಿವಯೋಗ ಮಾಡುವದರ ಮೂಲಕ ಜನರಿಗೆ ಶರಣ ತತ್ವಗಳನ್ನು ತಲುಪಿಸುತ್ತಾ ಸಮಾನೆತೆಯ ಭಾವೈಕ್ಯತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮವನ್ನು ಅಥಣಿ ಶ್ರೀ ಶಿವಯೋಗಿಳ ಪರಮ ಭಕ್ತರಾದ ಚಂದ್ರಶೇಕರ ತಾಂವಶಿ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಜಿಯವರು ಮತ್ತು ನದಿ ಇಂಗಳಗಾಂವದ ಸಿದ್ದಲಿಂಗ ಸ್ವಾಮೀಜಿಯವರು. ಮಡಿವಾಳ ಮಾಚಿದೇವರು ಮಾತನಾಡಿದರು. ಸಮಾರಂಭ ಅಧ್ಯಕ್ಷತೆಯನ್ನು ಗಚ್ಚಿನಮಠದ ಶಿವ್ಬಸವ ಸ್ವಾಮಿಜಿಯವರು ವಹಿಸಿ ಮಾತನಾಡಿದರು.

ಸಮಾರಂಭದಲ್ಲಿ ಅತಿಥಿಗಳಾಗಿ ಸವಿತಾ ಅಮರಶೆಟ್ಟಿ ಅಧ್ಯಕ್ಷರಾದ ಕನರ್ಾಟಕ ರೇಷ್ಮೆ ಮಾರಾಟ ಮಂಡಳಿ ಬೆಂಗಳೂರ, ಸಂಗಮೇಶ ಬಬಲೇಶ್ವರ, ಎಸ್.ಲಿಂಗಮೂರ್ತಿ. ಗುಲಬುರ್ಗಾ ವಿಶ್ವ ವಿಧ್ಯಾಲಯ ಕುಲಪತಿಗಳಾದ ದಯಾನಂದ ಅಗಸರ, ಹಿರಿಯ ಎಲಬು ಕೀಲು ತಜ್ಣ ಡಾ.ಮಹೇಶ ಕಾಪಸೆ, ವಕೀಲರ ಸಂಘದ ಅಧ್ಯಕ್ಷ ಕಲ್ಲಪ್ಪ ವಣಜೋಳ, ಎ.ಬಿ.ಪಾಟೀಲ ಇವರನ್ನು ಸನ್ಮಾನ ಮಾಡಲಾಯಿತು, ಜೀ ಕನ್ನಡ ವಾಹಿನಿಯ ಪ್ರಶಸ್ತಿ ವಿಜೇತ ಕಂಬದ ರಂಗಯ್ಯಾ ಅವರ ಸಂಗೀತ ಸೇವೆ ಜರುಗಿತು. ಕಾರ್ಯಕ್ರಮದಲ್ಲಿ ಸ್ವಾಗತ ಶಿವನಾಂದ ದಿವಾನಮಳ ಮಾಡಿದರು, ಸಾಹಿತಿ ವಾಮನ ಕುಲಕರ್ಣಿ ನಿರೂಪಣೆ ಮಾಡಿದರು.


 

ಸುದ್ದಿ ಓದಿ