ವಿದ್ಯುತ್ ಅವಘಡ ದಿಂದ ಶಾಮಿಯನ್ ಅಂಗಡಿ ಭಸ್ಮ
ಹೂವಿನ ಹಡಗಲಿ 16: ವಿದ್ಯುತ್ ಅವಘಡದಿಂದ ಶಾಮಿಯನ್ ಅಂಗಡಿ ಬೆಂಕಿಗೆ ಅಹುತಿಯಾದ ಘಟನೆ ತಾಲೂಕಿನ ಹೊಳಲು ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ಗ್ರಾಮದ ಮ್ಯೆಲಾರ ರಸ್ತೆಯಲ್ಲಿರುವ ಬಡಿಗೇರ ರವಿ ಮಾಲಿಕ ಅಂಗಡಿ ವಿದ್ಯುತ್ ಶಾರ್ಟ್ನ ಅವಘಡಕ್ಕೆ ಹೊಗೆ ಹೊತ್ತಿಕೊಂಡು ಬೆಂಕಿ ಆವರಿಸಿಕೊಂಡಿದ್ದು ಶಾಮಿಯನ್ ಅಂಗಡಿ ಭಾಗಶ ಸಂಪೂರ್ಣ ಸುಟ್ಟು ಭಸ್ಮವಾಗಿ ಲಕ್ಷಾಂತರ ರೂ ಮೌಲ್ಯದ ಪಾತ್ರೆಗಳು, ಶಾಮಿಯನ್ ಸಾಮಾಗ್ರಿಗಳು. ಪ್ಲಾಸ್ಟಿಕ್ ಕುರ್ಚಿಗಳು, ಬೆಂಕಿಗೆ ಆಹುತಿಯಾಗಿವೆ. ಬೆಂಕಿ ಆರಿಸಲು ಪ್ರಯತ್ನಿಸಿದರು ದಟ್ಟವಾದ ಹೊಗೆ ಆವರಿಸಿಕೊಂಡಿದೆ. ಅಗ್ನಿ ಶಾಮಕದಳದವರು ಬಂದರು ಪ್ರಯೋಜನವಾಗಿಲ್ಲ.