ಧಾರವಾಡ - ಹುಬ್ಬಳ್ಳಿ

ವಿಧಾನಸೌಧದಲ್ಲಿ ಶಂಕರಗೌಡರ ಭಾವಚಿತ್ರ ರಾರಾಜೀಸಬೇಕು: ಸಂಗಮನಾಥ ಲೊಕಾಪೂರ

ವಿಧಾನಸೌಧದಲ್ಲಿ ಶಂಕರಗೌಡರ ಭಾವಚಿತ್ರ ರಾರಾಜೀಸಬೇಕು: ಸಂಗಮನಾಥ ಲೊಕಾಪೂರ

ಅಳ್ನಾವರ 09: ಕನ್ನಡ ನಾಡಿನಏಕೀಕರಣದ ರೂವಾರಿಗಳನ್ನು ಸ್ಮರಿಸಿಕೊಳ್ಳುವದರ ಮೂಲಕ ನಮ್ಮಲ್ಲಿಕನ್ನಡದ ಮನೋಭಾವನೆ ಗಟ್ಟಿಗೊಳ್ಳಬೇಕಾಗಿದೆ ಧಾರವಾಡಜಿಲ್ಲಾ ಶರಣ ಸಾಹಿತ್ಯ ಪರಿಷತ್‌ಅಧ್ಯಕ್ಷರಾದಡಾ.ಸಂಗಮನಾಥ ಲೋಕಾಪೂರಅವರು ಹೇಳಿದರು 

ಅಳ್ನಾವರ ತಾಲೂಕುಕನ್ನಡ ಸಾಹಿತ್ಯ ಪರಿಷತು,ಕನಾಟಕಜಾನಪದ ಸಾಹಿತ್ಯ ಪರಿಷತ್ತು,ಸರಕಾರಿ ಪ್ರೌಡ ಶಾಲೆ ಅಳ್ನಾವರ ಸಹಯೋಗದಲ್ಲಿ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದವರು ಅಳ್ನಾವರ ಪಟ್ಟಣದ ಸರಕಾರಿ ಪ್ರೌಡ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕಏಕೀಕರಣದ ಹೋರಾಟಗಾರಅದರಗುಂಚಿ ಶಂಕರಗೌಡರದತ್ತಿಉಪನ್ಯಾಸಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. 

ಮುಂದುವರೆದುಲೋಕಾಪೂರಅವರುಗಾಂಧಿಜೀಯವರ ವ್ಯಕ್ತಿತ್ವವನ್ನು ರೂಪಿಸಿಕೊಂಡು ಹೋರಾಟವನ್ನೆ ಜೀವನವನ್ನಾಗಿಸಿಕೊಂಡು ಕರ್ನಾಟಕಏಕೀಕರಣಕ್ಕಾಗಿತಮ್ಮನ್ನು ಅರ​‍್ಿಸಿಕೊಂಡಿದ್ದ ಅದರಗುಂಜೀ ಶಂಕರಗೌಡರಇತಿಹಾಸವನ್ನು ಅರಿತುಕೊಳ್ಳುವದರ ಜೊತೆಗೆಅವರ ಭಾವಚಿತ್ರ ವಿಧಾನಸೌಧದಲ್ಲಿ ಅನಾವರಣಗೊಳ್ಳಲು ಮತ್ತು ಪುತ್ತಳಿ ಸ್ಥಾಪನೆಯಂತಹಕಾರ್ಯಕ್ಕೆ ಸರಕಾರ ಮುಂದಾಗಬೇಕು ಹಾಗೂ ಇದಕ್ಕೆಕನ್ನಡ ಅಭಿಮಾನಿಗಳು ಹೋರಾಟವನ್ನೇ ಮಾಡುವ ಪ್ರಸಂಗ ನಿರ್ಮಾಣವಾದರೂಅಚ್ಚರಿ ಪಡಬೇಕಾಗಿಲ್ಲವೆಂದು ಹೇಳಿದರು 

ಕನ್ನಡ ನಾಡನ್ನುಒಗ್ಗೂಡಿಸುವಲ್ಲಿ ಶಂಕರಗೌಡರ ಪಾತ್ರಅತ್ಯಂತ ಹಿರಿದಾಗಿದ್ದು ನಮ್ಮೆಲ್ಲರಿಗೂಅವರುಆದರ್ಶಪ್ರಾಯರಾಗಿದ್ದಾರೆ ಸಾಧನೆ ಮತ್ತು ಸಿದ್ದಿಯ ಮೂಲಕ ಅದರಗುಂಜಿರಾಷ್ಟ್ರ ಮಟ್ಟದಲ್ಲಿಗುರುತಿಸುವಂತೆ ಮಾಡಿರುವಕೀರ್ತಿ ಶಂಕರಗೌಡರಿಗೆ ಸಲ್ಲುತ್ತದೆಅವರ ಬಗ್ಗೆ ಮಕ್ಕಳಿಗೆ ತಿಳಿಸುವ ಕೆಲಸ ಆಗಬೇಕು ಜೊತೆಗೆಕನ್ನಡ ನಾಡು ನುಡಿಗೆದಕ್ಕೆ ಬಾರದಂತೆ ಕಾಪಾಡಿಕೊಳ್ಳುವ ಗುರುತರವಾದಜವಾಬ್ದಾರಿಯೂ ನಮ್ಮೆಲರ ಮೇಲಿದೆಎಂದುಡಾ.ಸಂಗಮನಾಥ ಲೋಕಾಪೂರಅವರು ಹೇಳಿದರು 

ಕವಿವ ಸಂಘದ ಸಹ ಕಾರ್ಯದರ್ಶಿ ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿಕನ್ನಡ ನಾಡಿನ ನಿರ್ಮಾಣದಲ್ಲಿ ಹೋರಾಟಗಾರರ ಪರಿಶ್ರಮಅಧಿಕವಾಗಿದೆಇದಕ್ಕೆ ಕವಿವ ಸಂಘ ತನ್ನದೆಆದಕೊಡುಗೆ ನೀಡಿದೆಎಂದರು.ಅದರಗುಂಜಿ ಶಂಕರಗೌಡರ ಪ್ರತಿಷ್ಠಾನದಅದ್ಯಕ್ಷರಾದ ವಿರುಪಾಕ್ಷಗೌಡ.ಜಿ.ಪಾಟೀಲ,ಖಜಾಂಚಿಗೌಡಪ್ಪಗೌಡ ಪಾಟೀಲ, ವ್ಹಿ.ಜಿ.ಪಾಟೀಲ ಮಾತನಾಡಿದರುತಾಲೂಕುಜಾನಪದ ಪರಿಷತ್ತುಅಧ್ಯಕ್ಷರಾದ ಪೂರ್ಣಿಮಾ ಮುತ್ನಾಳ ಸಂಗೀತಕಾರ್ಯಕ್ರಮ ನಡೆಸಿಕೊಟ್ಟರು. 

ಜಾನಪದಅಕಾಡೆಮಿಯ ಪುರಸ್ಕಾರಕ್ಕೆ ಪಾತ್ರರಾಗಿರುವದತ್ತಿದಾನಿ ರಾಮಣ್ಣ ಪ್ರತಿಷ್ಠಾನದಡಾ.ರಾಮೂ ಮೂಲಗಿ ಅವರನ್ನು ಸನ್ಮಾನಿಸಲಾಯಿತು. 

ತಾಲೂಕು ಕಸಾಪ ಅಧ್ಯಕ್ಷಗುರುರಾಜ ಸಬನೀಸ ಸಮಾರಂಭದಅಧ್ಯಕ್ಷತೆ ವಹಿಸಿದ್ದರು 

ಪ್ರೌಡ ಶಾಲೆಯ ಮುಖ್ಯೋಪಾಧ್ಯಾಯರಾದ ಸಂಜಯ ಮಾಳಿ,ಡಾ,ಬಸವರಾಜ ಮೂಡಬಾಗಿಲ,ಸುಮಾ ಸೋಪ್ಪಿ,ಸುವರ್ಣಾ ಕಡಕೋಳ,ಜಯಶ್ರೀ ಉಡುಪಿ,ಜೊಗಾ ಶೆಟ್ಟರ,ಮಂಜುಳಾ ಜ್ಯೋತಿ,ಮಹಾಂತೇಶ ಹುಬ್ಬಳ್ಳಿ, ಸುರೇಂದ್ರ ಕಡಕೋಳ ಇನ್ನಿತರರುಇದ್ದರುಕವಿವ ಸಂಘದ ಮಾಜಿಕೋಶಾಧ್ಯಕ್ಷ ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು,ಶಿಕ್ಷಕ ಸುನೀಲ ಪಾಟೀಲ ನಿರೂಪಿಸಿದರು ಪ್ರವೀಣ ಪವಾರ ವಂದಿಸಿದರು 


ಸುದ್ದಿ ಓದಿ