ಶನಿ ಅಮವಾಸ್ಯೆ: ಮುನಿಸುವೃತ ಭಗವಾನರಿಗೆ ಚರಣಾಭೀಷೇಕ
ಶೇಡಬಾಳ: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಕಾಗವಾಡ ಹಾಗೂ ಮೈಸಾಳ ಗ್ರಾಮದ ಗಡಿಯಲ್ಲಿರುವ ಭಗವಾನ ಮಹಾವೀರ ವೃತಿ ಆಶ್ರಮದಲ್ಲಿ ಶನಿ ಅಮವಾಸ್ಯೆಯ ನಿಮಿತ್ಯವಾಗಿ ಮುನಿಸುವೃತ ಭಗವಾನರಿಗೆ ಪೂಜಾ ವಿಧಿ-ವಿಧಾನ ಹಾಗೂ ಚರಣಾಭೀಷೇಕ ಕಾರ್ಯಕ್ರಮಗಳು ಸಾವಿರಾರು ಶ್ರಾವಕ-ಶ್ರಾವಕಿಯರ ಉಪಸ್ಥಿತಿಯಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿತು.
ಶನಿವಾರ ದಿ. 27 ರಂದು ಭಗವಾನ ಮಹಾವೀರ ವೃತಿ ಆಶ್ರಮದ ವಿಶಾಲವಾದ ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಮುನಿಸುವೃತ ಭಗವಾನರಿಗೆ ಅನುಪ ಕುಬೇರ ಚೌಗುಲೆ, ಸಾಯಲಿ ಅನುಪ ಚೌಗುಲೆ, ದಂಪತಿಗಳು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಕಾರ್ಯಕ್ರಮದ ಅಂಗವಾಗಿ ಮುಂಜಾನೆ 5 ಗಂಟೆಗೆ ಮಂಗಲ ವಾದ್ಯಘೋಷ, 7 ಗಂಟೆಗೆ ಅಭಿಷೇಕ, 11 ಗಂಟೆಗೆ ಮುನಿಸುವೃತ ವಿಧಾನ, ಮಧ್ಯಾಹ್ನ 4 ಗಂಟೆಗೆ ಮುನಿಸುವೃತ ಭಗವಾನರಿಗೆ ಚರಣಾಭೀಷೇಕ ಕಾರ್ಯಕ್ರಮ ಹಾಗೂ ಸಾಯಂಕಾಲ 6 ಗಂಟೆಗೆ ಸಾಮುದಾಯಿಕ ಆರತಿ ಮತ್ತು ವಿಸರ್ಜನೆ ಕಾರ್ಯಕ್ರಮ ಜರುಗಿದವು.
ವಿಧಾನಾಚಾರ್ಯ ಪ್ರಶಾಂತ ಉಪಾಧ್ಯೆ ಹಾಗೂ ಅಶೋಕ ಉಪಾಧ್ಯೆ ಪೂಜಾ ವಿಧಿ-ವಿಧಾನಗಳನ್ನು ನೇರವೇರಿಸಿರು. ಚಿಂಚವಾಡದ ಸ್ವರಾಗ ಕಲಾಮಂಚದವರು ಸಂಗೀತ ಸಾಥ ನೀಡಿದರು. ಕಾರ್ಯಕ್ರಮ ಆಗಮಿಸಿದ ಭಕ್ತರಿಗೆ ಆಚಾರ್ಯ ಶೀತಲ ಸಾಗರ ಇಂಟರನ್ಯಾಸನಲ್ ಸ್ಕೂಲ್ನ ಅಧ್ಯಕ್ಷರಾದ ಸುಹಾಸ ಪಾಟೀಲ ಅವರಿಂದ ಅನ್ನಸಂತರೆ್ಣ ನಡೆಯಿತು. ಈ ಸಮಯದಲ್ಲಿ ಶ್ರೀ 108 ಭಗವಾನ ಮಹಾವೀರ ವೃತಿ ಆಶ್ರಮದ ಅಧ್ಯಕ್ಷರು, ನ್ಯಾಯವಾದಿಗಳಾದ ತಾತ್ಯಾಸಾಬ ಧೋತ್ರೆ, ಅನ್ನದಾನಿಗಳಾದ ಸುಹಾಸ ಪಾಟೀಲ, ಸುದೀರ ಹುದ್ದಾರ, ಅಪ್ಪಾಸಾಬ ಗೋಬಾಜೆ, ಅಣ್ಣಾಸಾಬ ಮಾಲಗಾಂವೆ, ಶೀಲತ ಜ್ಞಾನಕುಂಭು ಕೇಂದ್ರದ ಪದಾಧೀಕಾರಿಗಳು, ಸನ್ಮತಿ ಶೀತಲ ಜನಕಲ್ಯಾನ ಫೌಂಡೇಶನ್ನ ಪದಾಧೀಕಾರಿಗಳು ಸೇರಿದಂತೆ ಕಾಗವಾಡ ಹಾಗೂ ಮೈಸಾಳ ಮತ್ತು ಸುತ್ತ ಮುತ್ತಲಿನ ಗ್ರಾಮಗಳ ಸಾವಿರಾರು ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು.