ಶಂಕರ ಜಯಂತಿ ಕಾರ್ಯಕ್ರಮ
ಶಿಗ್ಗಾವಿ 18: ಪಟ್ಟಣದ ದೇಸಾಯಿ ಗಲ್ಲುಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶಂಕರ ಜಯಂತಿ ಕಾರ್ಯಕ್ರಮ ಜರುಗಿತು. ಶಂಕರ ಭಗವತ್ಪಾದರ ಮೂರ್ತಿಗೆ ರುದ್ರಾಭಿಷೇಕವು ಎಸ್. ಪಿ. ಜೋಶಿ ಹಾಗೂ ಗ್ರಾಮದ ಹಿರಿಯರ ನೇತೃತ್ವದಲ್ಲಿ ನೆರವೇರಿತು.
ಮಧ್ಯಾಹ್ನ ವಿಪ್ರ ಮಹಿಳಾ ವೇದಿಕೆಯಿಂದ ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿ ಸಾಮೂಹಿಕ ಪಠಣ ನಂತರ ಶಂಕರಚಾರ್ಯರ ಶಿವಾಪರಾಧ ಕ್ಷಮಾಪಣ ಸ್ತೋತ್ರದ ಬಗ್ಗೆ ಪ್ರವಚನಕಾರ ಡಾ. ಕೃಷ್ಣ ಕಟ್ಟಿ ಪ್ರವಚನದಲ್ಲಿ ಇಂದು ಜಗತ್ತಿನಲ್ಲಿ ಸನಾತನ ಧರ್ಮದ ಅಸ್ತಿತ್ವ ಇದೇ ಅಂದರೆ ಅದಕ್ಕೆ ಶಂಕರಾಚಾರ್ಯರು ಕಾರಣ ಎಂದರು.
ಈ ಕಾರ್ಯಕ್ರಮದಲ್ಲಿ ಎಂ.ಎಲ್. ದೇಶಪಾಂಡೆ, ರಾಘವೇಂದ್ರ ದೇಶಪಾಂಡೆ, ದಿವಾಕರ ದೀಕ್ಷಿತ, ಧೀರೇಂದ್ರ ಕುಂದಾಪೂರ, ಕೃಷ್ಣ ಕೋಳಿವಾಡ, ಕಾಂತ ಪೋತದಾರ, ಕಿರಣ ಪ್ರಕಾಶ ಕುಲಕರ್ಣಿ, ರಾಜು ಕುಲಕರ್ಣಿ ತಪೋಭೂಮಿ, ಸತ್ಯಭೋಧ ಬೆಳಗಲಿ, ವೆಂಕಟಾಚಲ ಗುಡಿ, ನಯನ ಕುಲಕರ್ಣಿ, ನಾಗರಾಜ ಕೋಳಿವಾಡ, ಶ್ರೀಕಾಂತ ಕೋಳಿವಾಡ ಉಪಸ್ಥಿತರಿದ್ದರು. ನಂತರ ಮಹಾಪ್ರಸಾದ ಜರುಗಿತು.