ಕಾಗವಾಡ

21ರಂದು ಶಾಂತಿಸೇನ ಮುನಿಮಹಾರಾಜರಿಗೆ ಆಚಾರ್ಯ ಪದವಿ ಪ್ರದಾನ

21ರಂದು ಶಾಂತಿಸೇನ ಮುನಿಮಹಾರಾಜರಿಗೆ ಆಚಾರ್ಯ ಪದವಿ ಪ್ರದಾನ

ಶೇಡಬಾಳ 18: ಶಾಂತಿಸೇನ ಮುನಿಮಹಾರಾಜರಿಗೆ ಆಚಾರ್ಯ ಪದವಿ ಪ್ರದಾನ (ಪದಾರೋಹಣ) ಸಮಾರಂಭ  ಶೇಡಬಾಳ ಗ್ರಾಮದ ಶಾಂತಿಸಾಗರ ಛಾತ್ರಾಶ್ರಮದಲ್ಲಿ ರವಿವಾರ ದಿ. 21ರಂದು ಜರುಗಲಿದೆ ಎಂದು ಆಶ್ರಮದ ಸಂಚಾಲಕ ರಾಜು ಕೇಶವ ನಾಂದ್ರೆ ತಿಳಿಸಿದ್ದಾರೆ.  

ಸಮಾಧಿ ಸಾಮ್ರಾಟ್ ಶ್ರಮಣರತ್ನ ಆಚಾರ್ಯ, ಸುಬಲಸಾಗರ ಮಹಾರಾಜರ ಪರಮ ಪಟ್ಟಶಿಷ್ಯರಾದ ಶಾಂತಮೂರ್ತಿ ಆಚಾರ್ಯ, ದೇವಸೇನ ಮುನಿಮಹಾರಾಜರು ಸಮಾಧಿ ಮರಣ ಹೊಂದಿದ ನಂತರ ತೆರವಾಗಿದ್ದ ಸ್ಥಾನಕ್ಕೆ ಶಾಂತಿಸೇನ ಮುನಿಮಹಾರಾಜರಿಗೆ ಆಚಾರ್ಯ ಪದವಿ ಪ್ರದಾನ (ಪದಾರೋಹಣ) ನಡೆಯಲಿದೆ.  

ಆಚಾರ್ಯ ರತ್ನ  ಧರ್ಮಸೇನ ಮುನಿಮಹಾರಾಜರ ಸಸಂಘ ಮತ್ತು ಸಮಾಧಿಸ್ಥ ಆಚಾರ್ಯ ದೇವಸೇನ ಮುನಿಮಹಾರಾಜ ಸಸಂಘ ಹಾಗೂ ನಾಂದಣಿ ಸಂಸ್ಥಾನ ಮಠದ ಜಿನಸೇನ ಪಟ್ಟಾಚಾರ್ಯ ಮಹಾಸ್ಥಾಮಿಗಳು ಹಾಗೂ ಇನ್ನುಳಿದ ತ್ಯಾಗಿಗಳ ದಿವ್ಯ ಸಾನಿಧ್ಯದಲ್ಲಿ ಶಾಂತಿಸೇನ ಮುನಿಮಹಾರಾಜರಿಗೆ ಆಚಾರ್ಯ ಪದವಿ ಪ್ರದಾನ ಕಾರ್ಯಕ್ರಮ ಜರುಗಲಿದೆ.  

ರವಿವಾರ ದಿ. 21 ರಂದು ಮುಂಜಾನೆ 6 ಗಂಟೆಗೆ ಣಮೋಕಾರ ಮಹಾಮಂತ್ರ, ಸುಪ್ರಭಾತ ಸ್ತೋತ್ರ, 7 ಗಂಟೆಗೆ ಧರ್ಮ ಧ್ವಜಾರೋಹಣ, 8 ಗಂಟೆಗೆ ಆದಿನಾಥ ಭಗವಂತರಿಗೆ ಪಂಚಾಮೃತ ಅಭಿಷೇಕ ಮಹಾಶಾಂತಿಧಾರಾ, 9.30 ಕ್ಕೆ ಗಣಧರ ವಲಯ ಆರಾಧನಾ ಪೂಜಾ ಪ್ರಾರಂಭ, ಮಧ್ಯಾಹ್ನ 12 ಗಂಟೆಗೆ ಆಚಾರ್ಯ ಪದಾರೋಹಣದ ಪೂರ್ವ ಕಾರ್ಯಕ್ರಮಗಳು, 1.24 ಕ್ಕೆ ಶ್ರೀಗಳಿಂದ ಶಾಂತಿಸೇನ ಮುನಿಮಹಾರಾಜರಿಗೆ ಆಚಾರ್ಯ ಪದಾರೋಹಣ ಸಂಸ್ಕಾರವನ್ನು ನೆರವೇರಿಸಲಾಗುತ್ತದೆ. ನಂತರ ಶ್ರೀಗಳಿಂದ ಮಂಗಲ ಪ್ರವಚನ, ಆರತಿ, ವಿಸರ್ಜನೆ ಇತ್ಯಾದಿ. 

ಕರ್ನಾಟಕ ಪುರೋಹಿತ ರತ್ನ ಆನಂದ ಗುಣಧರ ಉಪಾಧ್ಯೆ ಸವದಿ, ಚಂದ್ರಕಾಂತ ಗುಂಡಪ್ಪ ಪಂಡಿತ ಇಂಡಿ, ಬಾಹುಬಲಿ ಉಪಾಧ್ಯೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ಸದಲಗಾದ ಪಾರ್ಶ್ವ ಪದ್ಮಾವತಿ ಕಲಾಮಂಚದ ಸಾಕ್ಷಿ ಸತೀಶ ಉಪಾಧ್ಯೆ ಸಂಗೀತ ಕಾರ್ಯಕ್ರಮವನ್ನು ನೀಡಲಿದ್ದಾರೆ.  

ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಸಮ್ಯಕ್‌ಪುಣ್ಯದಲ್ಲಿ ಸಹಭಾಗಿ ಆಗುವಂತೆ ರಾಜು ನಾಂದ್ರೆ ಮನವಿ ಮಾಡಿಕೊಂಡಿದ್ದಾರೆ. 


ಸುದ್ದಿ ಓದಿ